ವೀರಶೈವ ಮಹಾಸಭಾ ಒಂದು ಜಾತಿಗೆ ಸೀಮಿತವಲ್ಲ: ಗುರುಕುಮಾರ್ ಎಸ್.ಪಾಟೀಲ್

| Published : Jul 25 2024, 01:15 AM IST

ವೀರಶೈವ ಮಹಾಸಭಾ ಒಂದು ಜಾತಿಗೆ ಸೀಮಿತವಲ್ಲ: ಗುರುಕುಮಾರ್ ಎಸ್.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ವತಿಯಿಂದ ಅಧ್ಯಕ್ಷರಾಗಿ ಆಯ್ಕೆಯಾದ ಗುರುಕುಮಾರ ಎಸ್.ಪಾಟೀಲ್ ಅವರನ್ನು ಸಂಘದ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸೊರಬ

ಅಖಿಲ ಭಾರತ ವೀರಶೈವ ಮಹಾ ಸಭಾ ಒಂದು ಜಾತಿಗೆ ಸೀಮಿತವಾಗಿಲ್ಲ. ಸರ್ವ ಜನಾಂಗಗಳ ಒಳಿತಿಗೆ ಶ್ರಮಿಸುವ ವ್ಯಕ್ತಿತ್ವವನ್ನು ರೂಢಿಸಿಕೊಂಡಿದೆ. ಹಾಗಾಗಿ ತಾಲೂಕಿನಲ್ಲಿ ಪ್ರತಿಯೊಂದು ಜಾತಿ-ಜನಾಂಗದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಅಖಿಲ ಭಾರತ ವೀರ ಶೈವ ಮಹಾ ಸಭಾದ ತಾಲೂಕು ಘಟಕದ ನೂತನ ಅಧ್ಯಕ್ಷ ಗುರುಕುಮಾರ್ ಎಸ್.ಪಾಟೀಲ್ ಹೇಳಿದರು.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಸಭೆಯಲ್ಲಿ ಭಾಗವಹಿಸಿ ನಂತರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

೧೨ನೇ ಶತಮಾನದ ಅನುಭವ ಮಂಟಪದ ಮೂಲಕ ಸರ್ವ ಜನಾಂಗಗಳ ಹಿತ ಕಾಯಲು ಪಣತೊಟ್ಟ ಜಗಜ್ಯೋತಿ ಬಸವೇಶ್ವರ ಮತ್ತು ಇತರೆ ಶರಣರ ಆದರ್ಶ ಗಳನ್ನು ಪಾಲಿಸಿಕೊಂಡು ವೀರಶೈವ ಸಮಾಜವನ್ನು ಬೆಳೆಸಲಾಗುವುದು. ಎಲ್ಲಾ ಸಮಾಜದ ಮುಖಂಡರ ವಿಶ್ವಾಸದೊಂದಿಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸ ಲಾಗುವುದು ಇದಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಹಕಾರ ಮತ್ತು ಬೆಂಬಲ ಅಗತ್ಯವಾಗಿದೆ ಎಂದರು.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು ೨೫ ಸಾವಿರ ಷೇರುದಾರ ಸದಸ್ಯರನ್ನು ಕ್ರೊಢೀಕರಿಸಿ, ಮೊಬಲಗನ್ನು ರಾಜ್ಯ ಘಟಕ್ಕೆ ಸಂದಾಯ ಮಾಡುವ ಮೂಲಕ ತಾಲೂಕಿನ ಸಂಘಟನೆ ಬಲಪಡಿಸುವುದರ ಜತೆಗೆ ಸಂಘದ ಉನ್ನತಿಗೆ ಶ್ರಮಿಸಲಾಗುವುದು. ಪಟ್ಟಣದಲ್ಲಿ ವಿವಿಧ ಜನಾಂಗಗಳ ಸಮುದಾಯ ಭವನ ಕ್ಕಾಗಿ ೫೧ ಎಕರೆ ಜಮೀನು ಕಾಯ್ದಿರಿಸಲಾಗಿದೆ. ಅದರಲ್ಲಿ ವೀರಶೈವ ಜನಾಂಗಕ್ಕೆ ೩ ಎಕರೆ ೨೦ ಗುಂಟೆ ಜಾಗವನ್ನು ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗಿದೆ ಎಂದರ ಅವರು, ಇತ್ತೀಚೆಗೆ ನಡೆದ ಸಂಘದ ಚುನಾವಣೆಯ ನಂತರ ರಾಜಶೇಖರ ಗೌಡ ಹೊಸಬಾಳೆ, ಕೆ.ವಿ.ಗೌಡ, ರೇಖಾ ಜಗದೀಶ, ಸುಮತಾ ದಿನೇಶ್, ಸವಿತಾ ನಾಗರಾಜಗೌಡ ಕತವಾಯಿ ಅವರನ್ನು ಜಿಲ್ಲಾ ಸದಸ್ಯರನ್ನಾಗಿ ಆಯ್ಕೆ ಮಾಡಿಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ತಾಲೂಕ ಘಟಕದ ಸದಸ್ಯರುಗಳಾದ ಶಿವಯೋಗಿ, ಜಯಮಾಲಾ, ಮಾಲಾ, ರೇಖಾ, ರಜನಿ, ಪ್ರದೀಪ್‌ ಕುಮಾರ್, ಲಿಂಗರಾಜಗೌಡ, ಶಶಿಧರ, ಚನ್ನಬಸಪ್ಪ ಗೌಡ, ಶಿವಣ್ಣಗೌಡ, ಸತೀಶ್ ಗೌಡ್ರು, ಸೋಮಪ್ಪ ಸಾಹುಕಾರ್, ವಿಜೇಂದ್ರ ಗೌಡ, ಸಮಾಜದ ಪ್ರಮುಖರಾದ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಷಣ್ಮುಖಗೌಡ ಮೊದಲಾದವರಿದ್ದರು.