ಸಾರಾಂಶ
ಹಲವು ವರ್ಷಗಳ ಹೋರಾಟದ ಫಲವಾಗಿ ತಾಲೂಕಿಗೆ ತುಂಗಭದ್ರಾ ಕುಡಿಯುವ ನೀರು ತಲುಪಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಹಲವು ವರ್ಷಗಳ ಹೋರಾಟದ ಫಲವಾಗಿ ತಾಲೂಕಿಗೆ ತುಂಗಭದ್ರಾ ಕುಡಿಯುವ ನೀರು ತಲುಪಿರುವುದು ಸಂತಸ ತಂದಿದೆ ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಹೇಳಿದರು.ತಾಲೂಕಿನ ಕೆಂಚಮ್ಮನಹಳ್ಳಿ ಗೇಟ್ ಬಳಿ ನಿರ್ಮಾಣದ ತುಂಗಭದ್ರಾ ಕುಡಿಯುವ ನೀರಿನ ಯೋಜನೆಯ ಪಂಪ್‌ಹೌಸ್‌ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಮಳೆಯ ಅಭಾವದಿಂದ ಬಹಳಷ್ಟು ವರ್ಷಗಳ ಕಾಲ ಬರಪೀಡಿತ ಪ್ರದೇಶವಾದ ತಾಲೂಕಿನ ಈ ಭಾಗಕ್ಕೆ ತುಂಗಭದ್ರಾ ಯೋಜನೆಯ ಕುಡಿವ ನೀರು ಪೂರೈಕೆಯಾಗಿದೆ. ಪ್ಲೊರೈಡ್ ನೀರು ಸೇವನೆಯಿಂದ ಇಲ್ಲಿನ ಜನತೆ ನಾನಾರೋಗಗಳಿಗೆ ತುತ್ತಾಗಿ ಬಳಲುತ್ತಿದ್ದರು ಎಂದರು.2017ರಲ್ಲಿ ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ವಿಚಾರವಾಗಿ ವಿಧಾನಸಭೆಯಲ್ಲಿ ಅನೇಕ ಬಾರಿ ಹೋರಾಟ ಮಾಡಿ ಧ್ವನಿ ಎತ್ತಿದ್ದೇನೆ. ಕುಡಿವ ನೀರಿಗಾರಿ ಬೆಂಗಳೂರಿ ಸಿಎಂ ಕಚೇರಿಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕಲಾಗಿತ್ತು. ಆಗಿನ ಘನ ಸರ್ಕಾರ ಇಲ್ಲಿನ ಎಲ್ಲರ ಬೇಡಿಕೆ ಈಡೇರಿಸುವ ವಿಚಾರ ಮುಂದಿಟ್ಟುಕೊಂಡು ಸಮಸ್ಯೆ ಗಂಭೀರವಾಗಿ ಪರಿಗಣಿಸಿ ತಾಲೂಕಿಗೆ ಫ್ಲೋರೈಡ್ ಮುಕ್ತ ನೀರನ್ನು ಕೊಡಲಿಕ್ಕೆ 2,350 ಕೋಟಿ ರು. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನವಾಗಿತ್ತು ಎಂದರು.ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ ಮಾತನಾಡಿ, ಕುಡಿವ ನೀರಿಗಾಗಿ ಕಳೆದ 20 ವರ್ಷಗಳಿಂದ ಹೋರಾಟದ ಮಾಡಿಕೊಂಡು ಬಂದಿದ್ದೇವೆ. ಅಂದು ಶಾಸಕರಾಗಿದ್ದ ಕೆ.ಎಂ. ತಿಮ್ಮರಾಯಪ್ಪ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಿದ್ದರು. ಅದೇ ರೀತಿ ನ್ಯಾಯಾಲಯದಿಂದಲೂ ಸಹ ಪ್ಲೂರೈಡ್ ನೀರು ಸೇವನೆ ವಿಷ ಸಮಾನ ಎಂದು ಆಗಿನ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಈ ಎಲ್ಲರ ಪ್ರತಿಫಲದ ಹಿನ್ನಲೆಯಲ್ಲಿ ತಾಲೂಕಿಗೆ ತುಂಗಭದ್ರಾ ಯೋಜನೆಯ ಕುಡಿವ ನೀರು ಸರಬರಾಜು ಆಗಲು ಕಾರಣವಾಗಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಈರಣ್ಣ, ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ತಿಮ್ಮಾರೆಡ್ಡಿ, ನಿಕಟಪೂರ್ವ ಅಧ್ಯಕ್ಷ ಬಲರಾಮರೆಡ್ಡಿ, ಮಾಜಿ ಜಿಪಂ ಸದಸ್ಯ ಚೆನ್ನಮಲ್ಲಯ್ಯ, ಮುಖಂಡರಾದ ಎಲ್.ಎಸ್.ನರಸರೆಡ್ಡಿ, ಅಂಜನಪ್ಪ, ಗೋವಿಂದಬಾಬು, ಗಡ್ಡಂ ತಿಮ್ಮರಾಜು, ಶಿವಕುಮಾರ್, ನಲ್ಲಪ್ಪ, ಪ್ರಭಾಕರೆಡ್ಡಿ, ಸಣ್ಣಾರೆಡ್ಡಿ ಉಪಸ್ಥಿತರಿದ್ದರು.