ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ ಗ್ರಾಪಂ ಸದಸ್ಯ

| Published : Oct 09 2024, 01:40 AM IST

ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿಸಿದ ಗ್ರಾಪಂ ಸದಸ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಟೂರು ಗ್ರಾಮ, ಗೇರಹಳ್ಳಿ ಗ್ರಾಮದವರೆಗೂ ರಸ್ತೆಯು ಹದಗೆಟ್ಟುಹೋಗಿತ್ತು. ರಸ್ತೆಯಲ್ಲಿ ಎಲ್ಲಿ ನೋಡಿದರೂ ಗುಂಡುಗಳೇ ಕಾಣುತ್ತಿದ್ದವು. ಮಳೆ ಬಂದರೆ ರಸ್ತೆ ಯಾವುದು ಹಳ್ಳ- ದಿನ್ನೆ ಯಾವುದು ಗೊತ್ತಾಗದಂತೆ ದ್ವಿಚಕ್ರ ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿತ್ತು. ಗ್ರಾಪಂ ಸದಸ್ಯ ಮುಷ್ಟೂರು ಶ್ರೀಧರ್ ಸ್ವಂತ ಹಣದಿಂದ ರಸ್ತೆ ಮಾಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದಿಂದ ಗ್ರಾಮಕ್ಕೆ ಬರುವ ಮುಖ್ಯ ರಸ್ತೆ ಸರಿಪಡಿಸಲು ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಗ್ರಾಮಸ್ಥರೊಂದಿಗೆ ಸೇರಿ ಕಳೆದ ಒಂದೂವರೆ ವರ್ಷದಿಂದ ಅಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿಯವರೆಗೂ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಿದರೂ ದುರಸ್ತಿ ಮಾಡಿಸದ ಕಾರಣ ಬೇಸತ್ತು ತಾನೇ ಸ್ವಂತ ಖರ್ಚಿನಲ್ಲಿ ಜಲ್ಲಿ ವೆಟ್ ಮಿಕ್ಸ್ ಹಾಕಿಸಿ ರಸ್ತೆ ಸರಿಪಡಿಸಿದ ಘಟನೆ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನಡೆದಿದೆ.

ಗುಂಡಿಗಳಿಂದ ತುಂಬಿದ ರಸ್ತೆ

ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ಮುಸ್ಟೂರು ಗ್ರಾಮವು ತಿಪ್ಪೇನ ಹಳ್ಳಿ ಗ್ರಾಮ ಪಂಚಾಯತಿಗೆ ಸೇರಿದ್ದು, ನಗರದಿಂದ ಮುಸ್ಟೂರು ಗ್ರಾಮ, ಗೇರಹಳ್ಳಿ ಗ್ರಾಮದವರೆಗೂ ರಸ್ತೆಯು ಹದಗೆಟ್ಟುಹೋಗಿತ್ತು. ರಸ್ತೆಯಲ್ಲಿ ಎಲ್ಲಿ ನೋಡಿದರೂ ಗುಂಡುಗಳೇ ಕಾಣುತ್ತಿದ್ದವು. ಮಳೆ ಬಂದರೆ ರಸ್ತೆ ಯಾವುದು ಹಳ್ಳ- ದಿನ್ನೆ ಯಾವುದು ಗೊತ್ತಾಗದಂತೆ ದ್ವಿಚಕ್ರ ವಾಹನ ಸವಾರರು ಪರದಾಡುವುದು ಸಾಮಾನ್ಯವಾಗಿತ್ತು.

ಈ ಕುರಿತು ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಇದರಿಂದ ಬೇಸತ್ತ ಪಂಚಾಯ್ತಿ ಸದಸ್ಯ ಮುಷ್ಟೂರು ಶ್ರೀಧರ್ ತಮ್ಮ ಸ್ವಂತ ಹಣದಿಂದ ಜಲ್ಲಿ ವೆಟ್ ಮಿಕ್ಸ್ ಹಾಕಿಸಿ ರಸ್ತೆ ಸರಿಪಡಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ

ಈ ಬಾರಿ ಸ್ವಂತ ಖರ್ಚಿನಲ್ಲಿ ಐದಾರು ಟಿಪ್ಪರ್ ಜಲ್ಲಿ ವೆಟ್ ಮಿಕ್ಸ್ ತರಿಸಿ ಎರಡು ಜೆಸಿಬಿಗಳಲ್ಲಿ ಹಾಕಿಸಿ ದುರಸ್ತಿ ಕಾರ್ಯ ನಡೆಸಿದ್ದು, ವಿನಾಯಕ ಕಲ್ಯಾಣನಾಯಕ ಮಂಟಪದಿಂದ ಮುಸ್ಟೂರು ವರೆಗೆ ಸುಮಾರು ಒಂದು ಕಿಮೀ ತಾತ್ಕಾಲಿಕ ರಸ್ತೆ ರಿಪೇರಿ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದೇನೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರವಾಗಿ ಶಾಶ್ವತವಾಗಿ ರಸ್ತೆ ದುರಸ್ತಿ ಮಾಡಿಕೊಡಲಿ ಎಂದು ಶ್ರೀಧರ್‌ ತಿಳಿಸಿದರು.