ಮರ್ಕಲ್ ಪಂಚಾಯಿತಿ ಸದಸ್ಯರಿಂದ ಜಾಗರಣಾ ಪ್ರತಿಭಟನೆ

| Published : Mar 27 2025, 01:04 AM IST

ಮರ್ಕಲ್ ಪಂಚಾಯಿತಿ ಸದಸ್ಯರಿಂದ ಜಾಗರಣಾ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಅಧ್ಯಕ್ಷ, ಪಿಡಿಒ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಠಾಚಾರ, ಲಂಚಗುಳಿತನ ಆರೋಪ ಹೊರಿಸಿ ನಾಲ್ವರು ಸದಸ್ಯರು ಅಹೋ ರಾತ್ರಿ ಜಾಗರಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮರ್ಕಲ್ ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ, ಶೃಂಗೇರಿ

ಅಧ್ಯಕ್ಷ, ಪಿಡಿಒ ವಿರುದ್ಧ ಸ್ವಜನ ಪಕ್ಷಪಾತ, ಭ್ರಷ್ಠಾಚಾರ, ಲಂಚಗುಳಿತನ ಆರೋಪ ಹೊರಿಸಿ ನಾಲ್ವರು ಸದಸ್ಯರು ಅಹೋ ರಾತ್ರಿ ಜಾಗರಣೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮರ್ಕಲ್ ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ.

ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಠಾಚಾರ, ಲಂಚಗುಳಿತನ, ಸ್ವಜನಪಕ್ಷಪಾತ ಧೋರಣೆಗಳಿಗೆ ಸಂಬಂಧಿಸಿದಂತೆ ಪಿಡಿಒ ಅಧ್ಯಕ್ಷರಲ್ಲಿ ಈ ನಾಲ್ವರು ಸದಸ್ಯರು ಸಮಜಾಯಿಷಿ ಕೇಳಿದ್ದಾರೆ. ಆದರೆ ಅಧ್ಯಕ್ಷ, ಪಿಡಿಒಗಳು ಯಾವುದೇ ರೀತಿಯಲ್ಲಿ ಸ್ಪಷ್ಟೀಕರಣ ನೀಡದೇ ಹೊರಹೋಗಿದ್ದನ್ನು ಖಂಡಿಸಿ ಪಂಚಾಯಿತಿ ಕಚೇರಿಯೊಳಗೇ ಈ ಸದಸ್ಯರು ಹೊರಹೋಗದೇ ನಮಗೆ ನ್ಯಾಯ ಸಿಗೋವರೆಗೂ ಹೋಗುವುದಿಲ್ಲ ಎಂದು ಅಲ್ಲೇ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಅಹೋರಾತ್ರಿ ಜಾಗರಣೆ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಕಳೆದೆರೆಡು ವರ್ಷಗಳಿಂದ ಈ ಪಂಚಾಯಿತಿಯಲ್ಲಿ ಅಧ್ಯಕ್ಷ, ಪಿಡಿಒ ವಿರುದ್ಧ ಅನೇಕ ಬಾರಿ ಇಂತಹ ಆರೋಪ ಪ್ರತ್ಯಾರೋ ಪಗಳು ನಡೆಯುತ್ತಿದ್ದು, ಗ್ರಾಪಂ ಕಚೇರಿ ಎದುರು ಧರಣಿ, ಪ್ರತಿಭಟನೆ ನಡೆದಿದ್ದವು. ಉನ್ನತ ಅಧಿಕಾರಿಗಳು ಧರಣಿ, ಪ್ರತಿಭಟನೆ ನಿರತ ಸದಸ್ಯರೊಡನೆ ಮಾತುಕತೆ ನಡೆಸಿದ್ದರೂ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಶಾಸಕರು ಇದಕ್ಕೆ ಇತಿಶ್ರೀ ಹಾಡುವಲ್ಲಿ ವಿಫರಾಗಿದ್ದು ಕಂಡು ಬರುತ್ತಿದೆ ಎಂದು ಆರೋಪಿಸಲಾಗಿದೆ.

26 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಮರ್ಕಲ್ ಪಂಚಾಯಿತಿ ಕಚೇರಿಯಲ್ಲಿ ಪಿಡಿಓ ಅಧ್ಯಕ್ಷರ ವಿರುದ್ದ ಸದಸ್ಯರು ರಾತ್ರಿ ಧರಣಿ ನಡೆಸಿದರು.