ಸಾರಾಂಶ
ವೀರಶೈವ ಮಹಾಸಭಾ ಜಿಲ್ಲಾ ಘಟಕ ಚುನಾವಣೆ
೩೧ ಸ್ಥಾನಗಳಿಗೆ ೭೫ ನಾಮಪತ್ರಗಳ ಸಲ್ಲಿಕೆಅಧ್ಯಕ್ಷ ಸ್ಥಾನಕ್ಕೆ ೧೨ ಮಂದಿ ಪೈಪೋಟಿ
ಜು. ೨೧ ಎಂದು ಮತದಾನ ನಡೆದು ಅಂದೇ ಫಲಿತಾಂಶ ಚಾಮರಾಜನಗರಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ ಇಂದು ಒಟ್ಟಾರೆ ೩೧ ಸ್ಥಾನಗಳಿಗೆ ೭೫ ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ೧೨ ಮಂದಿ ನಾಮಪತ್ರ ಸಲ್ಲಿಸುವ ಮೂಲಕ ತೀವ್ರ ಪೈಪೋಟಿ ಏರ್ಪಟ್ಟಿದೆ. ನಗರದ ಸತ್ತಿ ರಸ್ತೆಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಜೂ. ೨೭ ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ೩೧ ಸ್ಥಾನಗಳ ಪೈಕಿ ಅಧ್ಯಕ್ಷ ಸ್ಥಾನಕ್ಕೆ ೧೨ ಮಂದಿ, ೨೦ ಸಾಮಾನ್ಯ ನಿರ್ದೇಶಕ ಸ್ಥಾನಕ್ಕೆ ೪೬ ಮಂದಿ ಮಹಿಳಾ ವಿಭಾಗದ ೧೦ ಸ್ಥಾನಕ್ಕೆ ೧೭ ಮಂದಿ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಡಿ.ಕೆ. ದೊರೆಸ್ವಾಮಿ, ಸಹಾಯಕ ಚುನಾವಣಾಧಿಕಾರಿಗಳಾದ ಎಂ. ಗೌರಿಶಂಕರ್, ಡಿ.ಎನ್. ಮಹದೇವಪ್ಪ, ಶಿವಕುಮಾರಸ್ವಾಮಿ ತಿಳಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹೆಗ್ಗವಾಡಿ ಪುರ ಎನ್‌ರಿಎಚ್ ಮಹದೇವಸ್ವಾಮಿ, ಬೋಗಾಪುರ ಡಿ. ನಾಗೇಂದ್ರ, ಮುಡ್ಲುಪುರ ಎಂ. ಮಂಜೇಶ್, ಅಲೂರು ಮಲ್ಲು, ಬಸವರಾಜು(ಕಂಠಿ), ಕರಿನಂಜನಪುರ ಕೆ. ವೀರಭದ್ರಸ್ವಾಮಿ, ಮೂಡ್ಲಪುರ ಸತೀಶ್, ಮೂಡ್ಲುಪುರ ನಂದೀಶ್, ಕಾವುದವಾಡಿ ಟಿ. ಗುರು, ಶಿವಪುರ ಲೋಕೇಶ್, ಹಂಗಳ ಎಸ್. ನಂಜಪ್ಪ, ಗುಂಡ್ಲುಪೇಟೆ ಸುಜೇಂದ್ರ ಉಮೇದುವಾರಿಗೆ ಸಲ್ಲಿಸಿದ್ದಾರೆ. ನಾಮಪತ್ರಗಳ ಪರಿಶೀಲನೆ ಜು. ೫ ರ ಶುಕ್ರವಾರ ನಡೆಯಲಿದ್ದು, ಜು.೮ ಸೋಮವಾರ ನಾಮಪತ್ರಗಳನ್ನು ವಾಪಸ್ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಂತಿಮವಾಗಿ ಜು. ೨೧ ಎಂದು ಮತದಾನ ನಡೆದು ಅಂದೇ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ----------