ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ: ನಗರದಲ್ಲಿ ವಿಜಯದಶಮಿ ನಿಮಿತ್ತ ಭಾನುವಾರ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜನರೊಂದಿಗೆ ಬೆರೆತು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹೋದರತ್ವದ ಸಂಕೇತವೇ ಬನ್ನಿ ವಿನಿಮಯ. ನಮ್ಮ ಬದುಕಿನಲ್ಲಿ ಸುಖ, ಶಾಂತಿ ನಲೆಸಲಿ, ರೈತರಿಗೆ ಸಮದ್ಧ ಬೆಳೆ, ಮಳೆ ನೀಡಲಿ ಎಂದು ಆದಿಶಕ್ತಿಯಲ್ಲಿ ಪ್ರಾರ್ಥಿಸಿದರು. ನಮ್ಮ ಮನಸ್ಸಿನಲ್ಲಿನ ಕೆಟ್ಟ ಯೋಚನೆ, ನಮ್ಮ ದುಶ್ಚಟಕ್ಕೆ ತಿಲಾಂಜಲಿ ಹೇಳುವುದಕ್ಕೆ ವಿಜಯದಶಮಿ ಕಾರಣವಾಗಬೇಕು.
ಕನ್ನಡಪ್ರಭ ವಾರ್ತೆ ಇಂಡಿ:
ನಗರದಲ್ಲಿ ವಿಜಯದಶಮಿ ನಿಮಿತ್ತ ಭಾನುವಾರ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಜನರೊಂದಿಗೆ ಬೆರೆತು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ಹಬ್ಬ ಆಚರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಹೋದರತ್ವದ ಸಂಕೇತವೇ ಬನ್ನಿ ವಿನಿಮಯ. ನಮ್ಮ ಬದುಕಿನಲ್ಲಿ ಸುಖ, ಶಾಂತಿ ನಲೆಸಲಿ, ರೈತರಿಗೆ ಸಮದ್ಧ ಬೆಳೆ, ಮಳೆ ನೀಡಲಿ ಎಂದು ಆದಿಶಕ್ತಿಯಲ್ಲಿ ಪ್ರಾರ್ಥಿಸಿದರು. ನಮ್ಮ ಮನಸ್ಸಿನಲ್ಲಿನ ಕೆಟ್ಟ ಯೋಚನೆ, ನಮ್ಮ ದುಶ್ಚಟಕ್ಕೆ ತಿಲಾಂಜಲಿ ಹೇಳುವುದಕ್ಕೆ ವಿಜಯದಶಮಿ ಕಾರಣವಾಗಬೇಕು. ಪರಸ್ಪರ ಭ್ರಾತೃತ್ವ ಮೂಡಿಸುವ ವಿಜಯದಶಮಿ ಅಂಗವಾಗಿ ಬನ್ನಿ ಬಂಗಾರ ವಿನಿಮಯ ಮಾಡಿಕೊಳ್ಳುವುದಾಗಿದ್ದು, ಪ್ರತಿಯೊಬ್ಬರು ದ್ವೇಷ ಬಿಟ್ಟು ಸಹೋದರತ್ವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ದುಷ್ಟಶಕ್ತಿಗಳ ವಿರುದ್ಧ ಜಯ ಸಾಧಿಸಿದ ನೆನಪಿಗಾಗಿ ವಿಜಯದಶಮಿಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಮೈಸೂರಿನಲ್ಲಿ ಅರಸರ ಕಾಲದಿಂದಲೂ ದಸರಾ ಆಚರಿಸಲಾಗುತ್ತಿತ್ತು. ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನಲ್ಲಿ ದಸರಾವನ್ನು ನಾಡಹಬ್ಬವಾಗಿ ಶತಮಾನಗಳಿಂದ ಆಚರಿಸಲಾಗುತ್ತಿದೆ. ಅಂತೆಯೇ ಪ್ರತಿ ಜಿಲ್ಲೆಯಲ್ಲಿಯೂ ಅದ್ಧೂರಿ ದಸರಾ ಆಚರಣೆ ಮಾಡಲಾಗುತ್ತಿದೆ ಎಂದರು.ಈ ವೇಳೆ ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ನೀಲಕಂಠ ರೂಗಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕಾಂತು ಇಂಡಿ, ಬಿಸಿಎಂ ಅಧಿಕಾರಿ ಗದ್ಯಾಳ, ಸುಧೀರ ಕರಕಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೀದ ಮೋಮಿನ, ಶೇಖರ ನಾಯಕ, ಭೀಮಾಶಂಕರ ಮುರಮನ, ಉಮೇಶ ದೇಗಿನಾಳ, ಅವಿನಾಶ ಬಗಲಿ, ಮಹೇಶ ಹೊನ್ನಬಿಂದಗಿ, ಅರ್ಜುನ ಚವ್ಹಾಣ, ಹಣಮಂತ ಅರವತ್ತು, ಸದಾಶಿವ ಪ್ಯಾಟಿ, ಮುಸ್ತಾಕ ಇಂಡಿಕರ, ಮಲ್ಲು ಮಡ್ಡಿಮನಿ ಸೇರಿದಂತೆ ಮತಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಶಾಸಕರಿಗೆ ಬನ್ನಿ ವಿತರಿಸಿ ಶುಭಾಶಯ ಕೋರಿದರು.