ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿಯೂ ಉನ್ನತ ಶಿಕ್ಷಣವನ್ನು ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು.

ಹೊಸಪೇಟೆ: ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘವು ಈ ಪ್ರಾಂತ್ಯದಲ್ಲಿ ಶೈಕ್ಷಣಿಕವಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ. ಪಿಡಿಐಟಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಹೊರಹೊಮ್ಮುತ್ತಿದ್ದಾರೆ ಎಂದು ಕವಿತಾ ಎಸ್. ಮನ್ನಿಕೇರಿ ಹೇಳಿದರು.

ನಗರದ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಿಂಚನ ​2026ರ ಅಂಗವಾಗಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಎಂಜಿನಿಯರಿಂಗ್ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿಯೂ ಉನ್ನತ ಶಿಕ್ಷಣವನ್ನು ಹೊಂದಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಅಭ್ಯಾಸದಿಂದ ಯಶಸ್ಸನ್ನು ಸಾಧಿಸಬಹುದು ಎಂದು ಅವರು ಕಿವಿಮಾತು ಹೇಳಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯ ಸದಸ್ಯ ಡಾ.ಕರುಣಾಕರ ರೈ ಬಿ. ಮಾತನಾಡಿ, ಎಐ (ಕೃತಕ ಬುದ್ಧಿಮತ್ತೆ) ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ. ಎಐ ಬಂದಿದೆ ಎಂದು ಯಾರೂ ಆತಂಕಗೊಳ್ಳಬಾರದು. ಎಐನಿಂದ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಆದರೆ ವಿದ್ಯಾರ್ಥಿಗಳು ಎಐನ್ನು ಪಳಗಿಸುವ ಚಾಕಚಕ್ಯತೆ ಹೊಂದಿರಬೇಕು ಎಂದು ಹೇಳಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜೆಎಸ್‌ಡಬ್ಲು ಸ್ಟೀಲ್ಸ್ ಮಾಜಿ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ, ಹೊಸಪೇಟೆಯ ಎಂ.ಎಸ್.ಪಿ.ಎಲ್ ನ ಕಾರ್ಪೊರೇಟ್ ಕಮ್ಯುನಿಕೇಶನ್ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಪ್ರಭುದೆವಪ್ಪ, ಬಲ್ಡೊಟಾ ಗ್ರೂಪ್‌ನ ಉಪಾಧ್ಯಕ್ಷ ಎಚ್.ಕೆ. ರಮೇಶ್ ಸಭೆಯಲ್ಲಿ ಮಾತನಾಡಿದರು.

ಪಿಡಿಐಟಿಯ ಆಡಳಿತ ಮಂಡಳಿ ಅಧ್ಯಕ್ಷ ಕಲ್ಗುಡಿ ಮಂಜುನಾಥ್, ಪಿಡಿಐಟಿಯ ಆಡಳಿತ ಮಂಡಳಿಯ ಸದಸ್ಯರಾದ ಐ. ಎನ್. ಸಂಗನಬಸಪ್ಪ, ಅನಿಲ್ ಆರ್ ಜವಳಿ, ಬಿ. ಚಂದ್ರಮೌಳಿ, ಗುಡೆಕೋಟೆ ನಾಗರಾಜ್, ಮೆಟ್ರಿ ಮಲ್ಲಿಕಾರ್ಜುನ, ಕೋರಿ ಶೆಟ್ರು ನಿಂಗಪ್ಪ, ಕುಮಾರಸ್ವಾಮಿ ಭಾಗವಹಿಸಿದ್ದರು.

ಸಮಾರಂಭದಲ್ಲಿ ಆರು ವಿಭಾಗದ ಪ್ರತಿಭಾವಂತ ಟಾಪರ್ಸ್‌ಗಳಾದ ಮ್ಯೆಕಾನಿಕಲ್ ವಿಭಾಗದ ಕು.ಜಹೀರ್ ಅಹಮದ್ ಖಾನ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಕು.ಎಚ್. ಎನ್‌. ಸಂಜಯ್, ಗಣಕಯಂತ್ರ ವಿಭಾಗದ ಕು.ಸಮೀನಾ ಫಾತಿಮಾ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಕು.ಆಫ್ರೀನ್ ಎಸ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಕು.ಕೌಸರ್ ಜಬೀನ್, ಹಾಗೂ ಎಂ.ಬಿ.ಎ. ವಿಭಾಗದ ಕು. ಜೊಯ್ ಪ್ರಿಯ ಬಿ ಎಂಬ ವಿದ್ಯಾರ್ಥಿಗಳಿಗೆ ಎಂ.ಎಸ್.ಪಿ.ಎಲ್. ಸಂಸ್ಥೆಯಿಂದ ಒಂದು ಲಕ್ಷ ರೂ ಮೌಲ್ಯದ ಚಿನ್ನದ ಪದಕಗಳನ್ನು ನೀಡಿ ಪುರಸ್ಕರಿಸಲಾಯಿತು.

ವೀ.ವಿ. ಸಂಘದಿಂದ ಎಲ್ಲ ವಿಭಾಗದ ಅತ್ಯಂತ ಹೆಚ್ಚು ಶ್ರೇಣಿಯಲ್ಲಿ ಉತ್ತೀರ್ಣಗೊಂಡ 6 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ಮೊತ್ತದ ನಗದು ಬಹುಮಾನ, ಇತರ ದತ್ತಿ ಬಹುಮಾನ ವಿತರಿಸಲಾಯಿತು.

ಡಾಕ್ಟರೇಟ್ ಪಡೆದ ಕಾಲೇಜಿನ ನಾಲ್ಕು ಉಪನ್ಯಾಸಕರಾದ ಡಾ.ಚಂದ್ರಕುಮಾರ್ ಚಕ್ರಸಾಲಿ, ಡಾ. ಶಮಿತಾ ಎಚ್ ಎಂ, ಡಾ. ಮಾಲತೇಶ್ ಕೆ., ಡಾ.ರವಿಕುಮಾರ್ ಎಸ್.ಪಿ. ಅವರನ್ನು ಸನ್ಮಾನಿಸಲಾಯಿತು. ಅಪ್ರಮೇಯ ದಿಗ್ಗಾವಿ ಪ್ರಾರ್ಥಿಸಿದರು. ಡಾ.ಪಾರ್ವತಿ ಕಡ್ಲಿ ಅತಿಥಿಗಳನ್ನು ಪರಿಚಯಿಸಿದರು, ಡಾ.ವಸಂತಮ್ಮ ಎಚ್ ಸ್ವಾಗತಿಸಿದರು,

ಕಾಲೇಜಿನ ಪ್ರಾಂಶುಪಾಲ ಡಾ.ಯು.ಎಂ. ರೋಹಿತ್ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದ ಸಂಯೋಜಕ ಡಾ.ರವಿಕುಮಾರ್ ವಂದಿಸಿದರು.