ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಗರದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಎಸ್.ಕುಮಾರ ಮಹೇಶ ಪಿಯು ಕಾಲೇಜಿನಲ್ಲಿ ೨೬ನೇ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಬರಟಗಿ ರಸ್ತೆಯಲ್ಲಿರುವ ಎಸ್.ಕುಮಾರ ವಿದ್ಯಾವರ್ಧಕ ಸಂಸ್ಥೆಯ ಸರಸ್ವತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಹಾಗೂ ಎಸ್.ಕುಮಾರ ಮಹೇಶ ಪಿಯು ಕಾಲೇಜಿನಲ್ಲಿ ೨೬ನೇ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು.ನಿವೃತ್ತ ಯೋಧ ಎನ್.ಜೆ.ಅಜನಾಳ ಮಾತನಾಡಿ, ಭಾರತ ಇತ್ತೀಚೆಗೆ ಎದುರಿಸಿದ ಪಾಕಿಸ್ತಾನ ವಿರುದ್ಧ ನಡೆಸಿದ ಆಪರೇಷನ್ ಸಿಂದೂರಕ್ಕಿಂತ ಭಯಂಕರವಾದ ೧೯೯೯ ಜುಲೈ ೨೬ ರಂದು ನಡೆದ ಕಾರ್ಗಿಲ್ ಕದನದಲ್ಲಿ ನಮ್ಮ ಭಾರತದ ವೀರ ಯೋಧರ ತ್ಯಾಗ, ಧೈರ್ಯ ಸಾಹಸದಿಂದ ಕಪಟ ಪಾಕಿಸ್ತಾನ ವಿರುದ್ಧ ಯುದ್ಧ ಮಾಡಿದ ಪರಿಣಾಮ ಪಾಕಿಸ್ತಾನದ ಸೈನಿಕರ ವಿರುದ್ಧ ವಿಜಯ ಸಾಧಿಸಿತು. ಆದ್ದರಿಂದ ಅನೇಕ ಯೋಧರ ಪ್ರಾಣ ತ್ಯಾಗ ಮಾಡಿದ ಪರಿಣಾಮವಾಗಿ ದೇಶ ಭಕ್ತಿಯ ಭಾವನೆಯಿಂದ ಗೌರವಾರ್ಪಣೆ ಸಲ್ಲಿಸುವುದು ಭಾರತೀಯರ ಕರ್ತವ್ಯ ಎಂದು ಹೇಳಿದರು.
ಪ್ರಾಚಾರ್ಯ ಸದಾಶಿವ ವಾಲಿಕಾರ ಮಾತನಾಡಿ, ಕಾರ್ಗಿಲ್ ವಿಜಯ ದಿವಸ ಪ್ರತಿ ವರ್ಷ ಜುಲೈ ೨೬ರಂದು ಆಚರಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ಭಾರತೀಯರ ಮನಸ್ಸಿನಲ್ಲಿ ಮರೆಯದೆ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡಿದು ಕಾರ್ಗಿಲ್‌ನ ಡ್ರಾಸ್ ಪ್ರದೇಶವನ್ನು ವಶಕ್ಕೆ ಪಡೆದ ಕಾರ್ಯದ ನೆನಪಿಗಾಗಿ ಈ ದಿನವನ್ನು ಆಚರಿಸುತ್ತೇವೆ. ಆದ್ದರಿಂದ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಸ್ಥಾಪಕ ಎಸ್.ಕುಮಾರ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಎಚ್.ಟಿ.ಲತಾದೇವಿ, ಪ್ರಾಚಾರ್ಯ ಸದಾಶಿವ ವಾಲಿಕಾರ, ಮುಖ್ಯಗುರು ಪ್ರಶಾಂತ ಹಿರೇಮಠ ಇದ್ದರು.