ಸಾರಾಂಶ
ನೆಲಮಂಗಲ: ಅಸುರರನ್ನು ಸಂಹರಿಸುವ ಮೂಲಕ ಶಿಷ್ಟರನ್ನು ರಕ್ಷಿಸಲು ಶಕ್ತಿದೇವಿಯ ರೂಪಗಳನ್ನು ಪಡೆದಿರುವುದು ಪುರಾಣಗಳಲ್ಲಿದೆ. ಭಯ, ಶತ್ರು ನಿವಾರಣೆಯಾಗಿ ಅರಿಷಡ್ವರ್ಗಗಳು, ವಿವಿಧ ದುರ್ಗುಣಗಳನ್ನು ವರ್ಜಿಸಿ ಸದ್ಗುಣಗಳನ್ನು ರೂಢಿಸಿಕೊಳ್ಳಲು ಪ್ರತಿಜ್ಞೆ ಮಾಡಬೇಕಿದೆ ಎಂದು ಶ್ರೀಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಎನ್.ಎಲ್.ಸತ್ಯನಾರಾಯಣ ಶಾಸ್ತ್ರೀಜಿ ತಿಳಿಸಿದರು.

ನಗರದ ಶ್ರೀ ಗಣೇಶನ ಗುಡಿಯಲ್ಲಿ ವಿಜಯದಶಮಿ ಪ್ರಯುಕ್ತ ಶ್ರೀ ರಾಜರಾಜೇಶ್ವರಿ ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ, ದೇವಿಯನ್ನು ಪೂಜಿಸುವ ಪದ್ಧತಿಯೇ ವಿಶಿಷ್ಟ. ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ದ್ವೇಷ, ಭವ, ವಿವಶತೆಗಳಂತಹ ದುರ್ಗುಣಗಳು ತೊಲಗಿ ಪ್ರೀತಿ, ಶಾಂತಿ, ಸಹನೆ, ದಯೆ, ಕರುಣೆ, ಕ್ಷಮೆ, ಅನುಕಂಪ, ಸಹಾಯ, ಸಹಕಾರ, ಧೈರ್ಯದಂತಹ ಸದ್ಗುಣಗಳು ಮನೆ ಮಾಡಬೇಕು. ನಶ್ವರದ ದೈಹಿಕ ಪರಿಮಿತಿಗಳನ್ನು ದಾಟಲು ಸಾತ್ವಿಕರೂಪ ಪೂಜಿಸುವ ಪದ್ಧತಿಯೇ ವಿಶಿಷ್ಟವಾದುದು ಎಂದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಎನ್.ರಾಜಶೇಖರ್ ಶಮೀವೃಕ್ಷಕ್ಕೆ ಪೂಜಿ ಸಲ್ಲಿಸಿದರು. ಬನ್ನಿಪತ್ರೆ ಹಂಚಿಕೊಂಡು ಒಳ್ಳೆಯ ಮಾತುಗಳನ್ನು ಆಡುವ ಮೂಲಕ ತಮ್ಮಲ್ಲಿರುವ ವೈಷಮ್ಯ ಮರೆತು ಶಾಂತಿ, ಸೌಹಾರ್ದತೆ ಬೆಳೆಸಿಕೊಳ್ಳುವುದು ಉತ್ಸವದ ಉದ್ದೇಶ ಎಂದರು.
ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಕಳದ 9 ದಿನಗಳು ದೇವಿಗೆ ವಿಶೇಷ ಅಲಂಕಾರ ಮಾಡಿ ಭಕ್ತರು ದುರ್ಗಾ ಸಪ್ತಸ್ತುತಿ ಪಾರಾಯಣ, ದುರ್ಗಾಪೂಜೆ ನೆರವೇರಿಸಿದರು. ದೇವಾಲಯದ ಕಾರ್ಯದರ್ಶಿ ಎನ್.ಎಸ್.ಪ್ರಭಾಕರ ಶಾಸ್ತ್ರಿ, ಅರ್ಚಕ ಎನ್.ಎಸ್.ಆನಂದ ಶಾಸ್ತ್ರಿ, ಖಜಾಂಚಿ ಪಣೀಶ, ಸದಸ್ಯೆ ಪದ್ಮಾನಂದಶಾಸ್ತ್ರಿ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.