ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆ ಆಗುತ್ತಿದೆ. ಇಂದು ಒಂದು ಕಟ್ಟು ವೀಳ್ಯದೆಲೆ ಬೆಲೆ ಜಿಲ್ಲಾದ್ಯಂತ 200 ರುಪಾಯಿಯ ಗಡಿ ದಾಟಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಗಗನಕ್ಕೆ ಜಿಗುತ್ತಲೇ ಇದ್ದು, ಒಂದು ಕಟ್ಟು ವೀಳ್ಯದೆಲೆ ಬೆಲೆ ಈಗ ಬರೋಬರಿ 150ರಿಂದ 200 ರು. ಗಡಿ ದಾಟಿದೆ. ದಶಕದ ಬಳಿಕ ಕಳೆದ ಎರಡು ವರ್ಷ ಬೆಲೆ ಏರಿಕೆಯಾಗಿತ್ತು. ಆದರೆ ಈ ವರ್ಷ ಸಹಾ ಬೆಲೆ ದಾಖಲೆ ಏರಿಕೆ ಕಂಡಿದೆ.

ವೀಳ್ಯದೆಲೆ ಬೆಲೆ ಮಾರುಕಟ್ಟೆಯಲ್ಲಿ ಕಳೆದ ಮೂರು ತಿಂಗಳಿಂದ ಏರಿಕೆ ಆಗುತ್ತಿದೆ. ಇಂದು ಒಂದು ಕಟ್ಟು ವೀಳ್ಯದೆಲೆ ಬೆಲೆ ಜಿಲ್ಲಾದ್ಯಂತ 200 ರುಪಾಯಿಯ ಗಡಿ ದಾಟಿದ್ದು, ಗ್ರಾಹಕರು ಕಂಗಾಲು ಆಗುವಂತೆ ಮಾಡಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಲೆ ಏನು ದುಬಾರಿ ಆಗಿ, ಒಂದು ದಿನ ಇದ್ದ ದರ ಇನ್ನೊಂದು ದಿನ ಇರಲ್ಲ. ಆದರೆ, ದುಬಾರಿಯಾದರೂ ಮಾರುಕಟ್ಟೆಯಲ್ಲಿ ಗುಣಮಟ್ಟದ ವೀಳ್ಯದೆಲೆ ಸಿಗುತ್ತಿಲ್ಲ ಎಂಬ ಕೊರಗು ಈಗ ಗ್ರಾಹಕರಿಂದ ಕೇಳಿ ಬರುತ್ತಿದೆ. ಇಡೀ ಜಿಲ್ಲೆಗೆ ತುಮಕೂರಿನ ಪಾವಗಡ, ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಗಳಿಂದ ವೀಳ್ಯದೆಲೆ ಸರಬರಾಜು ಆಗುತ್ತಿದೆ.

ಪ್ರತಿ ವರ್ಷ ನವೆಂಬರ್ ನಿಂದ ಫೆಬ್ರವರಿವರೆಗೆ ದಟ್ಟ ಮಂಜುಬೀಳುವ ಕಾರಣ ವೀಳ್ಯದೆಲೆ ಸರಿಯಾಗಿ ಬರುವುದಿಲ್ಲ. ಫೆಬ್ರವರಿ ಕಳೆಯುವವರೆಗೂ ಬೆಲೆ ಏರಿಕೆ ತಪ್ಪಿದ್ದಲ್ಲ. ಎಲೆ ತೋಟಗಳನ್ನು ಕಾಪಾಡುವುದಕ್ಕೆ ಸಾಕಷ್ಟು ನೀರು ಬೇಕು. ನೀರು ನೀಡಿದರೂ ಸಹಾ ಬಳಿ ಸಾಕಷ್ಟು ಚಿಗುರಿ ಎಲೆ ಬಿಡುವುದಿಲ್ಲ. ಅದಕ್ಕೆ ಈ ಬಾರಿ ವಿಳ್ಯೇದೆಲೆ ಇಳುವರಿ ಕಡಿಮೆಯಾಗಿ ಮಾರುಕಟ್ಟೆಗೆ ಉತ್ತಮ ಗುಣಮಟ್ಟದ ಎನ್ನುತ್ತಾರೆ ವಿಳ್ಯೇದೆಲೆ ಮಾರಾಟಗಾರರು.

