ಸಾರಾಂಶ
ವಾಹನ ಕಳ್ಳನನ್ನು ಬಂಧಿಸಿರುವ ಅಮೀನಗಡ ಪೊಲೀಸರು ಬಂಧಿತ ನಿಂದ ಒಂದು ಬೊಲೆರೋ ವಾಹನ, ದ್ವಿಚಕ್ರವಾಹನ, ಸೋಲಾರ್ ಮೋಟಾರ್ ಪಂಪಸೆಟ್ ಸೇರಿ ₹5.85 ಲಕ್ಷ ಮೊತ್ತದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಅಮೀನಗಡ
ವಾಹನ ಕಳ್ಳನನ್ನು ಬಂಧಿಸಿರುವ ಅಮೀನಗಡ ಪೊಲೀಸರು ಬಂಧಿತ ನಿಂದ ಒಂದು ಬೊಲೆರೋ ವಾಹನ, ದ್ವಿಚಕ್ರವಾಹನ, ಸೋಲಾರ್ ಮೋಟಾರ್ ಪಂಪಸೆಟ್ ಸೇರಿ ₹5.85 ಲಕ್ಷ ಮೊತ್ತದ ಸಾಮಗ್ರಿ ವಶಪಡಿಸಿಕೊಂಡಿದ್ದಾರೆ.ಕಮತಗಿ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಬೊಲೆರೋ ಕಳ್ಳತನವಾಗಿದೆ ಎಂದು ಬೆಂಗಳೂರು ಮೂಲದ ರವಿ ವೆಂಕಟಾಚಲಯ್ಯ ಎಂಬ ವಾಹನದ ಚಾಲಕ ಅಮೀನಗಡ ಪೋಲೀಸ್ ಠಾಣೆಯಲ್ಲಿ ಮಾ.15 ರಂದು ದೂರು ನೀಡಿದ್ದರು.
ಅಮೀನಗಡ ಪಿಎಸ್‌ಐ ಜ್ಯೋತಿ ವಾಲಿಕಾರ, ವೈ.ಎಚ್. ಪಠಾಣ ನೇತೃತ್ವದಲ್ಲಿ ಒಂದು ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯ ತಂಡದಲ್ಲಿ, ಎಎಸ್‌ಐ ವಿ..ವೈ. ಪಾಟೀಲ, ಆನಂದ ಮನ್ನಿಕಟ್ಟಿ, ಸುರೇಶ ಆಲೂರ, ವೈ.ಎಸ್. ಬೋಳಿ, ಮನೋಹರ ಪತ್ತಾರ, ರಮೇಶ ಗಣಿ, ಸೋಮು ವಿಟ್ಲಾಪುರ ಭಾಗಿಯಾಗಿದ್ದರು.