ಸಾರಾಂಶ
ಹಾಸನ: ಶ್ರೀ ಹಾಸನಾಂಬ ದೇವಿಯವರ ದೇವಸ್ಥಾನದ ಬಾಗಿಲು ತೆರೆದಿರುವುದರಿಂದ ಹಾಸನಾಂಬ ದೇವಿಯ ದರ್ಶನಕ್ಕಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ವಾಹನಗಳಲ್ಲಿ ಆಗಮಿಸುವುದರಿಂದ ಹಾಸನ ನಗರದಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.
ಹಾಸನ ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆ ಕಲ್ಲಿಸುವ ಸಂಬಂಧ ಅ.೨೪ ರಿಂದ ನ.೩ರ ಮಧ್ಯರಾತ್ರಿ ೧೨ ಗಂಟೆಯವರೆಗೆ ಹಾಸನ ನಗರದೊಳಗೆ ಎಲ್ಲಾ ರೀತಿಯ ಭಾರಿ ವಾಹನಗಳ (ಲಾರಿ/ಗೂಡ್ಸ್) ಸಂಚಾರ ನಿರ್ಬಂಧಿಸಿ ಬದಲಿ ಮಾರ್ಗವಾಗಿ ಹಾಸನ ಬೈಪಾಸ್ ರಸ್ತೆ ಮತ್ತು ರಿಂಗ್ ರಸ್ತೆಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಾಲಯಕ್ಕೆ ಶುಕ್ರವಾರ ಬ್ರಹ್ಮಾಂಡ ಗುರೂಜಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನವೀಕರಣಕ್ಕೆ ಅರ್ಜಿ ಅಹ್ವಾನಹಾಸನ: ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದನ್ವಯ, ೨೦೨೫-೨೬ನೇ ಶೈಕ್ಷಣಿಕ ಸಾಲಿನ ಹಾಸನ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಹಾಸನ ಜಿಲ್ಲೆಯಲ್ಲಿ ಹೊಸದಾಗಿ ವಿದ್ಯಾಲಯವನ್ನು ಪ್ರಾರಂಭಿಸಲು ಇಚ್ಛಿಸಿರುವ ಸಂಘ-ಸಂಸ್ಥೆಗಳಿಂದ ಮತ್ತು ಈಗಾಗಲೇ ಸಂಯೋಜಿತಗೊಂಡಿರುವ ವಿದ್ಯಾಲಯಗಳಿಂದ ಸ್ನಾತಕ, ಸ್ನಾತಕೋತ್ತರ ಕೋರ್ಸುಗಳಿಗೆ ಮುಂದುವರಿಕೆ, ವಿಸ್ತರಣೆ, ಹೊಸ ಕೋರ್ಸು, ಹೊಸ ವಿಷಯ ಪ್ರವೇಶ ಮಿತಿ ಹೆಚ್ಚಳ, ಶಾಶ್ವತ ಸಂಯೋಜನೆ ನವೀಕರಣ ಸೇರಿದಂತೆ ವಿವಿಧ ರೀತಿಯ ಸಂಯೋಜನೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಆನ್‌ಲೈನ್ ಮೂಲಕ ಸಂಯೋಜನಾ ಅರ್ಜಿ ಸಲ್ಲಿಸುವುದಕ್ಕಾಗಿ ನಿಗದಿಪಡಿಸಲಾದ ವೇಳಾಪಟ್ಟಿ ಪ್ರಾರಂಭ ದಿನ ಕೊನೆಯ ದಿನ ದಂಡ ರಹಿತ ಶುಲ್ಕದೊಂದಿಗೆ ಸಂಯೋಜನಾ ಅರ್ಜಿ ಸಲ್ಲಿಸಲು ನ.೧೧ ರಂದು ಕೊನೆಯ ದಿನ. ೨೦,೬೫೦ ರು, ದಂಡ ಶುಲ್ಕದೊಂದಿಗೆ ಸಂಯೋಜನಾ ಅರ್ಜಿ ಸಲ್ಲಿಸಲು ೧೫ ರಂದು ಕೊನೆಯ ದಿನ ಎಂದು ಪ್ರಕಟಣೆ ತಿಳಿಸಿದೆ.