ಕಳೆದ ಒಂದು ವಾರದಿಂದ ಒಂದು ಕಟ್ಟಿನ ಬೆಲೆ 50ರಿಂದ 60 ರು. ಹೆಚ್ಚಳ ಆಗುವ ಮೂಲಕ ಗ್ರಾಹಕರಿಗೆ ಹೊರೆಯಾಗಿದೆ. ಒಂದು ಕಟ್ಟಿಗೆ ಒಟ್ಟು 100 ವೀಳ್ಯದೆಲೆ ಇರುತ್ತದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ವೀಳ್ಯದೆಲೆ ಸರಾಸರಿ 2 ರು.ಗೆ ಮಾರಾಟ ಆಗುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರಿಂದ ವೀಳ್ಯದೆಲೆಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ಜಿಲ್ಲೆಯಲ್ಲಿ ಸತತ ಎರಡು-ಮೂರು ವರ್ಷಗಳಿಂದ ವೀಳ್ಯದೆಲೆಬೆಲೆ ಗಗನಕ್ಕಿರುವುದು ಗ್ರಾಹಕರ ಕೈ ಸುಡುವಂತೆ ಮಾಡಿದೆ.

......

ವೀಳ್ಯದೆಲೆ ಮಾರಾಟವನ್ನು ನಮ್ಮ ತಾತ ಮುತ್ತಾತನ ಕಾಲದಿಂದಲೂ ವೀಳ್ಯದೆಲೆ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ಈಗಲೂ ಸಹಮುಂದುವರಿಸಿಕೊಂಡು ಬಂದಿದ್ದೇವೆ. ಇಷ್ಟು ದುಬಾರಿಯಾಗಿದ್ದು ನಾವುಕಂಡಿರಲಿಲ್ಲ. ತುಮಕೂರು, ಪಾವಗಡ, ಹಾವೇರಿ,ಆಂಧ್ರಪ್ರದೇಶದ ಹಿಂದೂಪುರದ ಅಮಲಾಪುರದಿಂದ ಜಿಲ್ಲೆಯ ಗೌರಿಬಿದನೂರು, ಮಂಚೇನಹಳ್ಳಿ ಇತರೆ ಕಡೆಗಳಿಂದ ವೀಳ್ಯದೆಲೆ ತರಿಸಲಾಗುತ್ತಿದೆ.

ವೀಳ್ಯದೆಲೆ ವ್ಯಾಪಾರಿ ಗೋಪಾಲ್ ಹೇಳುತ್ತಾರೆ.

ವೀಳ್ಯದೆಲೆ ಬೆಳೆಯನ್ನು ನಮ್ಮ ಮನೆಗೆ ಪೂಜೆಗೆ ಮತ್ತು ಹಾಕಲು ಮನೆಯ ಆವರಣದಲ್ಲೇ ಬೆಳೆಸುತ್ತಿದ್ದೇವೆ. ವೀಳ್ಯದೆಲೆ ಬೆಳೆಯಲು ಸಾಕಷ್ಟು ನಿಯಮಗಳಿವೆ. ಅದನ್ನು ಮೀರಿದರೆ ಗಿಡವು ಬರುವುದಿಲ್ಲ. ದೀಪಾವಳಿ ಸಮಯದಲ್ಲಿ ವೀಳ್ಯದೆಲೆ ಗಿಡದ ಮುಂದೆ ನೋಮುವ ಪದ್ಧತಿಯಿದೆ.

ಪ್ರಗತಿಪರ ರೈತ ಮುನಿಕೃಷ್ಣಪ್ಪ.ಸಿಕೆಬಿ-1 ಅಂಗಡಿಯಲ್ಲಿ ಮಾರಟಕ್ಕೆ ಬಂದಿರುವ ವೀಳ್ಯದೆಲೆ