ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳ ಮಹಾಸನ್ನಿಧಾನದ ಆಶೀರ್ವಾದದಿಂದ ಬೇಲೂರು ಶ್ರೀ ಶೃಂಗೇರಿ ಶಾರದಾ ಮಠಕ್ಕೆ ಧರ್ಮಾಧಿಕಾರಿಯಾಗಿ ಸಿ. ಆರ್. ವಿಜಯಕೇಶವ್ ಅವರನ್ನು ನೇಮಕ ಮಾಡಲಾಗಿದೆ. ಶ್ರೀ ಶೃಂಗೇರಿ ಶಾರದಾ ಮಠದ ಧರ್ಮಾಧಿಕಾರಿಯಾಗಿ ಮಠದ ದೈನಂದಿನ ಧಾರ್ಮಿಕ ಕಾರ್ಯಗಳು, ಪೂಜೆ–ಪುನಸ್ಕಾರಗಳು, ವಿಧಿ–ವಿಧಾನಗಳು, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಶ್ರದ್ಧೆ, ನಿಷ್ಠೆ ಮತ್ತು ಪಾರದರ್ಶಕತೆಯಿಂದ ನಿರ್ವಹಿಸುವ ಭರವಸೆ ನೀಡಿದರು. ಮಠದ ಪರಂಪರೆ, ಶಿಸ್ತಿನ ಆಚರಣೆ ಮತ್ತು ಶೃಂಗೇರಿ ಶಾರದಾ ಪೀಠದ ಆದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸೇವೆ ಸಲ್ಲಿಸುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೇಲೂರುಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನಮ್, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರುಗಳ ಮಹಾಸನ್ನಿಧಾನದ ಆಶೀರ್ವಾದದಿಂದ ಬೇಲೂರು ಶ್ರೀ ಶೃಂಗೇರಿ ಶಾರದಾ ಮಠಕ್ಕೆ ಧರ್ಮಾಧಿಕಾರಿಯಾಗಿ ಸಿ. ಆರ್. ವಿಜಯಕೇಶವ್ ಅವರನ್ನು ನೇಮಕ ಮಾಡಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಈ ಗೌರವವನ್ನು ನಾನು ನನ್ನ ವೈಯಕ್ತಿಕ ಸಾಧನೆಯಾಗಿ ಎಂದಿಗೂ ಪರಿಗಣಿಸುವುದಿಲ್ಲ. ಇದು ಸಂಪೂರ್ಣವಾಗಿ ಜಗದ್ಗುರುಗಳ ದಿವ್ಯ ಅನುಗ್ರಹ ಮತ್ತು ಶಾರದಾಂಬೆಯ ಅಪಾರ ಕೃಪೆಯ ಫಲ. ನನ್ನ ಮೇಲೆ ಭರವಸೆ ಇಟ್ಟು ಈ ಮಹತ್ತರ ಧರ್ಮಸೇವೆಯ ಹೊಣೆಗಾರಿಕೆಯನ್ನು ವಹಿಸಿರುವುದು ನನ್ನ ಜೀವನದ ಅತ್ಯಂತ ಪವಿತ್ರ ಕ್ಷಣವಾಗಿದೆ” ಎಂದು ತಿಳಿಸಿದರು. ತಮಗೆ ಗೌರವ ಸಲ್ಲಿಸಿದ ಎಲ್ಲಾ ಪೂಜ್ಯರು, ಹಿರಿಯರು, ಬಂಧುಗಳು, ಭಕ್ತವೃಂದ ಹಾಗೂ ವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಸಂಸ್ಥೆಗಳ ಪ್ರತಿನಿಧಿಗಳಿಗೆ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿ ಭಕ್ತರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ತಮ್ಮ ಮುಂದಿನ ಸೇವಾ ಪಥದಲ್ಲಿ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.ಶ್ರೀ ಶೃಂಗೇರಿ ಶಾರದಾ ಮಠದ ಧರ್ಮಾಧಿಕಾರಿಯಾಗಿ ಮಠದ ದೈನಂದಿನ ಧಾರ್ಮಿಕ ಕಾರ್ಯಗಳು, ಪೂಜೆ–ಪುನಸ್ಕಾರಗಳು, ವಿಧಿ–ವಿಧಾನಗಳು, ಧಾರ್ಮಿಕ ಆಚರಣೆಗಳು ಹಾಗೂ ಭಕ್ತರ ಆಧ್ಯಾತ್ಮಿಕ ಮಾರ್ಗದರ್ಶನವನ್ನು ಶ್ರದ್ಧೆ, ನಿಷ್ಠೆ ಮತ್ತು ಪಾರದರ್ಶಕತೆಯಿಂದ ನಿರ್ವಹಿಸುವ ಭರವಸೆ ನೀಡಿದರು. ಮಠದ ಪರಂಪರೆ, ಶಿಸ್ತಿನ ಆಚರಣೆ ಮತ್ತು ಶೃಂಗೇರಿ ಶಾರದಾ ಪೀಠದ ಆದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಸೇವೆ ಸಲ್ಲಿಸುವುದಾಗಿ ಹೇಳಿದರು.ಈ ನೇಮಕದ ಮೂಲಕ ಬೇಲೂರು ಶ್ರೀ ಶೃಂಗೇರಿ ಶಾರದಾ ಮಠದ ಧಾರ್ಮಿಕ ಚಟುವಟಿಕೆಗಳಿಗೆ ಮತ್ತಷ್ಟು ಶಕ್ತಿ ದೊರಕಲಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಜಾಗೃತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇನ್ನು ಹೆಚ್ಚಾಗಿ ನಿರಂತರವಾಗಿ ನಡೆಯಲಿ ಎಂಬುದು ಭಕ್ತರ ಆಶಯವಾಗಿದೆ.