ಸಾರಾಂಶ
ಅಂಕೋಲಾ: ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿ ಸಮಾನ ಮನಸ್ಕ ಸಂಘಟನೆಗಳ ಜತೆ ಸೇರಿ ಫೆ. 10ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ, ವಿಧಾನಸೌಧ ಚಲೋ ಸಂಘಟಿಸಿದೆ. ಇದರ ಪ್ರಚಾರ ಕರಪತ್ರವನ್ನು ಭಾನುವಾರ ಪಟ್ಟಣದಲ್ಲಿ ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಸಾಗುವಳಿ ಹಾಗೂ ವಸತಿಗಾಗಿ ತಲೆತಲಾಂತರಗಳಿಂದ ವಾಸವಾಗಿರುವ ಅರಣ್ಯ ಭೂಮಿ ಸಾಗುವಳಿದಾರ ರೈತ ಮತ್ತು ಕೂಲಿಕಾರರ ಕುಟುಂಬಗಳಿಗೆ ಅರ್ಜಿ ಪರಿಶೀಲನೆ ಹೆಸರಲ್ಲಿ 75 ವರ್ಷದ ಹಳೆಯ ದಾಖಲೆ ಅಂದರೆ 1930ಕ್ಕಿಂತ ಹಿಂದಿನ ದಾಖಲೆ ಪತ್ರವನ್ನು ಪದೇ ಪದೇ ಕೇಳಿ ಭೂಮಿಯಿಂದ ಹೊರಹಾಕುವ ತಂತ್ರವನ್ನು ಅಧಿಕಾರಿಗಳು ಕೈಗೊಂಡಿದ್ದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತ ವಿರೋಧಿ, ಬಡ ಕೃಷಿಕೂಲಿಕಾರರ ವಿರೋಧಿಯಾದ ಸರ್ಕಾರದ ಈ ತಂತ್ರವನ್ನು ಸೋಲಿಸಬೇಕಾದರೆ ಎಲ್ಲ ಅರಣ್ಯ ಅತಿಕ್ರಮಣದಾರರು ಸಂಘಟಿತರಾಗಿ ಉಗ್ರ ಹೋರಾಟ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿ ಜಿಲ್ಲೆಯಿಂದಲೂ ನೂರಾರು ಜನರು ಪಾಲ್ಗೊಳ್ಳಬೇಕು ಎಂದರು.ಅರ್ಜಿ ಪರಿಶೀಲನೆ ಹೆಸರಿನಲ್ಲಿ 3 ತಲೆಮಾರು ಅಥವಾ 75 ವರ್ಷದ ದಾಖಲೆ ಕೇಳುವುದನ್ನು ನಿಲ್ಲಿಸಬೇಕು. ಜನಪ್ರತಿನಿಧಿಗಳಿಲ್ಲದೇ ಪರಿಶೀಲನೆ ನಡೆಸುವ ಅಧಿಕಾರ ಅರಣ್ಯ ಹಕ್ಕು ಸಮಿತಿಗಿಲ್ಲದೇ ಇರುವುದರಿಂದ ಅಧಿಕಾರಿಗಳು ಪರಿಶೀಲನೆ ನಿಲ್ಲಿಸಬೇಕು. ಈಗಿರುವ ಕಾಯ್ದೆಯಲ್ಲಿ ಅರಣ್ಯ ಅತಿಕ್ರಮಣ ಭೂಮಿಗೆ ಹಕ್ಕುಪತ್ರ ನೀಡಬೇಕು. ಅದು ಸಾಧ್ಯವಾಗದಿದ್ದರೆ ಅಗತ್ಯ ತಿದ್ದುಪಡಿಯಾದರೂ ಮಾಡಿ ಅರಣ್ಯಭೂಮಿ ಹಕ್ಕು ನೀಡಬೇಕು. ಅರಣ್ಯ ಇಲಾಖೆಯಿಂದ ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು. ಅತಿಕ್ರಮಣ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳಲು, ದುರಸ್ತಿ ಮಾಡಿಕೊಳ್ಳಲು, ಕೃಷಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿ ಮಾಡಬಾರದು. 1980ರ ಪೂರ್ವದ ಬಿಟ್ಟು ಹೋದ ಪ್ರಕರಣಗಳನ್ನು ವಿಶೇಷವಾಗಿ ಪರಿಗಣಿಸಿ ತುರ್ತು ಇತ್ಯರ್ಥಪಡಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯ ಭೂಮಿ ಹಕ್ಕು ನೀಡಲು ರಾಜಕೀಯ ಇಚ್ಛಾಶಕ್ತಿ ತೋರಿಸಬೇಕು. ಎಂಎಲ್ಎ, ಎಂಪಿ, ಮಂತ್ರಿಗಳು, ಮುಖ್ಯಮಂತ್ರಿಗಳು ರೈತ ಮತ್ತು ಕೃಷಿ ಕೂಲಿಕಾರರ ಪರವಾದ ತೀರ್ಮಾನ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪುರಸಭೆ ಸದಸ್ಯ ಶಬ್ಬೀರ ಶೇಖ್, ಮುಖಂಡರಾದ ಸುರೇಶ ನಾಯ್ಕ ಅಸ್ಲೆಗದ್ದೆ ಮುಂತಾದವರು ಇದ್ದರು.
ಕಾಂಗ್ರೆಸ್ ಬಲಪಡಿಸಲು ಪ್ರಯತ್ನ: ಅಮೋದ ಸಿರ್ಸಿಕರಶಿರಸಿ: ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಗೊಳಿಸಲು ಪ್ರಯತ್ನಿಸುವುದರ ಜತೆ ಯುತ್ ಕಾಂಗ್ರೆಸ್ ಸದೃಢಗೊಳಿಸುತ್ತೇನೆ ಎಂದು ಯುತ್ ಕಾಂಗ್ರೆಸ್ ನೂತನ ಅಧ್ಯಕ್ಷ ಅಮೋದ ಸಿರ್ಸಿಕರ ತಿಳಿಸಿದರು.ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯುವಕರು ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿರಬೇಕು ಎಂಬ ಉದ್ದೇಶದಿಂದ ಯುತ್ ಕಾಂಗ್ರೆಸ್ ಘಟಕವನ್ನು ಹಿರಿಯರು ಸ್ಥಾಪಿಸಿದ್ದಾರೆ. ನನ್ನ ಗೆಲುವಿಗೆ ಹಿಂದಿನ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ, ಶಾಸಕ ಭೀಮಣ್ಣ ನಾಯ್ಕ, ಹಿರಿಯ ಮುತ್ಸದ್ಧಿಗಳಾದ ಆರ್.ವಿ. ದೇಶಪಾಂಡೆ, ಬಿ.ಕೆ. ಹರಿಪ್ರಸಾದ, ಯುವ ನಾಯಕ ನಿವೇದಿತ್ ಆಳ್ವಾ ಸಹಕರಿಸಿದ್ದಾರೆ. ಯುವ ಕಾರ್ಯಕರ್ತರ ಶ್ರಮದಿಂದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಲ್ಲಾಪುರ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ ನಾಯ್ಕ, ಬನವಾಸಿ ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಉಮಾಕಾಂತ ನಾಯ್ಕ, ಶಿರಸಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ನಾಯ್ಕ, ಯೋಗಾನಂದ ಮತ್ತಿತರರು ಇದ್ದರು.