ಸಾರಾಂಶ
ಕನಕಪುರ: ದುಶ್ಚಟಗಳಿಗೆ ದಾಸರಾಗಿದ್ದ ವೇಮನರ ಮನಪರಿವರ್ತನೆಗೊಂಡು ಸಮಾಜವನ್ನು ತಿದ್ದಿದರು ಎಂದು ಸಾಮಾಜಿಕ ಭದ್ರತಾ ಯೋಜನೆ ಶಿರಸ್ತೇದಾರ್ ವಸಂತ ತಿಳಿಸಿದರು. ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದುಶ್ಟಟಗಳನ್ನು ಮೈಗೂಡಿಸಿಕೊಂಡಿದ್ದ ವೇಮನರು, ತಪ್ಪಿನ ಅರಿವಾಗಿ ದುಶ್ಚಟಗಳಿಗೆ ದಾಸರಾಗಬೇಡಿ. ಭೂಮಿಯ ಮೇಲೆ ಯಾವುದು ಶಾಶ್ವತವಲ್ಲ ಎಂಬ ಸಂದೇಶ ಸಾರಿದರು ಎಂದರು. ನಗರದ ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ವೇಮನರು 15 ಸಾವಿರಕ್ಕೂಹೆಚ್ಚು ವಚನಗಳನ್ನು ರಚಿಸಿ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು. ಸಾಹಿತಿ ಕೂಗಿ ಗಿರಿಯಪ್ಪ ಮಾತನಾಡಿ, ಆಂಧ್ರಪ್ರದೇಶದ ಮೂಲದವರಾದ ವೇಮನರು ತಮ್ಮ ವಚನಗಳ ಮೂಲಕ ಸಮಾಜದ ಕಣ್ಣು ತೆರೆಸಿದರು. ಇವರು ರಚಿಸಿದ ಕವಿತೆಗಳು 14 ಭಾಷೆಗಳಿಗೆ ಭಾಷಾಂತರಗೊಂಡಿವೆ. ವೇಮನರು ಇಡೀ ಜಗತ್ತಿಗೆ ತತ್ವಜ್ಞಾನಿಯಾಗಿ, ಗುರುವಾಗಿ, ಹಿತೈಷಿಯಾಗಿ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಜೀವನದಲ್ಲಿ ಯಾವುದು ಶಾಶ್ವತವಲ್ಲ. ಎಲ್ಲವೂ ಕ್ಷಣಿಕ ಆಧ್ಯಾತ್ಮಿಕ ಕಡೆಗೆ ನಾವೆಲ್ಲರೂ ಸಾಗಬೇಕು ಎಂಬ ಸಂದೇಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಮಹನೀಯರ ಆಚರಣೆಗಳಿಗೆ ಮೌಲ್ಯ ಬರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 01:ಕನಕಪುರ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವೇಮನರ ಜಯಂತಿ ಕಾರ್ಯಕ್ರಮದಲ್ಲಿ ಶಿರಸ್ತೇದಾರ್ ವಸಂತ ವೇಮನರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್, ಸಾಹಿತಿ ಕೂಗಿ ಗಿರಿಯಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.