ತಾಲೂಕಿನ ಬೆಳಕೆಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ೨ ದಿನಗಳ ಕಾಲ ನಡೆದ ವೆಂಕಟೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀ ಪಶುಪತಿ ಸೇನಾ ತಂಡವು ಕಿಟ್ಟ ಇಲೆವೆನ್ಸ್‌ ತಂಡವನ್ನು ೧೪ ರನ್‌ಗಳಿಂದ ಸೋಲಿಸಿ ₹೨೫,೫೫೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಭಟ್ಕಳ

ತಾಲೂಕಿನ ಬೆಳಕೆಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ೨ ದಿನಗಳ ಕಾಲ ನಡೆದ ವೆಂಕಟೇಶ್ವರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀ ಪಶುಪತಿ ಸೇನಾ ತಂಡವು ಕಿಟ್ಟ ಇಲೆವೆನ್ಸ್‌ ತಂಡವನ್ನು ೧೪ ರನ್‌ಗಳಿಂದ ಸೋಲಿಸಿ ₹೨೫,೫೫೫ ಸಾವಿರ ನಗದು ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಕಿಟ್ಟ ಇಲೆವೆನ್ಸ್‌ ತಂಡವು ₹೧೮,೫೫೫ ನಗದು ಹಾಗೂ ಟ್ರೋಫಿ ಪಡೆಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀ ಪಶುಪತಿ ಸೇನಾ ತಂಡವು ೮ ಓವರುಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೦೭ರನ್‌ ಗಳಿಸಿತು. ಕಿಟ್ಟ ಬಾಯ್ಸ ತಂಡವು ೮ ವಿಕೆಟ್ ನಷ್ಟಕ್ಕೆ ೯೪ರನ್ನು ಗಳಿಸಿ ೧೪ ರನ್ನುಗಳಿಂದ ಸೋಲು ಅನುಭವಿಸಿತು. ಪಂದ್ಯಾಟದಲ್ಲಿ ಒಟ್ಟು ಆಯ್ದ ೬ ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿಯ ಶ್ರೇಷ್ಠ ಆಟಗಾರನಾಗಿ ಶ್ರಿ ಪಶುಪತಿ ತಂಡದ ನವೀನ ನಾಯ್ಕ ಪ್ರಶಸ್ತಿ ಪಡೆದರು. ಉತ್ತಮ ಎಸೆತಗಾರನಾಗಿ ಶ್ರೀ ವೆಂಕಟೆಶ್ವರ ಇಲೆವನ್ಸ್‌ ತಂಡದ ರವಿ ನಾಯ್ಕ, ಉತ್ತಮ ಬ್ಯಾಟ್ಸಮನ್ ಆಗಿ ಕಿಟ್ಟ ಬಾಯ್ಸ ತಂಡದ ಸಚಿನ್ ನಾಯ್ಕ ಪ್ರಶಸ್ತಿಗೆ ಪಾತ್ರರಾದರು.

ಸಮಾರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅರ್ಬನ್‌ ಬ್ಯಾಂಕ್ ನಿರ್ದೇಶಕ ಶ್ರೀಧರ ನಾಯ್ಕ, ನಾಮಧಾರಿ ಅಭಿವೃದ್ದಿ ಸಂಘದ ಗೌರವಾಧ್ಯಕ್ಷ ಕೃಷ್ಣ ನಾಯ್ಕ, ಪತ್ರಕರ್ತ ಮನಮೋಹನ ನಾಯ್ಕ, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ವೆಂಕಟೇಶ್ವರ ಪತ್ತಿನ ಸಂಘದ ಉಪಾಧ್ಯಕ್ಷ ಮಹೇಶ ನಾಯ್ಕ, ಇಝೋನ್ ಕಂಪನಿಯ ಮಾಲಕ ಗಣಪತಿ ಸೋಡಿಗದ್ದೆ ಪ್ರಮುಖರಾದ ಪ್ರಕಾಶ ನಾಯ್ಕ, ಭಾಸ್ಕರ ನಾಯ್ಕ, ಸಂದೀಪ ಶೇಟ್, ವೆಂಕಟೇಶ ಮೊಗೇರ, ಜಯರಾಮ ಮಹಾಲೆ, ಶಿವಾನಂದ ಮಡಿವಾಳ ಉಪಸ್ಥಿತರಿದ್ದರು.

ರಾಜು ಪೂಜಾರಿ ಹಾಗೂ ಅಮಿತ್ ಮಹಾಲೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಮಣಿ ನಾಯ್ಕ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದರು. ವೆಂಕಟೇಶ್ವರ ಪ್ರೀಮಿಯರ್ ಲೀಗ್‌ನ ಆಯೋಜಕರಾದ ಶ್ರೀಧರ ನಾಯ್ಕ, ಪಾಂಡುರಂಗ ನಾಯ್ಕ, ಮಣಿ ಪೂಜಾರಿ, ಈಶ್ವರ ನಾಯ್ಕ ಪಂದ್ಯಾವಳಿಯನ್ನು ಉತ್ತಮವಾಗಿ ಸಂಘಟಿಸಿದರು.