ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮರ ಶೌರ್ಯ ಹೆಣ್ಣು ಮಕ್ಕಳಿಗೆ ಪ್ರೇರಕ ಶಕ್ತಿ: ತ್ರಿವೇಣಿ

| Published : Oct 26 2024, 01:02 AM IST

ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮರ ಶೌರ್ಯ ಹೆಣ್ಣು ಮಕ್ಕಳಿಗೆ ಪ್ರೇರಕ ಶಕ್ತಿ: ತ್ರಿವೇಣಿ
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನಮ್ಮ ಬ್ರಿಟಿಷರನ್ನು ಆರಂಭದಲ್ಲಿಯೇ ಭಾರತ ಬಿಟ್ಟು ಓಡಿಸಲು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿಸಿದರು. ಅಂದಿನ ನಮ್ಮಲ್ಲಿನ ಒಡಕು, ಸ್ವಾರ್ಥ, ಅಧಿಕಾರದ ಆಸೆಗೆ ಚೆನ್ನಮ್ಮ ಬಲಿಪಶುವಾಗಿ ನಾಡಿಗಾಗಿ ಪ್ರಾಣತೆತ್ತ ಧೀಮಂತೆಯಾದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ನಾಡಿಗಾಗಿ ಜೀವವನ್ನೇ ಮುಡಿಪಾಗಿಟ್ಟ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಶೌರ್ಯ ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಕ ಶಕ್ತಿಯಾಗಬೇಕಿದೆ ಎಂದು ಸ್ಪಂದನಾ ಪೌಂಢೇಷನ್ ಟ್ರಸ್ಟಿ ತ್ರಿವೇಣಿ ಹೇಳಿದರು.

ಪಟ್ಟಣದಲ್ಲಿ ಸ್ಪಂದನಾ ಪೌಂಢೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಿತ್ತೂರರಾಣಿ ಚೆನ್ನಮ್ಮ ಜನ್ಮ ದಿನಾಚರಣೆಯಲ್ಲಿ ಮಾತನಾಡಿ, 200 ವರ್ಷಗಳ ಹಿಂದೆ ಕಿತ್ತೂರು ಸಂಸ್ಥಾನ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮೊದಲ ದಿಟ್ಟ ಮಹಿಳೆ ಚೆನ್ನಮ್ಮ ಎಂದರು.

ಚೆನ್ನಮ್ಮ ಬ್ರಿಟಿಷರನ್ನು ಆರಂಭದಲ್ಲಿಯೇ ಭಾರತ ಬಿಟ್ಟು ಓಡಿಸಲು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿಸಿದರು. ಅಂದಿನ ನಮ್ಮಲ್ಲಿನ ಒಡಕು, ಸ್ವಾರ್ಥ, ಅಧಿಕಾರದ ಆಸೆಗೆ ಚೆನ್ನಮ್ಮ ಬಲಿಪಶುವಾಗಿ ನಾಡಿಗಾಗಿ ಪ್ರಾಣತೆತ್ತ ಧೀಮಂತೆಯಾದರು ಎಂದರು.

ಈಕೆಯ ಶೌರ್ಯವನ್ನು ಹೆಣ್ಣು ಮಕ್ಕಳು, ಮಹಿಳೆಯರು ಆತ್ಮಸ್ಥೈರ್ಯದ ಸಂಕೇತವಾಗಿ ಸ್ವೀಕರಿಸಿದರೆ ನೆಮ್ಮದಿಯ ಬದುಕು ಕಾಣಬಹುದು. ಆದರೆ, ನಮ್ಮಲ್ಲಿ ಸ್ವಾರ್ಥ ತುಂಬಿ ಯುವಕರು ತಪ್ಪು ದಾರಿಯಲ್ಲಿ ನಡೆಯುತ್ತಿದ್ದಾರೆ ಬೇಸರ ವ್ಯಕ್ತಪಡಿಸಿದರು.

ಜಾಗೃತರಾಗಿ ನಾಡು, ನುಡಿಗಾಗಿ ಕಿಂಚಿತ್ತಾದರೂ ನಿಸ್ವಾರ್ಥ ಭಾವನೆ ಮೈಗೂಢಿಸಿಕೊಳ್ಳಬೇಕಿದೆ. ಚೆನ್ನಮ್ಮನ ನೆಚ್ಚಿನ ಭಂಟ ಸಂಗೊಳ್ಳಿ ರಾಯಣ್ಣನ ಮಾತೃ ಪ್ರೇಮ, ದೇಶಪ್ರೇಮ ಇಂದಿನ ಯುವಕರಿಗೆ ಮಾದರಿಯಾಗಬೇಕಿದೆ. ದೇಶ ಪ್ರೇಮ, ಸ್ವದೇಶಿ ವಸ್ತು ಬಳಕೆ, ಉನ್ನತ ವ್ಯಾಸಂಗ ಮಾಡಿ ನಮ್ಮ ದೇಶದಲ್ಲಿಯೇ ಉತ್ತಮ ಸೇವೆ ಮಾಡುವ ದೃಢತೆಯನ್ನು ಮೈಗೂಢಿಸಿಕೊಂಡರೆ ಚೆನ್ನಮ್ಮರಂತಹ ಮಹಾನೀಯರ ಆತ್ಮಕ್ಕೆಗೌರವ ಸಲ್ಲಿಸಿದಂತೆ ಎಂದರು.

ಇದೇ ವೇಳೆ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಿಸಲಾಯಿತು. ಕವಿತಾ, ಮಹೇಂದ್ರ ಇದ್ದರು.