ಸಾರಾಂಶ
ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಮುಧೋಳ ಠಾಣೆ ಪೊಲೀಸರು 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕನ್ನಡ ಪ್ರಭ ವಾರ್ತೆ ಮುಧೋಳ
ದ್ವಿಚಕ್ರ ವಾಹನ ಕಳ್ಳನನ್ನು ಬಂಧಿಸಿರುವ ಮುಧೋಳ ಠಾಣೆ ಪೊಲೀಸರು 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇಲ್ಲಿನ ಮುಧೋಳ ಸಾಯಿ ನಗರದ ನಿವಾಸಿ ನಿಂಗರಾಜ ಅರ್ಜುನ ಬಿಸರಡ್ಡಿ ಬಂಧಿತ ಆರೋಪಿ. ಬಸವನಗರದ ನಿವಾಸಿ ಪ್ರಕಾಶ ಕೇದಾರಿ ಯರಗಟ್ಟಿ ಎಂಬುವವರು ಬೈಕ್ ಕಳ್ಳತನದ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ಮುಧೋಳ, ಲೋಕಾಪುರ, ಸಾವಳಗಿ, ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಜಮಖಂಡಿ ಡಿವೈಎಸ್ಪಿ ಶಾಂತವೀರ ಇ ಹೇಳಿದರು.
ಪ್ರಕರಣ ಭೇದಿಸಿದ ಮುಧೋಳ ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐ ಅಜೀತಕುಮಾರ ಹೊಸಮನಿ, ಕ್ರೈಂ ಪಿಎಸ್ಐ ಎಸ್.ಬಿ. ಮಾಂಗ, ಪೊಲೀಸ್ ಸಿಬ್ಬಂದಿ ಆರ್.ಬಿ. ಕಟಗೇರಿ, ಬೀರಪ್ಪ ಡಿ.ಕುರಿ, ಹಣಮಂತ ಮಾದರ, ಮಾರುತಿ ದಳವಾಯಿ, ದಾದಾಪೀರ್ ಅತ್ರಾವತ್, ಎಸ್.ವೈ. ಐದಮನಿ, ಟಿ.ಎಸ್. ಹಿರಲಕ್ಕಿ, ತಂಡದವರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದು, ಬಹುಮಾನ ಘೋಷಿಸಿದ್ದಾರೆ.