ತಿರ್ಲಾಪುರದಲ್ಲಿ ಗ್ರಾಮ ದೇವತೆಗಳ ಜಾತ್ರೆ

| Published : May 01 2025, 12:45 AM IST

ಸಾರಾಂಶ

ಮೇ 2ರಂದು ಗ್ರಾಮದೇವತೆಗಳ ಮೂರ್ತಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡು ಚೌತ ಮನೆಯಲ್ಲಿ ಕೂರಿಸಲಾಗುವುದು. ಮೇ 3, 4ರಂದು ಗ್ರಾಮದೇವತೆಯರ ಮೆರವಣಿಗೆ ನಡೆಯಲಿದೆ. ಹಲಗಿಮೇಳ ಹಾಗೂ ಡೊಳ್ಳು ಜೋಗಿತಿಯರ ನೃತ್ಯದ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.

ನವಲಗುಂದ: ತಾಲೂಕಿನ ತಿರ್ಲಾಪುರ ಗ್ರಾಮದ ಗ್ರಾಮದೇವತೆಯರ ಜಾತ್ರಾ ಮಹೋತ್ಸವ ಮೇ 2ರಿಂದ ಮೇ 6ರ ವರೆಗೆ ಅದ್ಧೂರಿಯಾಗಿ ನಡೆಯಲಿದೆ.

ಎಂ. ಚಂದರಗಿ ಸಂಸ್ಥಾನ ಹಿರೇಮಠದ ಶ್ರೀ ಶಿವಾಚಾರ್ಯರತ್ನ ತಪೋಭೂಷಣ ವೀರಭದ್ರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ, ಚಿಕ್ಕುಂಬಿಯ ಅಭಿನವ ಶ್ರೀ ನಾಗಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಮಲ್ಲಿಕಾರ್ಜುನಯ್ಯ ಹಿರೇಮಠ ವಹಿಸಲಿದ್ದಾರೆ.

ಶಿರಹಟ್ಟಿಯ ಜ. ಫಕ್ಕೀರ ಸಿದ್ಧರಾಮ ಸ್ವಾಮಿಗಳು, ನವಲಗುಂದ ಪಂಚಗೃಹ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುಳ್ಳ ಗ್ರಾಮದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಮೊರಬ ಜಡಿಮಠದ ಮಹೇಶ್ವರ ಶಿವಾಚಾರ್ಯರು, ಬ್ಯಾಹಟ್ಟಿಯ ಮರುಳಸಿದ್ದೇಶ್ವರ ಶಿವಾಚಾರ್ಯರು, ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು, ಕಲ್ಯಾಣಪುರಮಠದ ಬಸವಣ್ಣಜ್ಜನವರು, ಗವಿಮಠದ ಅಭಿನವ ಬಸವಲಿಂಗ ಸ್ವಾಮೀಜಿ, ಬಾಗಲಕೋಟೆ ವಿಶ್ವನಾಥ ಶಿವಯೋಗಿಗಳು, ಹೆಬ್ಬಳ್ಳಿ ಚೈತನ್ಯಾಶ್ರಮದ ದತ್ತಾವಧೂತ ಗುರುಗಳು, ಅಜಾತನಾಗಲಿಂಗ ಸ್ವಾಮಿಮಠದ ವೀರೇಂದ್ರ ಸ್ವಾಮೀಜಿ, ಜಕ್ಕನಾಯಕನಕೊಪ್ಪ ಚನ್ನಬಸವೇಂದ್ರ ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ ಸಾನ್ನಿಧ್ಯ ವಹಿಸುವರು.

ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಂತೋಷ ಲಾಡ್, ಶಾಸಕರಾದ ಎನ್.ಎಚ್. ಕೋನರಡ್ಡಿ, ಪ್ರದೀಪ್ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ವಿನೋದ ಅಸೂಟಿ ಭಾಗವಹಿಸುವರು,

ವಿವಿಧ ಕಾರ್ಯಕ್ರಮ: ಮೇ 2ರಂದು ಗ್ರಾಮದೇವತೆಗಳ ಮೂರ್ತಿ ಮೆರವಣಿಗೆ ಮೂಲಕ ಗ್ರಾಮಕ್ಕೆ ಬರಮಾಡಿಕೊಂಡು ಚೌತ ಮನೆಯಲ್ಲಿ ಕೂರಿಸಲಾಗುವುದು. ಮೇ 3, 4ರಂದು ಗ್ರಾಮದೇವತೆಯರ ಮೆರವಣಿಗೆ ನಡೆಯಲಿದೆ. ಹಲಗಿಮೇಳ ಹಾಗೂ ಡೊಳ್ಳು ಜೋಗಿತಿಯರ ನೃತ್ಯದ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.

ಮೇ 5ರಂದು ಬೆಳಗ್ಗೆ 8ಕ್ಕೆ ಮಾತೋಶ್ರೀ ಶಿವಯೋಗಿನಿ ನೇತೃತ್ವದಲ್ಲಿ ಸುಮಂಗಲೆಯರಿಂದ ಕುಂಕುಮಾರ್ಚನೆ, ಶ್ರೀ ವಿದ್ವಾನ ಬ್ರಹ್ಮ ಶ್ರೀ ಶಂಕರಚಾರ್ಯರು, ಕಡ್ಡಾಸ್ಕರ ಅವರ ವೈದಿಕತ್ವದಲ್ಲಿ ದೇವತಾ ಪ್ರಾರ್ಥನೆ, ಸಂಕಲ ಗಣಪತಿ ಪೂಜೆ, ನವಗ್ರಹಹೋಮ, ಶ್ರೀ ಚಂಡಿಕಾ ಪರಮೇಶ್ವರಿಯಾಗ ಸೇರಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಮೇ 6ರಂದು ಎಂ. ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಅವರಿಂದ ಗ್ರಾಮದೇವತೆಯರ ಪ್ರಾಣ ಪ್ರತಿಷ್ಠಾಪನೆ, ನೇತ್ರಮಿಲನ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಜರುಗುವವು. ಅದೇ ದಿನ ಸಂಜೆ 6ಕ್ಕೆ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 7ಕ್ಕೆ ಶಿವಯೋಗಿನಿ ದೇವಿ ಶ್ರೀ ಚನ್ನಬಸವೇಂದ್ರ ಲೀಲಾಮಠ ಅವರಿಂದ ಶ್ರೀದೇವಿ ಪುರಾಣ ನಡೆಯಲಿದೆ.