ಸಾರಾಂಶ
ವಿವಿಧ ಸ್ಪರ್ಧೆಗಳ ವೇದಿಕೆ ಸಹಿತ ಹಾಗೂ ವೇದಿಕೆ ರಹಿತ ಚಟುವಟಿಕೆಗಳನ್ನು ಒಳಗೊಂಡಿವೆ. ಎಲ್ಲರನ್ನು ಆಕರ್ಷಿಸುವ ಸಾಕಷ್ಟು ಸ್ಪರ್ಧೆಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಡಾಗ್ ಶೋ, ಆಟೋ ಎಕ್ಸ್ ಪೋ, ರಂಗೋಲಿ, ಫೀಟ್ ಆನ್ ಫೈರ್, ವಾಯ್ಸ್ ಆಫ್ ವಿವಿಸಿಇ, ಮೆಹೆಂದಿ, ಬೆಂಕಿಯಿಲ್ಲದ ಅಡುಗೆ ಮಾಡುವುದು, ಬಾಕ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್, ಫ್ಯಾಶನ್ ಫ್ರಾಂಟಿಯರ್, ಟಗ್ ಆಫ್ ವಾರ್, ಪಿಎಸ್ 4 ಕ್ಲಾಷ್, ಬ್ಯಾಡ್ಮಿಂಟನ್, ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್ ಸ್ಪರ್ಧೆಗಳು ಸೇರಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ (ವಿವಿಸಿಇ) ಮೇ 3 ರಿಂದ 5 ರವರೆಗೆ ವಿದ್ಯುತ್- 2024 ಎಂಬ ಮೂರು ದಿನಗಳ ವಾರ್ಷಿಕ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಕಾರ್ಯದರ್ಶಿ ಡಾ.ಬಿ. ಜಗದೀಶ್ ತಿಳಿಸಿದರು.ಮೂರು ದಿನಗಳ ಈ ವಿದ್ಯುತ್ ಕಾರ್ಯಕ್ರಮಕ್ಕೆ ಮೇ 3ರ ಬೆಳಗ್ಗೆ 10ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಚಾಲನೆನೀಡುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಕಾರ್ಯದರ್ಶಿ ಪಿ. ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಸದಾಶಿವೇಗೌಡ ಉಪಸ್ಥಿತರಿರುವರು. ಉದ್ಘಾಟನೆಯ ನಂತರ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ಯುತ್ ಎಂಬುದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ವಾರ್ಷಿಕ ಸಂಭ್ರಮವಾಗಿದೆ. ಇಲ್ಲಿ ಸಾಂಸ್ಕೃತಿಕ ಮತ್ತು ಕಲಾತ್ಮಕ ಕಾರ್ಯಕ್ರಮಗಳ ಪ್ರದರ್ಶನಗೊಳ್ಳುತ್ತದೆ. ಬಹು ನಿರೀಕ್ಷಿತ ಉತ್ಸವವಾದ ಇದರಲ್ಲಿ ವಿವಿಧ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಆರೋಗ್ಯಕರ ಸ್ಪರ್ಧೆ ಮತ್ತು ಸೌಹಾರ್ದತೆಯ ಮನೋಭಾವವನ್ನು ಬೆಳೆಸುತ್ತದೆ. ಈ ವರ್ಷ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಒಂದುಗೂಡಿಸಲಿದೆ ಎಂದರು.ವಿವಿಧ ಸ್ಪರ್ಧೆಗಳು:
ವಿವಿಧ ಸ್ಪರ್ಧೆಗಳ ವೇದಿಕೆ ಸಹಿತ ಹಾಗೂ ವೇದಿಕೆ ರಹಿತ ಚಟುವಟಿಕೆಗಳನ್ನು ಒಳಗೊಂಡಿವೆ. ಎಲ್ಲರನ್ನು ಆಕರ್ಷಿಸುವ ಸಾಕಷ್ಟು ಸ್ಪರ್ಧೆಗಳನ್ನು ಒಳಗೊಂಡಿದೆ. ಪ್ರಮುಖವಾಗಿ ಡಾಗ್ ಶೋ, ಆಟೋ ಎಕ್ಸ್ ಪೋ, ರಂಗೋಲಿ, ಫೀಟ್ ಆನ್ ಫೈರ್, ವಾಯ್ಸ್ ಆಫ್ ವಿವಿಸಿಇ, ಮೆಹೆಂದಿ, ಬೆಂಕಿಯಿಲ್ಲದ ಅಡುಗೆ ಮಾಡುವುದು, ಬಾಕ್ಸ್ ಕ್ರಿಕೆಟ್ ಚಾಂಪಿಯನ್ ಶಿಪ್, ಫ್ಯಾಶನ್ ಫ್ರಾಂಟಿಯರ್, ಟಗ್ ಆಫ್ ವಾರ್, ಪಿಎಸ್ 4 ಕ್ಲಾಷ್, ಬ್ಯಾಡ್ಮಿಂಟನ್, ಫೋಟೋಗ್ರಫಿ ಸ್ಪರ್ಧೆ ಮತ್ತು ರೀಲ್ಸ್ ಸ್ಪರ್ಧೆಗಳು ಸೇರಿವೆ ಎಂದು ಅವರು ವಿವರಿಸಿದರು.ಕಲಾವಿದರು ಪ್ರದರ್ಶನ:
ವಿದ್ಯುತ್ 2024ರ ಅಂಗವಾಗಿ ಹಲವು ಪ್ರಸಿದ್ಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ಮೇ 3 ರಂದು ಸ್ಯಾಂಡಲ್ವುಡ್ ನೈಟ್ ಮತ್ತು ಲಗೋರಿ ಬ್ಯಾಂಡ್ ಪ್ರೇಕ್ಷಕರನ್ನು ರಂಜಿಸಲಿದೆ. ಮೇ 4 ರಂದು ಬಾಲಿವುಡ್ ನೈಟ್ ಮತ್ತು ರಾಘವ್ ಚೈತನ್ಯ ಅವರಿಂದ ಗಾಯನ ಕಾರ್ಯಕ್ರಮ ಇರಲಿದೆ. ಮೇ 5 ರಂದು ಡಿಜೆ ರಾತ್ರಿ ಮತ್ತು ಅಂತಾರಾಷ್ಟ್ರೀಯ ಡಿಜೆ ಕ್ಯಾಂಡಿಸ್ ರೆಡ್ಡಿಂಗ್ ತಂಡ ಯುವ ಪ್ರೇಕ್ಷಕರನ್ನು ರಂಜಿಸಲಿದೆ ಎಂದು ಅವರು ತಿಳಿಸಿದರು.ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಎಚ್.ಎಸ್. ಪುನೀತ್, ಆಡ್ರಿ ಆರ್ಲೀನ್, ವಿದ್ಯಾರ್ಥಿಗಳಾದ ಪ್ರಜ್ವಲ್ ಕಲಾಲ್, ಧರಣೇಶ್, ಹರ್ಷಿತ್, ಇಂಪನಾ ಇದ್ದರು.