ಬಿಜೆಪಿ ಕಾರ್ಯಕರ್ತರ ವಿಜಯೋತ್ಸವ

| Published : Jun 10 2024, 12:46 AM IST

ಸಾರಾಂಶ

ನರೇಂದ್ರ ಮೋದಿ 3ನೇ ಅವಧಿಯಲ್ಲಿ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಭಾನುವಾರ ನರೇಂದ್ರ ಮೋದಿ 3ನೇ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ವಿಜಯೋತ್ಸವ ಆಚರಿಸಲಾಯಿತು.

ಸ್ಥಳೀಯ ರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಇಲ್ಲಿಯ ಬಸ್ ನಿಲ್ದಾಣದಲ್ಲಿ, ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ ಬಳಿಕ ಮಾತನಾಡಿ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಚಾಳಿಯಂಡ ಜಗದೀಶ ದೇಶದೆಲ್ಲೆಡೆ ವಿಜಯೋತ್ಸವವನ್ನು ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ ಶ್ರೀ ರಾಮನ ಆಶೀರ್ವಾದದಿಂದ ಯಾವುದೇ ತರದ ಅಡೆತಡೆ ಇಲ್ಲದೆ ಉತ್ತಮ ಆಡಳಿತ ನೀಡುವ ಆಶಯ ಕಾರ್ಯಕರ್ತರದ್ದಾಗಿದೆ ಎಂದರು.

ಮಡಿಕೇರಿ ಗ್ರಾಮಾಂತರ ಮಂಡಲ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಬಿ.ಎಂ. ಪ್ರತೀಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದಾರೆ. ಮುಂದಿನ ಐದು ವರ್ಷಗಳು ನಿರ್ವಿಘ್ನವಾಗಿ ದೇಶವನ್ನು ಮುನ್ನಡೆಸಿ ಅಭಿವೃದ್ಧಿಯತ್ತ ಕೊಂಡೊಯ್ಯುವರು ಎಂದ ಅವರು ಮೋದಿ ಅವರ ಮುಂದೆ ಯಾವುದೇ ಬಿಟ್ಟಿ ಭಾಗ್ಯಗಳಾಗಲಿ, ಟಕಟಕ್ ಹಣ ವರ್ಗಾವಣೆ ಆಗಲಿ ಕಾರ್ಯಗತವಾಗಿಲ್ಲ ಎಂದು ಅವರು ಪ್ರಧಾನಿ ಮೋದಿಜಿ ಭಾರತವನ್ನು ವಿಶ್ವದ ಶ್ರೀಮಂತರ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಪ್ರಮುಖ ಕಂಗಾಂಡ ಜಾಲಿ ಪೂವಪ್ಪ, ಬಜರಂಗದಳದ ನಾಪೋಕ್ಲು ಘಟಕದ ಅಧ್ಯಕ್ಷ ರಾಧಾಕೃಷ್ಣ ರೈ, ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷ ಪಾಡಿಯಮ್ಮಂಡ ಮನು ಮಹೇಶ್ , ಒಬಿಸಿ ಕಾರ್ಯದರ್ಶಿ ಸುಕುಮಾರ್, ಮುವೇರ ಪಟ್ಟು ಪೆಮ್ಮಯ್ಯ, ಎಂ.ಎಂ ನರೇಂದ್ರ, ಬಿದ್ದಾಟಂಡ ರೋಜಿ ಚಿಣ್ಣಪ್ಪ, ಕೆಲೇಟಿರ ಸಾಬು ನಾಣಯ್ಯ, ಅರೆಯಡ ನಂದ ನಂಜಪ್ಪ, ಟಿ.ಎ ಮಿಟ್ಟು, ಜೋಕಿರ ಸಜಿತ್ ಸಂದೇಶ್ ರೈ, ಟಿ.ಕೆ ಸುಕುಮಾರ, ಚೋಕಿರ ಮಧು ,ಪ್ರಕಾಶ್, ದಿಲೀಪ್, ಜೀವನ್, ತೇಜ್, ಮಣಿ ಸೇರಿದಂತೆ ಹಲವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.