ಇಂದಿನಿಂದ ಕಾತರಕಿಯಲ್ಲಿ ಗ್ರಾಮದೇವತೆ ಜಾತ್ರೆ

| Published : Nov 23 2025, 02:45 AM IST

ಸಾರಾಂಶ

ಕೊಪ್ಪಳದ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಅಕ್ಕ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರ್ಗಿ ನಗರದ ಪಿಎಸ್ಐ ಯಶೋಧಾ ಕಟಕೆ ನೆರವೇರಿಸಲಿದ್ದು

ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದೇವತೆ ಶ್ರೀದ್ಯಾಮಮ್ಮದೇವಿ ಜಾತ್ರಾಮಹೋತ್ಸವ ಒಂಬತ್ತು ವರ್ಷಗಳ ನಂತರ ಅತ್ಯಂತ ವಿಜೃಂಭಣೆಯಿಂದ ಜರಗುತ್ತಿದ್ದು, ನ. 23 ರಿಂದ 25ರ ವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

23ರ ಭಾನುವಾರ ಬೆಳಗ್ಗೆ ಪೂರ್ಣ ಕುಂಭದೊಂದಿಗೆ ಗಂಗಾಸ್ಥಳಕ್ಕೆ ಹೋಗಿ ಪೂಜೆ ನೆರವೇರಿಸಿ ವಿವಿಧ ಕಲಾ ತಂಡ ಹಾಗೂ ವಾದ್ಯ ಮೇಳದೊಂದಿಗೆ ಗ್ರಾಮದೇವತೆಯ ಮೆರವಣಿಗೆ ಜರುಗುವುದು. ಪೂಜೆ ಪುನಸ್ಕಾರಗಳ ನಂತರ ಬೆಳಗ್ಗೆ 11 ಗಂಟೆಗೆ ಮಹಿಳಾ ಗೋಷ್ಠಿ ಜರುಗಲಿದ್ದು, ಕೊಪ್ಪಳದ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಅಕ್ಕ ಭಾಗವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಬುರ್ಗಿ ನಗರದ ಪಿಎಸ್ಐ ಯಶೋಧಾ ಕಟಕೆ ನೆರವೇರಿಸಲಿದ್ದು, ಮಾತೃಶ್ರೀ ವನಜ ಗಂಗಾಧರ ಪುರೋಹಿತ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಲೀಲಾವತಿ ಮಲ್ಲಿಕಾರ್ಜುನ ಕಾರಟಗಿ, ಶಿವಮ್ಮ ಈಶಪ್ಪ ಬೈರಣ್ಣವರ್, ನಿರ್ಮಲ ಬಳ್ಳೊಳ್ಳಿ, ಶೋಭಾ ಬಸವರಾಜ್ ಮೇಟಿ, ಮಂಜುಳಾ ಅಂಬರೀಶ್ ಕರಡಿ, ರಶ್ಮಿ ರಾಜಶೇಖರ್ ಹಿಟ್ನಾಳ, ಲಕ್ಷ್ಮಿ ದೇವಿ ಸಿ.ವಿ. ಚಂದ್ರಶೇಖರ್, ಸುನಂದಾ ಈಶಪ್ಪ ಗದ್ದಿಕೇರಿ, ಸರ್ವಮಂಗಳ ಪಾಟೀಲ್, ಶಿವಗಂಗಾ ಭೂಮ್ಮಕ್ಕನವರ್, ಜ್ಯೋತಿ ಎಂ.ಗೊಂಡಬಾಳ, ಲತಾ ಚಿನ್ನೂರ, ಶಕುಂತಲಾ ಹುಡೇಜಾಲಿ, ಕೋಮಲ ಕುದುರಿಮೋತಿ, ಅನ್ನಪೂರ್ಣ ಮನ್ನಾಪುರ, ಮಹಾಲಕ್ಷ್ಮಿ ಕಂದಾರಿ ಇತರರು ಭಾಗವಹಿಸುವರು.

