ಕಟೀಲಿನಲ್ಲಿ ಕಟೀಲು ದೇವಸ್ಥಾನ ಹಾಗೂ ಎಕ್ಕಾರು ಶಿಬರೂರು ಕೊಡೆತ್ತೂರು ಅತ್ತೂರು ಗ್ರಾಮಸ್ಥರಿಂದ ದುರ್ಗಾ ಮಕ್ಕಳ ಮೇಳ ಕಟೀಲು ಪ್ರತಿಷ್ಠಾನಗಳ ಸಹಯೋಗದಲ್ಲಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರಿಗೆ ಹುಟ್ಟೂರ ಗುರುವಂದನೆ ನೆರವೇರಿತು.

ಮೂಲ್ಕಿ: ಜನ್ಮಭೂಮಿ ಯಾವತ್ತಿಗೂ ಶ್ರೇಷ್ಠವಾದುದು. ಹೆಚ್ಚು ಪ್ರೀತಿಯದ್ದು. ಕಟೀಲು ಜನ್ಮಭೂಮಿ. ಅದೇ ರೀತಿ ನಮ್ಮ ತಾಯಿಭೂಮಿ. ಇಲ್ಲಿ ನಡೆದ ಗುರುವಂದನೆ ತಾಯಿಯ ಅನುಗ್ರಹ. ತಾಯಿಗೆ ಏನು ಕೊಟ್ಟರೂ, ಎಷ್ಟು ಕೊಟ್ಟರೂ ಸಮಾಧಾನ ಇರುವುದಿಲ್ಲ ಎಂದು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಕಟೀಲಿನಲ್ಲಿ ಕಟೀಲು ದೇವಸ್ಥಾನ ಹಾಗೂ ಎಕ್ಕಾರು ಶಿಬರೂರು ಕೊಡೆತ್ತೂರು ಅತ್ತೂರು ಗ್ರಾಮಸ್ಥರಿಂದ ದುರ್ಗಾ ಮಕ್ಕಳ ಮೇಳ ಕಟೀಲು ಪ್ರತಿಷ್ಠಾನಗಳ ಸಹಯೋಗದಲ್ಲಿ ಹುಟ್ಟೂರ ಗುರುವಂದನೆ ಸ್ವೀಕರಿಸಿ ಮಾತನಾಡಿದರು.ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ವೇದವ್ಯಾಸ ತಂತ್ರಿ, ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಭಟ್, ಶರವು ರಾಘವೇಂದ್ರ ಶಾಸ್ತ್ರಿ, ಸಂಸದ ನಳಿನ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್, ಶಂಕರ ಎಲೆಕ್ಕ್ರಿಕಲ್ಸ್ ನ ರಾಜೇಶ್ ಶೆಟ್ಟಿ, ಲಕ್ಷ್ಮೀ ಪ್ರಾಣೇಶ್ ರಾವ್, ಮಾಜಿ ಸಚಿವ ಅಭಯಚಂದ್ರ, ಕರುಣಾಕರ ಶೆಟ್ಟಿ ಮರವೂರು, ವಿರಾರ್ ಶಂಕರ ಶೆಟ್ಟಿ, ಎಂ. ಬಿ. ಪುರಾಣಿಕ್, ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಸಿ.ಎ. ಸುದೇಶ್ ರೈ, ಕೊಂಜಲುಗುತ್ತು ಪ್ರಭಾಕರ ಶೆಟ್ಟಿ, ಸುಬ್ರಹ್ಮಣ್ಯಪ್ರಸಾದ್, ಪ್ರದ್ಯುಮ್ನ ರಾವ್, ಉಮೇಶ್ ಗುತ್ತಿನಾರ್, ರಘುನಾಥ ಸೋಮಯಾಜಿ, ಕಟೀಲು ದೇಗುಲದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬಿಪಿನ್ ಚಂದ್ರ ಶೆಟ್ಟಿ, ಪ್ರವೀಣ್ ದಾಸ್ ಭಂಡಾರಿ ಮತ್ತಿತರರಿದ್ದರು.

ವಿದ್ವಾನ್ ಅದ್ಯಪಾಡಿ ಹರಿದಾಸ ಭಟ್ ಅಭಿನಂದನಾ ಮಾತುಗಳನ್ನಾಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಸಾಯಿನಾಥ ಶೆಟ್ಟಿ ನಿರೂಪಿಸಿದರು.ಫಲ ಪುಷ್ಪ ಸುವಸ್ತುಗಳ ಕಾಣಿಕೆ: ಪಲಿಮಾರು ಶ್ರೀಗಳಿಗೆ 70 ವರುಷಗಳು ಸಂದ ಸಂದರ್ಭದಲ್ಲಿ ಕಟೀಲಿನಲ್ಲಿ ನಡೆದ ಹುಟ್ಟೂರ ಗುರುವಂದನೆಯಲ್ಲಿ ಶ್ರೀಗಳಿಗೆ 70 ವಿವಿಧ ಹಣ್ಣುಹಂಪಲುಗಳು, 70 ವಿಧದ ಪುಷ್ಪಗಳು, ಕಟೀಲು ದೇವರ ಶೇಷ ವಸ್ತ್ರ, ತುಳಸಿ ಹಾರ, ಮಲ್ಲಿಗೆ ಮಾಲೆ, ಶಾಲು, ಕಾವಿ, ಗಂಧ, ಕುಂಕುಮ, ಪಾದುಕೆ, ನವ ಧಾನ್ಯಗಳು, ಮಣೆ, ಕೇಸರಿ, ಜೇನು ತುಪ್ಪ ಬೆಳ್ಳಿಯ ಕೌಳಿಗೆ ಸೌಂಟು, ಬಂಗಾರದ ಪದಕ ಹೀಗೆ 70 ವಿಧದ ಸುವಸ್ತುಗಳನ್ನು ಹಾಗೂ ಚಿನ್ನ ಲೇಪಿತ ಬೆಳ್ಳಿಯ ಅಭಿವಂದನ ಪತ್ರ ನೀಡಿ ಗೌರವಿಸಲಾಯಿತು. ವಿಶೇಷವಾಗಿ ಯಕ್ಷಗಾನದ ಕೃಷ್ಣನ ಮೂರ್ತಿಯನ್ನು ಶ್ರೀಗಳಿಗೆ ನೀಡಲಾಯಿತು.ಭಕ್ತರಿಗೆ ಕದಿಕೆ, ಬೆಟ್ಟದ ನೆಲ್ಲಿಕಾಯಿ, ಸುರಗಿ, ಬಿಲ್ವಪತ್ರ, ಚಂಪೇಹಣ್ಣು, ಬುಗುರಿ, ಹರಿತಕಿ ಹೀಗೆ ವಿರಳವಾಗಿರುವ 70 ಯಾಜ್ಞಿಕ ಗಿಡಗಳನ್ನು ಶ್ರೀಗಳು ವಿತರಿಸಿದರು.