ವೀರಶೈವ ಎನ್ನುವುದು ಸೈದ್ಧಾಂತಿಕ ಹೆಸರು: ಶ್ರೀ ಶೈಲಶ್ರೀಗಳ ಅಭಿಮತ

| Published : Jul 04 2025, 11:50 PM IST

ವೀರಶೈವ ಎನ್ನುವುದು ಸೈದ್ಧಾಂತಿಕ ಹೆಸರು: ಶ್ರೀ ಶೈಲಶ್ರೀಗಳ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುವೀರಶೈವ ಎನ್ನುವುದು ಸೈಂದ್ಧಾಂತಿಕ ಹೆಸರಾದರೆ ಲಿಂಗಾಯತ ಎಂಬುದು ರೂಢಿಯಿಂದ ಬಂದಿದೆ. ಆದ್ದರಿಂದ ವೀರಶೈವ-ಲಿಂಗಾಯತರು ಯಾವುದೇ ಬೇಧ ಭಾವಗಳನ್ನು ಮಾಡಬಾರದು ಎಂದು ಆಂಧ್ರಪ್ರದೇಶದ ಶ್ರೀಶೈಲ ಪೀಠದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿ ಹೇಳಿದರು.

ಕಡೂರು ಕೆ.ಹೊಸಹಳ್ಳಿಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ನಿವಾಸದಲ್ಲಿ ಪಾದ ಪೂಜೆ

ಕನ್ನಡಪ್ರಭ ವಾರ್ತೆ, ಕಡೂರು

ವೀರಶೈವ ಎನ್ನುವುದು ಸೈಂದ್ಧಾಂತಿಕ ಹೆಸರಾದರೆ ಲಿಂಗಾಯತ ಎಂಬುದು ರೂಢಿಯಿಂದ ಬಂದಿದೆ. ಆದ್ದರಿಂದ ವೀರಶೈವ-ಲಿಂಗಾಯತರು ಯಾವುದೇ ಬೇಧ ಭಾವಗಳನ್ನು ಮಾಡಬಾರದು ಎಂದು ಆಂಧ್ರಪ್ರದೇಶದ ಶ್ರೀಶೈಲ ಪೀಠದ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾ ಸ್ವಾಮಿ ಹೇಳಿದರು.

ಶುಕ್ರವಾರ ಕಡೂರು ಕೆ.ಹೊಸಹಳ್ಳಿಯ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ನಿವಾಸದಲ್ಲಿ ಪಾದ ಪೂಜೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ವೀರಶೈವ ಧರ್ಮ ಉನ್ನತಿ, ಉಜ್ವಲ ಭವಿಷ್ಯ ವನ್ನು ಕಲ್ಪಿಸುವ ಮೂಲಕ ಸಮಾಜದ ಆಂತರಿಕ ಸಮಸ್ಯೆ ಸರಿಪಡಿಸುವ ಮತ್ತು ಜಾತಿ ಗಣತಿ ಸಂದರ್ಭದಲ್ಲಿ ಸ್ಪಷ್ಟ ಸಂದೇಶ ನೀಡುವ ದೃಷ್ಟಿಯಿಂದ ಜುಲೈ 21 ಮತ್ತು 22 ರಂದು ದಾವಣಗೆರೆ ನಗರದಲ್ಲಿ ವೀರಶೈವ ಪಂಚಾಚಾರ್ಯರು, ಶಿವಾಚಾರ್ಯರ ‘ಶೃಂಗ ಸಮ್ಮೇಳನ ವನ್ನು ಆಯೋಜಿಸಲಾಗಿದೆ. ನಾಡಿನ ಎಲ್ಲ ಮಠಾಧೀಶರು, ಸಮಾಜದ ಎಲ್ಲ ಭಕ್ತರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.ಭಾರತ ದೇಶ ಧರ್ಮ ಪ್ರಧಾನವಾದ ರಾಷ್ಟ್ರ, ಅನೇಕ ಧರ್ಮಗಳು ಪ್ರಾಚೀನ ಕಾಲದಿಂದಲು ಅಸ್ಥಿತ್ವ ಉಳಿಸಿ ಬೆಳೆಸಿಕೊಂಡು ಬರುತ್ತಿವೆ. ಪ್ರತಿಯೊಂದು ಧರ್ಮದ ಪ್ರಮುಖ ಉದ್ದೇಶ ಮನುಷ್ಯನ ಮನಸ್ಸಿಗೆ ಮತ್ತು ಬದುಕಿನಲ್ಲಿ ಶಾಂತಿ ಕರುಣಿಸುವುದೇ ಆಗಿದೆ. ವೀರಶೈವ-ಲಿಂಗಾಯತ ಧರ್ಮ ಕೂಡ ಈ ದೇಶದ ಪ್ರತಿಷ್ಠಿತ ಉತ್ತಮ ಮೌಲ್ಯಗಳನ್ನು ಹೊಂದಿದ ಸನಾತನ ಧರ್ಮವಾಗಿದೆ ಎಂದು ಪ್ರತಿಪಾದಿಸಿದರು. ಈ ಧರ್ಮದ ಸಂಸ್ಥಾಪಕ ಆಚಾರ್ಯರಾದ ಜಗದ್ಗುರು ಪಂಚಾಚಾರ್ಯರು ‘ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ’ ಎಂಬ ಸಂದೇಶ ನೀಡಿದರು. ಬಸವಾದಿ ಶಿವಶರಣರು ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸುವ ಸಂದೇಶ ನೀಡುವ ಮೂಲಕ ಮನುಕುಲ ಕಲ್ಯಾಣವನ್ನು ಸಾರಿದ್ದಾರೆ ಎಂದರು.ರಂಭಾಪುರಿ ಶಾಖಾ ಮಠ ಬೀರೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು, ಕೆ.ಹೊಸಹಳ್ಳಿಯ ಹಿರಿಯರಾದ ಎಚ್.ವಿ.ಗಿರೀಶ್, ಶೇಖರಪ್ಪ, ತಿಮ್ಮಯ್ಯ, ಸತೀಶ್, ಮುಂಡ್ರೆ ಗಿರಿರಾಜ್,ಕುಪ್ಪಾಳು ನಂಜುಂಡಾರಾದ್ಯ, ಎಂ.ಪಿ.ಶಶಿಧರ್, ರಾಜಶೇಖರಯ್ಯ, ಎಚ್.ಸಿ.ಸುಮಿತ್ರಾ, ಉಮಾ ಬಸವರಾಜ್, ಪುಷ್ಪಾ ಹಾಗೂ ಹೊಸಹಳ್ಳಿ ಭಕ್ತರು ಇದ್ದರು.4ಕೆಕೆಡಿಯು2.ಕಡೂರು ಪಟ್ಟಣದ ಕೆ.ಹೊಸಹಳ್ಳಿ ಎಚ್.ಎಂ.ಲೋಕೇಶ್ ಅವರ ನಿವಾಸಕ್ಕೆ ಶ್ರೀಶೈಲ ಪೀಠದ ಶ್ರೀಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಭೇಟಿ ನೀಡಿ ಆಶೀರ್ವಚನ ನೀಡಿದರು.