ಮಧ್ಯಾಹ್ನ ಉಡಿ ತುಂಬುವ ಕಾರ್ಯಕ್ರಮ ನಂತರ ಭಕ್ತಿ ಸಂಗೀತ ಕಾರ್ಯಕ್ರಮ ಜನಪದ ಸಂಗೀತ ಸಂಜೆ ಧಾರ್ಮಿಕ, ಅಮೃತ ಮತ್ತು ಕೃಷಿ ಚಿಂತನ ಕಾರ್ಯಕ್ರಮ ಜರುಗುವದು. ನಾಡೋಜ ಶ್ರೀಅನ್ನದಾನೇಶ್ವರ ಮಹಾಸ್ವಾಮಿ, ಅಭಿನವ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿ, ಸಾಂಗ್ಲಿಯ ಶ್ರೀ ಅಮೃತಾನಂದ ಮಹಾಸ್ವಾಮಿ, ಹಿರೇಸಿಂದೋಗಿ ಶ್ರೀ ಚಿದಾನಂದ ಮಹಾಸ್ವಾಮಿ, ಮೈನಳ್ಳಿಯ ಶ್ರೀಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿ, ಶ್ರೀ ಚೈತನ್ಯಾನಂದ ಮಹಾಸ್ವಾಮಿ ಜತೆಗೆ ಶಿವರಾಮ ಕೃಷ್ಣಾನಂದರು, ಶ್ರೀನಿವಾಸ್ ಜೋಶಿ, ಮೋಹನ್ ಪುರೋಹಿತರು, ಗವಿಸಿದ್ದಯ್ಯ ಹಿರೇಮಠ ಪೂಜ್ಯರ ನೇತೃತ್ವದಲ್ಲಿ ಕೂಡ್ಲಿಗಿಯ ಕೃಷಿ ಪಂಡಿತ ಹುಲಿಕೆರೆ ವಿಶ್ವೇಶ್ವರ ಸಜ್ಜನ್ ಅವರ ಕೃಷಿ ಚಿಂತನ ಕಾರ್ಯಕ್ರಮ ನಡೆಯುವುದು.

ಈ ಚಿಂತನ ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕರಾದ ಹಾಲಪ್ಪ ಆಚಾರ್, ಕೆ.ಬಸವರಾಜ ಹಿಟ್ನಾಳ, ಪರಿಷತ್ ಸದಸ್ಯ ಶರಣಗೌಡ ಬಯ್ಯಾಪುರ, ಬಿಜೆಪಿ ಮುಖಂಡರಾದ ಬಸವರಾಜ್ ಕ್ಯಾವಟರ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ, ಮಾಜಿ ಜಿಪಂ ಅಧ್ಯಕ್ಷ ಎಚ್.ಎಲ್.ಹಿರೇಗೌಡ್ರು ಮತ್ರು ಎಸ್.ಬಿ. ನಾಗರಳ್ಳಿ, ಶಾಂತಣ್ಣ ಮುದುಗಲ್, ಅಂದಾನಪ್ಪ ಅಗಡಿ, ಮಹೇಂದ್ರ ಚೋಪ್ರಾ, ಬಾಲಚಂದ್ರನ್ ಇತರರು ಭಾಗವಹಿಸುವರು. ನಂತರ ಭಕ್ತಿ ಸಂಗೀತ ಗವಿಸಿದ್ದೇಶ್ವರ ಸಂಚಾರ ಕಲಾತಂಡದಿಂದ ಜರುಗುವುದು ಎಂದು ಶ್ರೀ ಗ್ರಾಮದೇವತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಗ್ರಾಮದಲ್ಲಿ ಸಕಲ ಸಿದ್ಧತೆ:9 ವರ್ಷಗಳ ಬಳಿಕ ಗ್ರಾಮದ ದೇವತೆ ಜಾತ್ರೆ ನಿಮಿತ್ತ ಸಕಲ ಸಿದ್ಧತೆ ಮಾಡಲಾಗಿದ್ದು, ಗ್ರಾಮದಲ್ಲಿ ವಿದ್ಯುತ ದ್ವೀಪಗಳ ಅಲಂಕಾರದಿಂದ ಝಗಮಗಿಸುತ್ತಿದೆ.

ಗ್ರಾಮದಲ್ಲಿ ಮೂರು ದಿನಗಳ ಕಾಲವೂ ಪ್ರಸಾದ ವ್ಯವಸ್ಥೆ ಇರುತ್ತದೆ. ಗ್ರಾಮ ದೇವತೆ ಜಾತ್ರೆಯ ಹಿನ್ನೆಲೆಯಲ್ಲಿ ಇಡೀ ಗ್ರಾಮವೇ ಸಿಂಗಾರಗೊಂಡಿದ್ದು, ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಆಚರಣೆ ನಡೆಯುತ್ತಿದೆ.

ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ಗ್ರಾಮದೇವತೆ ಜಾತ್ರೆಯನ್ನು ಸಡಗರ ಸಂಭ್ರಮದಿಂದ ಹಮ್ಮಿಕೊಂಡಿದ್ದಾರೆ. 9 ವರ್ಷಗಳ ಬಳಿಕ ನಡೆಯುತ್ತಿರುವುದರಿಂದ ಪ್ರತಿಯೊಬ್ಬರು ಭಾಗಿಯಾಗುತ್ತಿದ್ದಾರೆ ಎಂದು ಗ್ರಾಮದ ಹಿರಿಯರಾದ ವೆಂಕನಗೌಡ ಹಿರೇಗೌಡ್ರ ತಿಳಿಸಿದ್ದಾರೆ.