ಗ್ರಾಮ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ

| Published : Oct 04 2025, 12:00 AM IST

ಸಾರಾಂಶ

ಗ್ರಾಮಗಳು ಸ್ವಚ್ಛವಾಗಿದ್ದಲ್ಲಿ ಜನರು ಆರೋಗ್ಯವಂತರಾಗಿರುತ್ತಾರೆ

ಕುಷ್ಟಗಿ: ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿಯ ದತ್ತು ಗ್ರಾಮ ತಾಲೂಕಿನ ಜಿ. ಬೆಂಚಮಟ್ಟಿಯಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ನಡೆದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮಗಳು ಸ್ವಚ್ಛವಾಗಿದ್ದಲ್ಲಿ ಜನರು ಆರೋಗ್ಯವಂತರಾಗಿರುತ್ತಾರೆ. ಗ್ರಾಮದೊಳಗೆ ತಿಪ್ಪೆಗಳನ್ನು ಹಾಕಬಾರದು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಮುಂದಾಗಬೇಕು ಎಂದರು.

ಜಿ.ಬೆಂಚಮಟ್ಟಿ ಗ್ರಾಮದ ನಾಮಫಲಕ ಅನಾವರಣ ಮಾಡಿದರು, ನಂತರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.

ಈ ಸಂದರ್ಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ, ತಹಸೀಲ್ದಾರ ಅಶೋಕ ಶಿಗ್ಗಾವಿ, ಗ್ರೇಡ್2 ತಹಸೀಲ್ದಾರ ರಜನಿಕಾಂತ, ಟಿಎಚ್ ಒ ಡಾ.ಆನಂದ ಗೊಟೂರ, ತಾಪಂ ಎಡಿ ನಿಂಗನಗೌಡ ಹಿರೇಹಾಳ, ಗ್ರಾಪಂ ಕಾರ್ಯದರ್ಶಿ ಶೇಕದಾದಾ, ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ನಿಂಗಪ್ಪ ಗುನ್ನಾಳ, ಮಹಾಲಿಂಗಯ್ಯ, ಮಾನಪ್ಪ ತಳವಾರ, ಸೋಮನಗೌಡ ಪಾಟೀಲ, ನಾಗಪ್ಪ ಬಿಳಿಯಪ್ನವರ, ರಾಘಪ್ಪ ಶ್ರೀರಾಮ, ಸಿದ್ದವೀರಪ್ಪ, ಶರಣಪ್ಪ ಜವಾರಿ, ಅಂದಪ್ಪ, ಭರಮಗೌಡ ಪಾಟೀಲ, ಎಚ್.ಬಿ.ಕುರಿ.ಎಚ್.ಡಿ.ಪಾಟೀಲ್. ಎಸ್.ಜಿ.ಪಾಟೀಲ್. ಎಸ್.ಕೆ. ಪಾಟೀಲ್. ಎಂ.ಬಿ. ಕೊನಸಾಗರ, ಡಿ.ಮಾರುತಿ.ಆನಂದ ಡೊಳ್ಳಿನ, ಗುರುರಾಜ್,ಆದೇಶ, ರಾಘವೇಂದ್ರ, ನೀಲಪ್ಪ, ಶೇಕ್ರಪ್ಪ, ಮಂಜುನಾಥ , ಗಂಗಪ್ಪ,ಕಾಸಿಂಸಾಬ, ಕುಷ್ಟಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು, ಎನ್ ಎಸ್ ಎಸ್ ನೋಡಲ್ ಅಧಿಕಾರಿ ನಾಗರಾಜ ಹೀರಾ ಸೇರಿದಂತೆ ಸಾರಿಗೆ ಸಿಬ್ಬಂದಿ ಗ್ರಾಮಸ್ಥರು, ನ್ಯಾಯಾಂಗ ಇಲಾಖೆಯವರು ಇದ್ದರು.