ಸಾರಾಂಶ
ವೆಂಕಟೇಶ್ವರ ಏತ ನೀರಾವರಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಮೀಪದ ಕುಲಹಳ್ಳಿಯಲ್ಲಿರುವ ಏತ ನೀರಾವರಿ ಕೇಂದ್ರದಲ್ಲಿ ನೀರು ಪೂರೈಕೆಯ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜಮಖಂಡಿ, ಮುಧೋಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಬಹು ನಿರೀಕ್ಷಿತ ವೆಂಕಟೇಶ್ವರ ಏತ ನೀರಾವರಿಗೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸಮೀಪದ ಕುಲಹಳ್ಳಿಯಲ್ಲಿರುವ ಏತ ನೀರಾವರಿ ಕೇಂದ್ರದಲ್ಲಿ ನೀರು ಪೂರೈಕೆಯ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.ಬಳಿಕ ಮಾತನಾಡಿದ ಅವರು, ೨೦೧೭ರಲ್ಲಿ ಪ್ರಾರಂಭವಾದ ಕಾಮಗಾರಿಗೆ ಒಟ್ಟು ₹ ೫೪ ಕೋಟಿ ವೆಚ್ಚದಲ್ಲಿ ಸಾಕಾರವಾದ ಈ ಯೋಜನೆಯಿಂದ ಒಟ್ಟು ೧೨೦೦ ಹೆಕ್ಟೇರ್ ಜಮೀನು ನೀರಾವರಿಯಾಗಲಿದೆ. ಮೂರು ತಾಲೂಕುಗಳ ಸುಮಾರು ೧೪ ಗ್ರಾಮಗಳ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಒಣಭೂಮಿ ಹೊಂದಿರುವ ಈ ಭಾಗದ ರೈತರಿಗೆ ನೀರಾವರಿ ಸೌಕರ್ಯ ಲಭಿಸಿ ಬಾಳು ಬಂಗಾರವಾಗಲಿದೆ ಎಂದ ಅವರು, ಈ ಯೋಜನೆ ಅನುಷ್ಠಾನದಲ್ಲಿ ಮಾಜಿ ಸಚಿವೆ ಉಮಾಶ್ರೀಯವರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ಸಿದ್ದು ಕೊಣ್ಣೂರ, ಡಾ.ಎ.ಆರ್. ಬೆಳಗಲಿ, ಡಾ.ಪದ್ಮಜೀತ ನಾಡಗೌಡ ಪಾಟೀಲ, ಲಕ್ಷö್ಮಣ ದೇಸಾರಟ್ಟಿ, ಮಲ್ಲಪ್ಪ ಸಿಂಗಾಡಿ, ಸಂಗಪ್ಪ ಉಪ್ಪಲದಿನ್ನಿ, ಭೀಮಶಿ ಮಗದುಮ್ಮ, ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪೂಜಾರಿ, ರಾಯಪ್ಪ ಪೂಜಾರಿ, ಬಸವರಾಜ ದೊಡಮನಿ, ತುಕಾರಾಮ ಬನ್ನೂರ, ಮಹಾಲಿಂಗ ನಾವಿ, ಶೇಖರ ಹಕ್ಕಲದಡ್ಡಿ ಸೇರಿದಂತೆ ಅನೇಕರಿದ್ದರು.