ಸೋಲು ಗೆಲುವು ಸರ್ವೆ ಸಾಮಾನ್ಯ : ಡಾ. ಸುಬ್ಬರಾಯ

| Published : Nov 25 2025, 02:15 AM IST

ಸೋಲು ಗೆಲುವು ಸರ್ವೆ ಸಾಮಾನ್ಯ : ಡಾ. ಸುಬ್ಬರಾಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ವಿದ್ಯಾರ್ಥಿಗಳು ಧೃತಿಗೆಡದೇ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಮುಂದಿನ ಪ್ರಯತ್ನಕ್ಕೆ ಕಟಿಬದ್ಧರಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೋಲು ಗೆಲುವು ಸರ್ವೆ ಸಾಮಾನ್ಯ. ವಿದ್ಯಾರ್ಥಿಗಳು ಧೃತಿಗೆಡದೇ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಮುಂದಿನ ಪ್ರಯತ್ನಕ್ಕೆ ಕಟಿಬದ್ಧರಾಗಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ. ಸಿ.ಕೆ.ಸುಬ್ಬರಾಯ ಹೇಳಿದರು.ನಗರದ ಎಐಟಿ ಕಾಲೇಜಿನಲ್ಲಿ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಚುಂಚನೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧೆಗಳು ಸ್ನೇಹ ಮನೋಭಾವದಿಂದ ಕೂಡಿರಬೇಕು. ವಿಜೇತರು ಉದ್ರೇಕಕ್ಕೆ ಒಳಗಾಗದೇ ಸಮಾಧಾನ ವಹಿಸಬೇಕು. ಸೋತವರು ದ್ವೇಷಕ್ಕೆ ಎಡೆಮಾಡಿಕೊಡದೇ ಸ್ನೇಹದಿಂದಿರಬೇಕು. ಸ್ಪರ್ಧೆಗಳು ಗೆಲುವಿಗಿಂತ, ಭಾಗಹಿಸಿದ ಅನುಭವವನ್ನೇ ದೊಡ್ಡ ಗೆಲುವೆಂದು ಭಾವಿಸಬೇಕು ಎಂದು ತಿಳಿಸಿದರು.

ಕಾಲೇಜಿನಲ್ಲಿ 2 ದಿನಗಳ ಕಾಲ ಆಯೋಜಿಸಿದ್ಧ ವಿವಿಧ ಸ್ಫರ್ಧೆಗಳು ಯುವ ಸಮೂಹಕ್ಕೆ ಹೆಚ್ಚು ಖುಷಿ ತಂದಿದೆ. ಇನ್ನೂ ಮುಂದಿನ ಭವಿಷ್ಯದ ಹೆಜ್ಜೆ ಇಡುವಂಥ ಸಮಯ. ಅಂತಿಮ ವರ್ಷದ ಪರೀಕ್ಷೆ ಎದುರಿಸಲು ಕಠಿಣ ಅಭ್ಯಾಸವಿರಬೇಕು. ಆ ನಿಟ್ಟಿನಲ್ಲಿ ಯುವಕ ಯುವತಿಯರು ಓದಿನ ಕಡೆ ಗಮನ ಹರಿಸಬೇಕು ಎಂದರು.ಐಎಎಸ್, ಕೆಎಎಸ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಂಸ್ಥೆ ನಿರ್ದೇಶಕ ಜಿ.ತುಳಸಿದಾಸ್ ಮಾತನಾಡಿ, ಐಎಎಸ್, ಕೆಎಎಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆ ಎದುರಿಸಲು ಈ ವಯಸ್ಸಿನಿಂದಲೇ ವಿದ್ಯಾರ್ಥಿಗಳು ನಿರ್ಣಯ ಕೈಗೊಳ್ಳಬೇಕು. ಅದಕ್ಕೆ ತಕ್ಕಂತೆ ಶ್ರದ್ದೆಯಿಂದ ಅಭ್ಯಾಸಿಸಬೇಕು. ಗಿರಿ ಶಿಖರದಂತೆ ಎತ್ತರಕ್ಕೆ ಬೆಳೆಯಬೇಕು ಎಂದು ಹೇಳಿದರು.ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ.ಜಯದೇವ್ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿಜೇತರಾದ ಸಾಂಸ್ಕೃತಿಕ ಸ್ಪರ್ಧಾ ತಂಡಗಳಿಗೆ ಮತ್ತು ಕೋರಿಯೋಗ್ರಫ್‌ಗಳಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಎಐಟಿ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘದ ಸಂಗಾರೆಡ್ಡಿ, ಮೆಕ್ಯಾನಿ ಕಲ್ ವಿಭಾಗದ ಡಾ. ಜಿ.ಎಂ.ಸತ್ಯನಾರಾಯಣ್, ಮಾಹಿತಿ ತಂತ್ರಜ್ಞಾನದ ಮುಖ್ಯಸ್ಥ ಡಾ. ಸಂಪತ್, ರಾಸಾಯನಶಾಸ್ತ್ರ ವಿಭಾಗದ ಡಾ. ಎನ್.ಡಿ.ದಿನೇಶ್, ವಿದ್ಯುತ್ ವಿಭಾಗದ ಡಾ. ಜಿ.ಆರ್. ವೀರೇಂದ್ರ, ವಿದ್ಯುನ್ಮಾನ ವಿಭಾಗದ ಡಾ. ಗೌತಮ್, ಗಣಕಯಂತ್ರ ವಿಭಾಗದ ಡಾ. ಪುಷ್ಪ, ಸಿವಿಲ್ ವಿಭಾಗದ ಡಾ. ಕಿರಣ್, ಭೌತಶಾಸ್ತ್ರ ವಿಭಾಗದ ಡಾ. ಮಲ್ಲಿಕಾರ್ಜುನ್, ಗಣಿತಶಾಸ್ತ್ರ ವಿಭಾಗದ ಡಾ. ಶ್ರೀಕಾಂತ್, ಎಐಎಂಎಲ್ ವಿಭಾಗದ ಡಾ. ಸುನೀತ್, ರಿಜಿಸ್ಟರ್ ಸಾಗರ್ ಉಪಸ್ಥಿತರಿದ್ದರು.23 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಚುಂಚನೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.------------------------------------------------