ವಿಜಯಲಕ್ಷ್ಮೀ ಅಧ್ಯಕ್ಷೆ, ಬಸವರಾಜ ಉಪಾಧ್ಯಕ್ಷ

| Published : Sep 10 2024, 01:31 AM IST

ಸಾರಾಂಶ

ನಾಲತವಾಡ ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಸೋಮವಾರ ಬೆಳಗ್ಗೆ ಜರುಗಿದ್ದು, ಅಧ್ಯಕ್ಷರಾಗಿ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷರಾಗಿ ಬಸವರಾಜ ಗಂಗನಗೌಡರ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ನಾಲತವಾಡ

ಪಟ್ಟಣ ಪಂಚಾಯತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಸೋಮವಾರ ಬೆಳಗ್ಗೆ ಜರುಗಿದ್ದು, ಅಧ್ಯಕ್ಷರಾಗಿ ವಿಜಯಲಕ್ಷ್ಮೀ ಇಳಕಲ್ಲ, ಉಪಾಧ್ಯಕ್ಷರಾಗಿ ಬಸವರಾಜ ಗಂಗನಗೌಡರ ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲ್ಲಿಸಿದರೆ, ಉಪಾಧ್ಯಕ್ಷ ಸ್ಥಾನಕ್ಕೂ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧವಾಗಿ ಆಯ್ಕೆ ನಡೆಯಿತು.ಸಾಬೂನ ಮತ್ತು ಮಾರ್ಜಿಕ ನಿಮಗಮ ಅಧ್ಯಕ್ಷ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿ, ನಾಲತವಾಡ ಪಟ್ಟಣ ಪಂಚಾಯತಿ ಸಂಪೂರ್ಣ ಕಾಂಗ್ರೆಸ್ ಪಕ್ಷದ ಸದಸ್ಯರಿದ್ದಾರೆ. ಇದರಲ್ಲಿ ಸೂಕ್ತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲ ಹಿರಿಯರ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಿದ್ದೇವೆ. ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸಮೇತ ಎಲ್ಲ ಸದಸ್ಯರು ಶ್ರಮಿಸಬೇಕು. ತಮ್ಮ ಆಡಳಿತ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ. ಅದಕ್ಕೆ ಬೇಕಾದ ಸಹಕಾರ ಮತ್ತು ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು.ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಪಪಂ ಅಧ್ಯಕ್ಷ, ಸದಸ್ಯ ಪೃಥ್ವಿರಾಜ ನಾಡಗೌಡ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ ಅವರಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸನ್ಮಾನಿಸಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗುರುತಾರನಾಳ, ಪೃಥ್ವಿರಾಜ ನಾಡಗೌಡ, ಶಂಕರರಾವ ದೇಶಮುಖ, ಗುರುಪ್ರಸಾದ ದೇಶಮುಖ, ರಾಯಣಗೌಡ ತಾತರೆಡ್ಡಿ, ಉಮರಫಾರುಕ್ ಮೂಲಿಮನಿ, ಬಿ.ಬಿ.ಪಾಟೀಲ, ಚಂದ್ರಶೇಖರ ಮೇಟಿ, ಮಹಾಂತೇಶ ಗಂಗನಗೌಡರ, ಪಟ್ಟಣ ಪಂಚಾಯತಿ ಸದಸ್ಯರಾದ ರಾಜಬಿ ನಾಡದಾಳ, ರಮೇಶ ಆಲಕೊಪ್ಪರ, ಶಿವಪುತ್ರಪ್ಪ ಗುರಿಕಾರ, ಯಮನವ್ವ ಬಂಡಿವಡ್ಡರ, ಲಲಿತಾ ಗೊರಬಾಳ, ಬಸೀರಾಬೇಗಂ ಮೂಲಿಮನಿ, ಸಂಗಪ್ಪ ಬಾರಡ್ಡಿ, ತಿರುಪತಿ ಕ್ಷತ್ರಿ, ಅಂಬ್ರಪ್ಪ ಶೀರಿ, ಜಗದೀಶ ಡೇರೆದ, ಶರಣಬಸಪ್ಪ ಗಂಗನಗೌಡರ ಹಾಗೂ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.ನಾಲತವಾಡ ಪಟ್ಟಣ ಪಂಚಾಯತಿ ಸಂಪೂರ್ಣ ಕಾಂಗ್ರೆಸ್ ಪಕ್ಷದ ಸದಸ್ಯರಿದ್ದಾರೆ. ಇದರಲ್ಲಿ ಸೂಕ್ತ ಅಭ್ಯರ್ಥಿಗಳು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಲ್ಲ ಹಿರಿಯರ ಅಭಿಪ್ರಾಯದ ಮೇರೆಗೆ ಆಯ್ಕೆ ಮಾಡಿದ್ದೇವೆ. ಪಟ್ಟಣ ಪಂಚಾಯತಿ ಅಭಿವೃದ್ಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸಮೇತ ಎಲ್ಲ ಸದಸ್ಯರು ಶ್ರಮಿಸಬೇಕು. ತಮ್ಮ ಆಡಳಿತ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿ. ಅದಕ್ಕೆ ಬೇಕಾದ ಸಹಕಾರ ಮತ್ತು ಅನುದಾನ ನೀಡುತ್ತೇನೆ.

-ಸಿ.ಎಸ್.ನಾಡಗೌಡ ಅಪ್ಪಾಜಿ, ಶಾಸಕರು.