ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸ್ ಆದ ಹಿನ್ನೆಲೆಯಲ್ಲಿ ನಗರದ ಸಿದ್ದೇಶ್ವರ ದೇವಸ್ಥಾನ ಮುಂಭಾಗ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಅಭಿಮಾನಿ ಬಳಗದಿಂದ ವಿಜಯೋತ್ಸವ ಆಚರಿಸಲಾಯಿತು.ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಿಹಿ ವಿತರಿಸಿ ಸಂಭ್ರಮಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ವಕ್ಫ್ ವಿರುದ್ಧ ಹೋರಾಟ ನಡೆಸಿದ್ದ ಬಸನಗೌಡ ಪಾಟೀಲ ಯತ್ನಾಳ ಅವರ ಪರ ಘೋಷಣೆ ಕೂಗಿ ಸಂಭ್ರಮಿಸಿದರು.
ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ನೀಡಿರುವ ಸಂವಿಧಾನದಲ್ಲಿ ಎಲ್ಲಿಯೂ ವಕ್ಫ್ ಕಾಯ್ಧೆ ಬಗ್ಗೆ ಉಲ್ಲೇಖವಿಲ್ಲ. ವೋಟ್ ದುರಾಸೆಗಾಗಿ ನೆಹರು ಈ ಕಾಯ್ದೆಯನ್ನು ಜಾರಿಗೆ ತಂದು ಸಂವಿಧಾನಕ್ಕೆ ಅಪಮಾನ ಮಾಡಿದರು. ಈ ಕಾಯ್ದೆ ಬಳಸಿ ಅಮಾಯಕರ, ಮಠ ಮಾನ್ಯಗಳ, ಸರ್ಕಾರಿ ಆಸ್ತಿ ಕಬಳಿಸುತ್ತಿದ್ದರು. ಇದನ್ನು ತಡೆಯಲು ಬಸನಗೌಡ ಪಾಟೀಲ ಯತ್ನಾಳರು ನಡೆಸಿದ ಹೋರಾಟ ಮೋದಿಯವರ ಗಮನ ಸೆಳೆಯಿತು. ಅವರ ಹೋರಾಟದ ಫಲವಾಗಿ ಇಂದು ಲೊಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದೆ. ಇದು ಪ್ರತಿಯೊಬ್ಬ ದೇಶ ಭಕ್ತರ ಗೆಲುವು, ಮೋದಿಯವರ ಗೆಲುವು, ಬಸನಗೌಡರ ಗೆಲುವಾಗಿದೆ ಎಂದರು.ಡಾ.ಬಿ.ಎಸ್.ಪಾಟೀಲ ನಾಗರಾಳಹುಲಿ ಮಾತನಾಡಿ, ಕೇಂದ್ರಕ್ಕೆ ಸಾಕಷ್ಟು ದಾಖಲೆಗಳನ್ನು ಸಂಗ್ರಹಿಸಿ ನೀಡಿದ್ದರ ಫಲವಾಗಿ ಕಾಯ್ದೆ ತಿದ್ದುಪಡಿಗೆ ನೆರವಾಯಿತು ಎಂದು ಹೇಳಿದರು. ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿದರು. ಮುಖಂಡರಾದ ಶಂಕರ ಹೂಗಾರ, ಪ್ರತಾಪ ಚಿಕ್ಕಲಕಿ, ಮುಖಂಡರಾದ ಎಂ.ಎಸ್.ರುದ್ರಗೌಡರ, ಗುರು ಗಚ್ಚಿನಮಠ, ಎಂ.ಎಸ್.ಕರಡಿ, ಕಿರಣ ಪಾಟೀಲ, ರಾಜಶೇಖರ ಕುರಿಯವರ, ವಿಠ್ಠಲ ಹೊಸಪೇಟೆ, ಜವಾಹರ ಗೋಸಾವಿ, ಮಲ್ಲಿಕಾರ್ಜುನ ಗಡಗಿ, ಗಿರೀಶ ಪಾಟೀಲ, ಪಾಂಡುಸಾಹುಕಾರ ದೊಡ್ಡಮನಿ, ದತ್ತಾ ಗೊಲಂಡೆ, ಸಂತೋಷ ಪಾಟೀಲ, ದಾದಾಸಾಹೇಬ್ ಬಾಗಾಯತ, ಲಕ್ಷ್ಮಣ ಜಾಧವ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಚಂದ್ರು ಚೌದರಿ, ಬಾಬು ಶಿರಶ್ಯಾಡ, ವಿಠ್ಠಲ ನಡುವಿನಕೇರಿ, ರಾಚು ಬಿರಾದಾರ, ಪ್ರವೀಣ ವಂದಾಲಮಠ, ಲಕ್ಷ್ಮೀ ಕನ್ನೊಳ್ಳಿ, ರಾಜಲಕ್ಷ್ಮಿ ಪರ್ವತನವರ, ಸುಚೇತಾ ಜಾಧವ ಮತ್ತಿತರರು ಇದ್ದರು.-----------