ಸಾರಾಂಶ
ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಐತಿಹಾಸಿಕ ಸ್ಥಳವಾದ ಹಳೇಬೀಡಿನ ಶ್ರೀ ಹೊಯ್ಸಳೇಶ್ವರ ದೇವಾಲಯದ ರಸ್ತೆಯ ಕಾಮಗಾರಿಯನ್ನು ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ವೀಕ್ಷಿಸಿದರು. ವೀಕ್ಷಣೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಮಗಾರಿ ವಿಳಂಬವಾಗಿರುವುದು ಬೇಸರದ ವಿಚಾರವಾಗಿದೆ . ಹಳೇಬೀಡಿಗೆ ಪ್ರವಾಸಿಗರು ಹಾಗೂ ವಾಹನಗಳು ಹೆಚ್ಚು ಬರುತ್ತಿರುವುದು ರಸ್ತೆಯಲ್ಲಿ ನಿತ್ಯವು ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಮಾಡಬೇಕೆಂದು ಆದೇಶಿಸಿದರು.
ಕನ್ನಡಪ್ರಭ ವಾರ್ತೆ ಹಳೇಬೀಡು
ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಐತಿಹಾಸಿಕ ಸ್ಥಳವಾದ ಹಳೇಬೀಡಿನ ಶ್ರೀ ಹೊಯ್ಸಳೇಶ್ವರ ದೇವಾಲಯದ ರಸ್ತೆಯ ಕಾಮಗಾರಿಯನ್ನು ಬೇಲೂರು ಕ್ಷೇತ್ರದ ಶಾಸಕ ಎಚ್.ಕೆ. ಸುರೇಶ್ ವೀಕ್ಷಿಸಿದರು.ವೀಕ್ಷಣೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಮಗಾರಿ ವಿಳಂಬವಾಗಿರುವುದು ಬೇಸರದ ವಿಚಾರವಾಗಿದೆ . ಹಳೇಬೀಡಿಗೆ ಪ್ರವಾಸಿಗರು ಹಾಗೂ ವಾಹನಗಳು ಹೆಚ್ಚು ಬರುತ್ತಿರುವುದು ರಸ್ತೆಯಲ್ಲಿ ನಿತ್ಯವು ಸಂಚಾರಕ್ಕೆ ಭಾರಿ ತೊಂದರೆಯಾಗಿದೆ. ಸ್ಥಳೀಯ ನಾಗರಿಕರು-ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ ಎಂದು ತಿಳಿದು ಬಂದಿದೆ. ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆದು ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಮಾಡಬೇಕೆಂದು ಆದೇಶಿಸಿದರು.
ಪೊಲೀಸ್ ಇಲಾಖೆಯ ಅಧಿಕಾರಿಯನ್ನು ಕರೆದು ರಸ್ತೆಯ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ರಸ್ತೆ ಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲದ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ತಿಳಿಸಿದರು.ಎ.ಇ.ಇ. ದಯಾನಂದ್ ಮಾತನಾಡುತ್ತ, ಹಳೇಬೀಡಿನ ೨ ಭಾಗದ ರಸ್ತೆಯಲ್ಲಿ ೭.೫ ಮೀಟರ್ ಅಗಲ ಕಾಂಕ್ರೀಟ್ ರಸ್ತೆ ಮಧ್ಯದಲ್ಲಿ ರಸ್ತೆ ವಿಭಜಕ ಹಾಗೂ ರಸ್ತೆ ಬದಿಯ ದಾರಿಯನ್ನು ನಿರ್ಮಿಸಲಾಗುವುದು ಹಾಗೂ ಹಳೇಬೀಡಿನ ಇತಿಹಾಸದ ಪ್ರವಾಸಿ ಮಂದಿರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರರು ಸತೀಶ್, ಇಂಜಿನಿಯರ್ ಸೋಮಶೇಖರ್, ಮಂಜುನಾಥ್, ದರ್ಶನ್ ಹಾಜರಿದ್ದರು.* ಬಾಕ್ಸ್‌ನ್ಯೂಸ್-೧
ಬೇಲೂರು- ಹಳೇಬೀಡಿನಂತಹ ಪ್ರವಾಸಿ ತಾಣಗಳ ಅಭಿವೃದ್ಧಿ ಬಹಳ ಅಗತ್ಯವಾಗಿರುತ್ತದೆ. ಪ್ರವಾಸಿಗರು ಹೆಚ್ಚಾಗಿ ಬರುವ ಪ್ರವಾಸಿ ತಾಣಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಬರುವ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಾರೆ ಅದರ ಬಗ್ಗೆ ತಕ್ಷಣೇವೆ ಪ್ರಾಧಿಕಾರರಚನೆ ಆಗಲಿದೆ. - ಎಚ್.ಕೆ. ಸುರೇಶ್, ಶಾಸಕ.