ಸಾರಾಂಶ
ಮಹಿಳೆಯರ ವಿಭಾಗದಲ್ಲಿ ಜಿಎಸ್ಎಸ್ಎಸ್ಐಇಟಿಬ್ಲ್ಯೂ ತಂಡವು ವಿದ್ಯಾವರ್ಧ ಎಂಜಿನಿಯರಿಂಗ್ ಕಾಲೇಜು ತಂಡವನ್ನು 2-0 ಅಂತರದಲ್ಲಿ ಪರಾಭವಗೊಳಿಸಿತು.
ಕನ್ನಡಪ್ರಭ ವಾರ್ತೆ ಮೈಸೂರು
ವಿಟಿಯು ಅಂತರ ಕಾಲೇಜು ಮೈಸೂರು ವಿಭಾಗೀಯ ಬ್ಯಾಡ್ಮಂಟನ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ಕಾಲೇಜು ಪ್ರಥಮ, ಮಹಿಳೆಯರ ವಿಭಾಗದಲ್ಲಿ ಜಿಎಸ್ಎಸ್ಎಸ್ ಐಇಟಿಡಬ್ಲ್ಯೂ ಜಯಗಳಿಸಿದೆ.ಎನ್ಐಇ ವಜ್ರಮಹೋತ್ಸವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ತಂಡವು 3-1 ಅಂತರದಿಂದ ಮಂಡ್ಯ ಪಿ.ಇ.ಎಸ್.ಸಿ.ಇ ಕಾಲೇಜು ತಂಡವನ್ನು ಮಣಿಸಿತು.
ಮಹಿಳೆಯರ ವಿಭಾಗದಲ್ಲಿ ಜಿಎಸ್ಎಸ್ಎಸ್ಐಇಟಿಬ್ಲ್ಯೂ ತಂಡವು ವಿದ್ಯಾವರ್ಧ ಎಂಜಿನಿಯರಿಂಗ್ ಕಾಲೇಜು ತಂಡವನ್ನು 2-0 ಅಂತರದಲ್ಲಿ ಪರಾಭವಗೊಳಿಸಿತು.ರಾಷ್ಟ್ರೀಯ ಬ್ಯಾಡ್ಮಂಟನ್ಆಟಗಾರ ಡಾ. ಹರ್ಷ ವಿಮನ್ ಚಾಲನೆ ನೀಡಿದರು. ಎನ್ಐಇಯ ಶೈಕ್ಷಣಿಕ ವಿಭಾಗದ ಡೀನ್ಡಾ.ಸಿ. ವಿದ್ಯಾರಾಜ್, ವಿಟಿಯು ಮೈಸೂರು ವಿಭಾಗದ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಂ.ಪಿ. ಮುರಳೀಧರ ಮೊದಲಾದವರು ಇದ್ದರು.