ಸಾರಾಂಶ
ಜೀವನದ ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ ,ನೆಮ್ಮದಿ, ಶಾಂತಿಗಳ ದಡ ಸೇರಲು ಭಗವಂತನು ಕರುಣಿಸಿರುವ ಪರಮೋತ್ತಮ ಸಾಧನ ಸಂಗೀತ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಸದಸ್ಯರಾದ ಶ್ರೀನಿವಾಸ್ ತಿಳಿಸಿದರು. ನಲ್ಮೆಯ ದೈವಭಕ್ತರಿಗೆ ಮತ್ತು ಕಲಾರಸಿಕರಿಗೆ ಶ್ರೀ ವಿಶ್ವಾವಸುನಾಮ ಸಂವತ್ಸರದ ಶುಭಾಶಯಗಳನ್ನು ತಿಳಿಸಿದ ಅವರು, 10 ದಿನ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀನಿವಾಸ್ ವಿನಂತಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜೀವನದ ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ ,ನೆಮ್ಮದಿ, ಶಾಂತಿಗಳ ದಡ ಸೇರಲು ಭಗವಂತನು ಕರುಣಿಸಿರುವ ಪರಮೋತ್ತಮ ಸಾಧನ ಸಂಗೀತ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಸದಸ್ಯರಾದ ಶ್ರೀನಿವಾಸ್ ತಿಳಿಸಿದರು.ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ 2ನೇ ದಿವಸದ ಕಾರ್ಯಕ್ರಮದಲ್ಲಿ ವಿದ್ವಾನ್ ವಿಷ್ಣು ವೆಂಕಟೇಶ್ ಅವರು ಮ್ಯಾಂಡೊಲಿನ್ ವಾದನ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ನಲ್ಮೆಯ ದೈವಭಕ್ತರಿಗೆ ಮತ್ತು ಕಲಾರಸಿಕರಿಗೆ ಶ್ರೀ ವಿಶ್ವಾವಸುನಾಮ ಸಂವತ್ಸರದ ಶುಭಾಶಯಗಳನ್ನು ತಿಳಿಸಿದ ಅವರು, 10 ದಿನ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಶ್ರೀನಿವಾಸ್ ವಿನಂತಿಸಿದರು.
ಈ ಸಂದರ್ಭದಲ್ಲಿ ಸೇವಾ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ್, ಸದಸ್ಯರಾದ ನರಸಿಂಹಮೂರ್ತಿ, ಕೃಷ್ಣಯ್ಯಂಗಾರ್, ಜನಾರ್ಧನ್, ತಿರುಮಲಚಾರ್, ಶ್ರೀನಿವಾಸ್, ಶ್ರೀನಿಧಿ, ರಾ.ಸು. ನಾಗರಾಜ್, ಸತೀಶ್, ಸಂಪತ್ ಕುಮಾರ್ ಮುಂತಾದವರು ಇದ್ದರು.