ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ವಿಜಯೋತ್ಸವ

| Published : Jun 05 2024, 12:31 AM IST

ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮುದಗಲ್‌ ನಲ್ಲಿ ಬಯ್ಯಾಪೂರ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮುದಗಲ್:

ರಾಯಚೂರು ಮತ್ತು ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರಿಂದ ಬಯ್ಯಾಪೂರ ಬೆಂಬಲಿಗರು ನಾಗಲಾಪೂರ ವಿಎಸ್ಎಸ್ಎನ್ ಅಧ್ಯಕ್ಷ ಶರಣಬಸವ ವ್ಯಾಕರನಾಳ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದರು.

ಪಟ್ಟಣದ ಗಂಗಾವತಿ ರಸ್ತೆಯಲ್ಲಿರುವ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಅವರ ಕ್ರಷರ್ ಕಚೇರಿಯಲ್ಲಿ ನಾಗಲಾಪೂರ, ವ್ಯಾಕರನಾಳ, ಉಳಿಮೇಶ್ವರ ಸೇರಿದಂತೆ ನಾಗಲಾಪೂರ ಗ್ರಾಪಂ ವ್ಯಾಪ್ತಿಯ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ ಹಾಗೂ ವಿಧಾನ ಪರಿಷತ್ ಸದಸ್ಯ ಶರಣಗೌಡ ಬಯ್ಯಾಪೂರ ಬೆಂಬಲಿಗರು ಕಚೇರಿ ಮುಂದೆ ಪಟಾಕಿ ಸಿಡಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡು ಸಂಭ್ರಮಿಸಿದರು. ಈ ವೇಳೆ ರಾಯಚೂರು ಅಭ್ಯರ್ಥಿ ಜಿ. ಕುಮಾರನಾಯಕ, ಕೊಪ್ಪಳ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳಿರುವ ಪೋಸ್ಟರ್ ಹಿಡಿದು ಜೈಕಾರ ಹಾಕಿ ಸಂಭ್ರಮಿಸಿದರು. ಈ ವೇಳೆ ತಾಪಂ ಮಾಜಿ ಸದಸ್ಯ ರಾಮನಗೌಡ, ಶರಣಪ್ಪ ನಾಗಲಾಪೂರ, ವೆಂಕೋಬ ಮೇಟಿಗೌಡ, ರಜ್ಜಬಲಿ ಟಿಂಗ್ರಿ, ಶರಣಪ್ಪ ಮರಳಿ, ಸಂಗಮೇಶ ಕನ್ನಾಳ, ಹೊಳಿಯಪ್ಪ ನಾಗಲಾಪೂರ, ಲಿಂಗಪ್ಪ ನಾಗಲಾಪೂರ, ಹನುಮಂತ ಛಲವಾದಿ ಉಪಸ್ಥಿತರಿದ್ದರು.