ಚನ್ನಗಿರಿಯಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

| Published : Nov 24 2024, 01:50 AM IST

ಸಾರಾಂಶ

ಚನ್ನಗಿರಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪಟ್ಟಣದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ತಾಲೂಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಎಚ್.ಶ್ರೀನಿವಾಸ್ ಮಾತನಾಡಿ, ಬಿಜೆಪಿ ಕುತಂತ್ರಗಳನ್ನು ತಿಳಿದುಕೊಂಡಿರುವ ಚುನಾವಣೆ ನಡೆದ ಮೂರು ಕ್ಷೇತ್ರಗಳ ಮತದಾರರು ಬಿಜೆಪಿ ಗೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಜಯಭೇರಿ ಬಾರಿಸುವರು ಎನ್ನುವುದಕ್ಕೆ ಈ ಉಪ ಚುನಾವಣೆ ಫಲಿತಾಂಶದಿಂದ ತಿಳಿಯುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಅಮಾನುಲ್ಲಾ, ವಡ್ನಾಳ್ ಜಗದೀಶ್, ಸಿ.ನಾಗರಾಜ್, ಸಂತೆಬೆನ್ನೂರು ಜಬೀಉಲ್ಲಾ, ವಿರೇಶ್ ನಾಯ್ಕ್, ಸ್ಟಾಂಪ್ ವೆಂಡರ್ ಕೆ.ಆರ್.ಮಂಜುನಾಥ್, ಪುರಸಭೆಯ ಸದಸ್ಯರಾದ ಜಿ.ನಿಂಗಪ್ಪ, ಗೌಸ್ ಪೀರ್, ಇಮ್ರಾನ್, ಕಾಫೀಪುಡಿ ಶಿವಾಜಿರಾವ್, ಜಿತೇಂದ್ರರಾಜ್, ಚಂದ್ರನಾಯ್ಕ್, ಧರಣೇಂದ್ರ, ಅಪ್ರೋಜ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರುಗಳಿದ್ದರು.