ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ನರೇಗಾ ಯೋಜನೆಯಡಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗ್ರಾಪಂ ಸದಸ್ಯರಿಗೆ ಸಲಹೆ ನೀಡಿದರು.ತಾಲೂಕಿನ ರಾಘವಾಪುರ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ೧೫ ನೇ ಹಣಕಾಸು ಯೋಜನೆಯಲ್ಲಿ ೫ ಲಕ್ಷ ರು.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು. ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಕೆಲಸಗಳಿಗೂ ಶಾಸಕರನ್ನೇ ನೆಚ್ಚಿಕೊಳ್ಳದೇ ನರೇಗಾ ಯೋಜನೆಯಲ್ಲಿ ತಾಲೂಕಿನ ಶಾಲಾ ಕಾಲೇಜು, ಅಂಗನವಾಡಿ, ಆಸ್ಪತ್ರೆಗೆ ಸುತ್ತು ಗೋಡೆ ಸೇರಿದಂತೆ ಇನ್ನಿತರ ಕೆಲಸ ಮಾಡಬೇಕು ಎಂದರು. ಗ್ರಾಪಂ ಕಟ್ಟಡ, ಬಸ್ ಶೆಲ್ಟರ್, ಗ್ರಂಥಾಲಯ ಕಟ್ಟಡ, ಅಡುಗೆ ಮನೆ, ಸಮುದಾಯ ಭವನ, ಸೇತುವೆ ಕೇಳಿದ್ದೀರಿ ಆ ಕೆಲಸಕ್ಕೆ ಶಾಸಕರ ಅನುದಾನ ಅಥವಾ ವಿಶೇಷ ಅನುದಾನ ನೀಡುತ್ತೇನೆ ಸಣ್ಣ ಪುಟ್ಟ ಕೆಲಸಗಳನ್ನು ನರೇಗಾದಲ್ಲಿ ಮಾಡಿ ಎಂದರು.
ಗ್ರಾಪಂ ೧೫ ನೇ ಹಣಕಾಸು ಯೋಜನೆಯಲ್ಲಿ ೫ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಿದ್ದೀರಿ. ಇದು ಒಳ್ಳೆಯ ಕೆಲಸ. ಮೈಸೂರು-ಊಟಿ ಹೆದ್ದಾರಿ ಬದಿ ಇರುವ ಕಾರಣ ಪ್ರವಾಸಿಗರು, ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ಅನುಕೂಲವಾಗಲಿದೆ. ರಾಘವಾಪುರ ಗ್ರಾಮಸ್ಥರು ಪಶು ಆಸ್ಪತ್ರೆ ಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ವರದಿ ಪಡೆದು ಪಶು ಆಸ್ಪತ್ರೆ ಮಂಜೂರು ಮಾಡಿಸುವ ಸಂಬಂಧ ಪ್ರತಿಕ್ರಿಸಿಸುವೆ ಎಂದರು.ರಾಘವಾಪುರ ಗ್ರಾಪಂ ಅಧ್ಯಕ್ಷ ಉಲ್ಲಾಸ್, ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಮ್ಮ, ಮೈಮುಲ್ ಮಾಜಿ ಅಧ್ಯಕ್ಷ ಎನ್.ಮಹದೇವಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಎಸ್.ಮಹೇಶ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ತಾಪಂ ಇಒ ಷಣ್ಮುಗ, ಹಾಪ್‌ಕಾಮ್ಸ್ ನೂತನ ನಿರ್ದೇಶಕ ಎಂ.ನಾಗೇಶ್, ಗ್ರಾಪಂ ಮಾಜಿ ಅಧ್ಯಕ್ಷ ತಗ್ಗಲೂರು ತಮ್ಮಯ್ಯಪ್ಪ, ಸುಧಾರಾಣಿ, ಗ್ರಾಪಂ ಸದಸ್ಯರಾದ ಗೋವಿಂದರಾಜು, ಗೋವಿಂದು, ಗೌಡಿಕೆ ರಾಜಪ್ಪ, ಮುಖಂಡರಾದ ಬಿ.ಸಿ.ಮಹದೇವಸ್ವಾಮಿ,ಗೋಪಾಲ,ಬೆಟ್ಟದಮಾದಹಳ್ಳಿ ಮಲ್ಲು,ಅಗತಗೌಡನಹಳ್ಳಿ ಸಂತೋಷ,ರಾಘವಾಪುರ ಮಹೇಶ್,ಗ್ರಾಪಂ ಪಿಡಿಒ ರವಿ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.