ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಅವರು, ಕಾರ್ಯಕರ್ತರ ಸಂಘಟಿತ ಪರಿಶ್ರಮ, ನಿಷ್ಠೆ ಹಾಗೂ ಸಮರ್ಪಣಾ ಮನೋಭಾವವೇ ಪಕ್ಷದ ಗೆಲುವಿನ ಹಿಂದಿನ ಪ್ರಮುಖ ಶಕ್ತಿ ಎಂದರು.
ಹಳಿಯಾಳ: ವಿಧಾನಪರಿಷತ್ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಯ ನಾಲ್ವರು ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಅದರಲ್ಲೂ ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಅವರು ಅಭೂತಪೂರ್ವ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ವಿಜಯೋತ್ಸವವನ್ನು ಬುಧವಾರ ಆಚರಿಸಲಾಯಿತು.
ಮಾಜಿ ಶಾಸಕ ಸುನೀಲ ಹೆಗಡೆ, ಹಳಿಯಾಳ ಮಂಡಲ ಅಧ್ಯಕ್ಷ ವಿಠ್ಠಲ ಸಿದ್ದಣ್ಣವರ ಹಾಗೂ ಜಿಲ್ಲಾ ವಿಶೇಷ ಆಹ್ವಾನಿತ ಮಂಗೇಶ ದೇಶಪಾಂಡೆ ಅವರು ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವಕ್ಕೆ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಅವರು, ಕಾರ್ಯಕರ್ತರ ಸಂಘಟಿತ ಪರಿಶ್ರಮ, ನಿಷ್ಠೆ ಹಾಗೂ ಸಮರ್ಪಣಾ ಮನೋಭಾವವೇ ಪಕ್ಷದ ಗೆಲುವಿನ ಹಿಂದಿನ ಪ್ರಮುಖ ಶಕ್ತಿ ಎಂದರು. ವಿಜಯೋತ್ಸವದ ಸಭೆಯ ನಂತರ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಚೆನ್ನಮ್ಮ ವೃತ್ತ, ಶಿವಾಜಿ ವೃತ್ತ, ಪೇಟೆ ಪ್ರದೇಶ, ಫಿಶ್ ಮಾರ್ಕೆಟ್ ವೃತ್ತ ಹಾಗೂ ಯಲ್ಲಾಪುರ ನಾಕಾ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು.ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬ್ಳೆ, ಗಣಪತಿ ಕರಂಜೆಕರ, ಶಂಕರ ಗಳಗಿ, ಮಾರುತಿ ಪೆಟ್ನೇಕರ, ಸಂಜಯ ಹಿರೇಕರ, ಸೋಣಪ್ಪ ಸುಣಕಾರ, ಯಲ್ಲಪ್ಪ ಹೇಳವರ, ಯಲ್ಲಪ್ಪ ಹೊನ್ನೋಜಿ, ಚೂಡಪ್ಪ ಬೋಬಾಟಿ, ಸುಭಾಷ ಪಾಟೀಲ, ಅರುಣ ನಾಕಾಡಿ, ಹನುಮಂತ ಛಲವಾದಿ, ಪ್ರಶಾಂತ ನಾಯ್ಕ, ಉದಯ ಜಾಧವ, ಶ್ರೀನಿವಾಸ ದೊಡ್ಡಮನಿ, ಪ್ರಕಾಶ ಕೊರವರ, ಬಾಬು ಶಾಪೂರಕರ, ಪ್ರದೀಪ ಹೆರೆಕರ, ಭರತ ಕಮ್ಮಾರ, ಶಾಂತಾ ಹೆರೆಕರ, ರತ್ನಮಾಲಾ ಮೂಳೆ, ವೀಣಾ ಕುಂಬಾರ, ಮಾಲಾ ಹುಂಡೇಕರ, ಸಂಜನಾ ಮೊರೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.