ಹೊಳೆನರಸೀಪುರದ ಸಮುದಾಯ ಭವನ ನಿರ್ಮಾಣ ವಿಚಾರದಲ್ಲಿ ಜೆಡಿಎಸ್‌ ನಾಯಕರ ನಡುವೆ ಕಲಹ: ವಿಡಿಯೋ ವೈರಲ್‌

| Published : Mar 18 2024, 01:51 AM IST

ಹೊಳೆನರಸೀಪುರದ ಸಮುದಾಯ ಭವನ ನಿರ್ಮಾಣ ವಿಚಾರದಲ್ಲಿ ಜೆಡಿಎಸ್‌ ನಾಯಕರ ನಡುವೆ ಕಲಹ: ವಿಡಿಯೋ ವೈರಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರದ ಮಾದಿಹಳ್ಳಿ ಗ್ರಾಮದಲ್ಲಿ ಸಮೂದಾಯ ಭವನ ನಿರ್ಮಾಣಕ್ಕಾಗಿ ಜಾಗ ಗೊತ್ತುಪಡಿಸುವ ವಿಚಾರಕ್ಕೆ ಜೆಡಿಎಸ್ ಮುಖಂಡ ಮತ್ತು ಗ್ರಾಮದ ಕಾರ್ಯಕರ್ತನ ನಡುವೆ ಮಾತಿನ ಚಕಮುಕಿ ತಾರಕಕ್ಕೇರಿ, ಕೈ ಮಿಲಾಯಿಸುವ ಹಂತದಲ್ಲಿ ಕೆಲವರ ಮದ್ಯಸ್ಥಿಕೆಯಿಂದ ಶಮನವಾಗಿದೆ.

ಭವನದ ಜಾಗ ಸಂಬಂಧ ಪಕ್ಷದ ಸದಸ್ಯರಲ್ಲಿ ಮಾತಿನ ಚಕಮಕಿ

ಹೊಳೆನರಸೀಪುರ: ಮಾದಿಹಳ್ಳಿ ಗ್ರಾಮದಲ್ಲಿ ಸಮೂದಾಯ ಭವನ ನಿರ್ಮಾಣಕ್ಕಾಗಿ ಜಾಗ ಗೊತ್ತುಪಡಿಸುವ ವಿಚಾರಕ್ಕೆ ಜೆಡಿಎಸ್ ಮುಖಂಡ ಮತ್ತು ಗ್ರಾಮದ ಕಾರ್ಯಕರ್ತನ ನಡುವೆ ಮಾತಿನ ಚಕಮುಕಿ ತಾರಕಕ್ಕೇರಿ, ಕೈ ಮಿಲಾಯಿಸುವ ಹಂತದಲ್ಲಿ ಕೆಲವರ ಮದ್ಯಸ್ಥಿಕೆಯಿಂದ ಶಮನವಾಗಿದೆ. ಜತೆಗೆ ಪರಸ್ಪರ ಬೈಗುಳದ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಓಡನಹಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಮಾದಿಹಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ೫ ಲಕ್ಷ ರು. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸುವ ಉದ್ದೇಶದಿಂದ ಶನಿವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಹಾಗೂ ಗ್ರಾಪಂ ಅಧಿಕಾರಿಗಳ ಸಮ್ಮುಖದಲ್ಲಿಯೇ ಜೋರಾಗಿ ಜಗಳ ನಡೆದು ರಂಪಾಟ ನಡೆದಿದೆ. ಶಾಸಕ ಎಚ್.ಡಿ.ರೇವಣ್ಣರ ಸಂಬಂಧಿಕ ಹಾಗೂ ಜಿಪಂ ಮಾಜಿ ಸದಸ್ಯ ಎಚ್.ಎನ್.ದೇವೇಗೌಡ (ಪಾಪಣ್ಣಿ) ಹಾಗೂ ಗ್ರಾಪಂ ಅಧ್ಯಕ್ಷೆ ಶ್ರುತಿ ಪತಿ ಕುಮಾರ್ ಎಂಬಾತನ ನಡುವೆ ಮಾತಿನ ಸಂಘರ್ಷ ನಡೆದಿದೆ.

ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಪಾಪಣ್ಣಿ ವಿರುದ್ದ ಜೆಡಿಎಸ್ ಕಾರ್ಯಕರ್ತ ಕುಮಾರ್, ‘ಗ್ರಾಪಂ ಕೆಲಸ ಕಾರ್ಯಕ್ಕೆ ಮುಂದಾಗಲು ನೀನ್ಯಾರು? ಇದನ್ನೆಲ್ಲಾ ಮಾಡಲು ನೀತಿ, ನಿಯಮ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇದು ಜಗಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಸಾಕಷ್ಟು ರಾಜಕೀಯ ಒಳ ಮರ್ಮಗಳನ್ನು ಬಹಿರಂಗವಾಗಿ ಆಕ್ಷೇಪಿಸಿದ ಕುಮಾರ್ ವಿರುದ್ಧ ಪಾಪಣ್ಣಿಯೂ ಹರಿಹಾಯ್ದಿದ್ದಾರೆ, ಅಷ್ಟರಲ್ಲಿ ಗ್ರಾಮಸ್ಥರು ಇಬ್ಬರನ್ನೂ ಸಮಧಾನ ಪಡಿಸಿದ್ದಾರೆ.

ಅರಕಲಗೂಡು ವಿಧಾನಸಭಾ ವ್ಯಾಪ್ತಿಗೆ ಒಳಪಡುವ ಹಳ್ಳಿಮೈಸೂರು ಹೋಬಳಿ ಹೊಳೆನರಸೀಪುರ ತಾಲೂಕು ಆಡಳಿತದಲ್ಲಿದ್ದು, ಜನಪ್ರತಿನಿಧಿ ಅಲ್ಲದೆ ಗ್ರಾಪಂಯ ಕೆಲಸಕ್ಕೆ ಮುಖಂಡ ಅದ್ಯಕ್ಷೆಯನ್ನು ಕೇಳದೆ ಶಿಷ್ಟಾಚಾರ ಬದಿಗೊತ್ತಿ ಗುದ್ದಲಿ ಪೂಜೆಗೆ ಮುಂದಾಗಿದ್ದರು ಎನ್ನಲಾಗಿದೆ. ವಿಚಾರ ಗ್ರಾಮದ ಕೆಲವರು ಕೆರಳಲು ಕಾರಣವಾಗಿದೆ. ಈ ಹಿಂದೆ ಅರಕಲಗೂಡು ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿ, ಪಾಪಣ್ಣಿ ವಿರುದ್ದ ಸಹ ಇಂತಹದ್ದೇ ಹಲವು ಆರೋಪ ಮಾಡಿದ್ದರು.ಹೊಳೆನರಸೀಪುರದ ಹಳ್ಳಿಮೈಸೂರಿನ ಮಾದಿಹಳ್ಳಿ ಗ್ರಾಮದಲ್ಲಿ ಸಮೂದಾಯ ಭವನ ನಿರ್ಮಾಣ ಉದ್ದೇಶಕ್ಕೆ ಜೆಡಿಎಸ್ ಮುಖಂಡ, ಕಾರ್ಯಕರ್ತನ ನಡುವೆ ಸಂಘರ್ಷ ನಡೆಯಿತು.