ಸಾರಾಂಶ
ಯಾವ ಜಾತಿಯೂ ಇಲ್ಲ, ಮೇಲೂ ಇಲ್ಲ, ಕೀಳೂ ಇಲ್ಲ, ಎಲ್ಲಾ ಒಂದೇ ಜಾತಿ. ಮೌಲ್ಯವು ನಿನ್ನ ನೆನಪು ಮತ್ತು ಪ್ರಸ್ತುತ ನನ್ನ ಭವಿಷ್ಯ ಬಹಳ ಮುಖ್ಯ. ಇದರ ಬಗ್ಗೆ ಪರಿಜ್ಞಾನ ಇಲ್ಲದೆ ಇದ್ದರೆ ಅಜ್ಞಾನವಾಗುತ್ತದೆ ಎಂದ ಅವರು, ಕುವೆಂಪು ಹಾಗೂ ಶರೀಫರ ಹಾಡುಗಳನ್ನು ಹಾಡಿ, ಪ್ರಶಿಕ್ಷಣಾರ್ಥಿಗಳ ಮನವನ್ನು ಗೆದ್ದರು.
ಕನ್ನಡಪ್ರಭ ವಾರ್ತೆ ಮೈಸೂರು
ಸಂಸ್ಕೃತಿ, ಕ್ರೀಡೆ ವ್ಯಕ್ತಿಗಳ ಸ್ವತ್ತಾಗಿರುತ್ತದೆ. ಶಿಕ್ಷಣದ ಹೆಸರಿನಲ್ಲಿ ಶಿಕ್ಷೆ ನೀಡಿದರೆ ದಡ್ಡರಾಗುತ್ತಾರೆ. ಶಿಕ್ಷಣವನ್ನು ಕೊಟ್ಟು ಶಿಕ್ಷೆ ನೀಡಬಾರದು ಎಂದು ರಂಗಾಯಣದ ಮಾಜಿ ನಿರ್ದೇಶಕ ಹಾಗೂ ಹಿರಿಯ ರಂಗಕರ್ಮಿ ಎಚ್. ಜನಾರ್ಧನ ತಿಳಿಸಿದರು.ನಗರದ ಹೊಸಮಠದ ನಟರಾಜ ಸಭಾಂಗಣದಲ್ಲಿ ವಾತ್ಸಲ್ಯ ಬಿ.ಇಡಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಎನ್ನುವುದು ಒಂದು ಸಾಮಾಜಿಕ ಕ್ರಿಯೆ ಎಂದರು.
ಯಾವ ಜಾತಿಯೂ ಇಲ್ಲ, ಮೇಲೂ ಇಲ್ಲ, ಕೀಳೂ ಇಲ್ಲ, ಎಲ್ಲಾ ಒಂದೇ ಜಾತಿ. ಮೌಲ್ಯವು ನಿನ್ನ ನೆನಪು ಮತ್ತು ಪ್ರಸ್ತುತ ನನ್ನ ಭವಿಷ್ಯ ಬಹಳ ಮುಖ್ಯ. ಇದರ ಬಗ್ಗೆ ಪರಿಜ್ಞಾನ ಇಲ್ಲದೆ ಇದ್ದರೆ ಅಜ್ಞಾನವಾಗುತ್ತದೆ ಎಂದ ಅವರು, ಕುವೆಂಪು ಹಾಗೂ ಶರೀಫರ ಹಾಡುಗಳನ್ನು ಹಾಡಿ, ಪ್ರಶಿಕ್ಷಣಾರ್ಥಿಗಳ ಮನವನ್ನು ಗೆದ್ದರು.ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ ಮಾತನಾಡಿ, ನಿಮ್ಮ ಪ್ರತಿಭೆಯ ಮೂಲಕ ಹಾಗೂ ಸೃಜನಶೀಲವಾಗಿ ಸಂಸ್ಕೃತಿಯ ಅನಾವರಣ ಗುರುತಿಸಿ, ಅದು ಯಶಸ್ಸಿಗೆ ಕಾರಣವಾಗುತ್ತದೆ. ನೀವು ಒಬ್ಬರಿಗೆ ಮಾದರಿಯಾಗಿರಬೇಕು. ನಿಮ್ಮ ಬಂಡವಾಳ ಮೌಲ್ಯವಾಗಬೇಕು. ಪ್ರತಿಭೆಯಲ್ಲಿ ಖ್ಯಾತಿಯನ್ನು ಪಡೆಯಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಹೇಶ ದಳಪತಿ ಇದ್ದರು. ಕೆ.ಸಿ. ಅನುಷ ಮತ್ತು ತಂಡದವರು ಪ್ರಾರ್ಥಿಸಿದರು. ಎಸ್. ಸೋನಾ ಸ್ವಾಗತಿಸಿದರು. ಕೆ.ಎಲ್. ಮಮತಾ ಅಥಿತಿಗಳನ್ನು ಪರಿಚಯಿಸಿದರು. ಕೆ.ಎಸ್. ಮಂಜುನಾಥ ವಂದಿಸಿದರು. ಎನ್. ಅಪೂರ್ವ ನಿರೂಪಿಸಿದರು.