ಸಾರಾಂಶ
ಸುರಪುರ ತಾಲೂಕಿನ ದೇವಾಪುರ ಗ್ರಾಮಕ್ಕೆ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಸುರಪುರಬಿರುಗಾಳಿ ಮಳೆಗೆ ಬುಧವಾರ ಸಂಜೆ ಮನೆಗಳು ತಗಡು ಹಾರಿ ಅಪಾರ ಹಾನಿಯಾದ ದೇವಾಪುರ ಗ್ರಾಮಕ್ಕೆ ಗುರುವಾರ ಕಾಂಗ್ರೆಸ್ ಮುಖಂಡ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಬಡವರ ಮನೆಗಳ ತಗಡುಗಳು ಹಾರಿ ಹೋಗಿರುವುದು ನೋವು ತಂದಿದೆ. ಗ್ರಾಮಸ್ಥರಿಗೆ ಪ್ರಕೃತಿ ವಿಕೋಪದಿಂದ ಅಪಾರ ಹಾನಿ ಆಗಿದೆ. ಆದ್ದರಿಂದ ಜನರಿಗೆ ಸೂಕ್ತ ಪರಿಹಾರ ನೀಡುವಂತೆ ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಹಾನಿ ಆಗಿರುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಘಟನೆ ವರದಿ ಪಡೆದು ಸರಕಾರಕ್ಕೆ ಒಪ್ಪಿಸಿ ಪರಿಹಾರ ಕೊಡಿಸಲು ಯತ್ನಿಸುತ್ತೇನೆ ಎಂದು ತಿಳಿಸಿದರು.
ಈ ವೇಳೆ ತಾಪಂ ಮಾಜಿ ಸದಸ್ಯ ನಂದನಗೌಡ ಎಚ್. ಪಾಟೀಲ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಎಚ್. ಪಾಟೀಲ್, ಮಲ್ಲಣ್ಣ ಸಾಹುಕಾರ ಮುಧೋಳ, ಸಂತೋಷ ಬಾಕ್ಲಿ, ನಗರ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ, ಚನ್ನಪ್ಪಗೌಡ, ಗ್ರಾಪಂ ಸದಸ್ಯ ಎಂ.ಡಿ. ಯೂಸೂಬ್, ದೇವು ಬಾಕ್ಲಿ, ಮಹಾದೇವ, ಯಂಕಪ್ಪ, ವೆಂಕಟೇಶ, ಮೊಹನುದ್ದೀನ್ ಚೌಧರಿ, ಅಮರೇಶ ಎನ್. ದೇಸಾಯಿ, ದೇವೇಂದ್ರ ಗುಪ್ಪಿ, ಬಂದೇನವಾಜ್ ಕಲಿಕೇರಿ, ವೀರೇಶ ಮುಷ್ಠಳ್ಳಿ ಸೇರಿದಂತೆ ಇತರರಿದ್ದರು.