ಸಾರಾಂಶ
ಗದಗ: ಬಿಹಾರ ಜನತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಹಾರ ಸಿಎಂ ನಿತೀಶ್ ಕುಮಾರ ನಾಯಕತ್ವ ಮೆಚ್ಚಿ ಆಶೀರ್ವಾದ ಮಾಡಿದ್ದಾರೆ. ಇದು ಬಿಹಾರ ಜನತೆಯ ಗೆಲುವಾಗಿದೆ ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ತಂದುಕೊಟ್ಟ ಬಿಹಾರ ಜನತೆಗೆ ಧನ್ಯವಾದಗಳು ಅಂತ ದೇಶದೆಲ್ಲೆಡೆ ಕಾಂಗ್ರೆಸ್ ಹಠಾವೋ ಅಭಿಯಾನ ಪ್ರಾರಂಭವಾಗಿದೆ. ಮುಂದೆ ಈ ವಾಕ್ಯ ಕರ್ನಾಟಕಕಕ್ಕೂ ಬರಲಿದೆ. ರಾಜ್ಯದಲ್ಲಿನ ಒಂದೇ ಒಂದು ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗದ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಪಂಚ ಗ್ಯಾರಂಟಿ ಪೈಕಿ ಶಕ್ತಿ ಯೋಜನೆ ಹೊರತುಪಡಿಸಿ ಯಾವುದೇ ಯೋಜನೆ ಸಮರ್ಪಕವಾಗಿ ಜನತೆಗೆ ತಲುಪಿಲ್ಲ. ಅಭಿವೃದ್ಧಿ ಹೊರತುಪಡಿಸಿ ಅಧಿಕಾರಕ್ಕಾಗಿ ಕುಸ್ತಿ ನಡೆಯುತ್ತಿದೆ. ಸಚಿವರು ತಮ್ಮ ಜವಾಬ್ದಾರಿ ನಿಭಾಯಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಬೆಳೆಹಾನಿ ಪರಿಹಾರವನ್ನು ರಾಜ್ಯ ಸರ್ಕಾರ ಇದೂವರೆಗೂ ಬಿಡುಗಡೆ ಮಾಡುತ್ತಿಲ್ಲ. ಕೇಂದ್ರ ನೀಡಿದ ಅನುದಾನ ಮಾತ್ರ ರೈತರಿಗೆ ತಲುಪುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ರಾಜ್ಯದಲ್ಲಿ 50 ಕಬ್ಬು ತುಂಬಿದ ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳು ಏನು ಮಾಡುತ್ತಿದ್ದರು? ಗೃಹ ಸಚಿವರು ಮಾಹಿತಿ ಇಲ್ಲ ಅಂತ ಹೇಳುತ್ತಾರೆ. ಕೈಲಾಗದ ಸರ್ಕಾರ ನಡೆಸುವುದಕ್ಕಿಂತ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸುವುದು ಸೂಕ್ತ ಎಂದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಹಿರಿಯರಾದ ಎಂ.ಎಂ. ಹಿರೇಮಠ, ಪ್ರಶಾಂತ್ ನಾಯ್ಕರ್, ಅನಿಲ ಅಬ್ಬಿಗೇರಿ, ಲಿಂಗರಾಜ ಪಾಟೀಲ, ಶ್ರೀಕಾಂತ್ ಖಟವಟೆ, ದತ್ತಣ್ಣ ಜೋಶಿ, ನಾಗರಾಜ ತಳವಾರ, ರಮೇಶ ಸಜ್ಜಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))