ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ಭದ್ರಾ ಅಭಯಾರಣ್ಯ ವ್ಯಾಪ್ತಿಯಮೂರು ಕಾಡಾನೆಗಳು ಮಾತ್ರ ಈ ಗುಂಪನ್ನು ಬಿಟ್ಟು ಅಭಯಾರಣ್ಯದ ಆಸುಪಾಸಿನ ತಣಿಗೆಬೈಲು, ದೂಪದಖಾನ್, ತಿಮ್ಮನಬೈಲು, ಹುಣಸೆಬೈಲು, ನಂದಿಬಟ್ಟಲು, ಜೈಪುರ, ಸಿದ್ದರಹಳ್ಳಿ,ಜಮ್ಮಾಪುರ, ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಬೆಳೆದ ಭತ್ತ, ರಾಗಿ, ಜೋಳ ತರಕಾರಿ ಬೆಳೆಗಳು ಮತ್ತು ಅಡಕೆ ತೆಂಗು ಬಾಳೆ ತಿಂದು ತುಳಿದು ಹಾಳುಗೆಡವುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಉಂಟಾಗುತ್ತಿದೆ ಕೂಡಲೇ ಈ ಮೂರು ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಈ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಅಭಯಾರಣ್ಯದಲ್ಲಿ 35 ರಿಂದ 40 ರಷ್ಟು ಸಂಖ್ಯೆ ಕಾಡಾನೆಗಳಿದ್ದು ಇವುಗಳಲ್ಲಿ ಮೂರು ಕಾಡಾನೆಗಳನ್ನು ಹೊರತುಪಡಿಸಿ ಬೇರೆಲ್ಲ ಕಾಡಾನೆಗಳು ಅಭಯಾರಣ್ಯದ ಸರಹದ್ದಿನಲ್ಲೇ ಇದ್ದರೂ ಗ್ರಾಮಗಳ ಸುತ್ತಲೇ ಅಲೆದಾಡುತ್ತಿರುವ ಮೂರು ಕಾಡಾನೆ ಗಳು ರೈತರ ಜಮೀನುಗಳಿಗೆ ನುಗ್ಗಿ ಕೃಷಿ ನೀರಾವರಿಗಾಗಿ ರೈತರು ಅಳವಡಿಸಿರುವ ಕೊಳವೆಬಾವಿ, ತೆರೆದ ಬಾವಿಗಳಿಂದ ನೀರೆತ್ತಲು ಅಳವಡಿಸಲಾದ ಮೋಟಾರು ಪೈಪು, ಪಂಪುಗಳು ಸೇರಿದಂತೆ ತೋಟಗಳಲ್ಲಿ ನಿರ್ಮಿಸಿದ ಗುಡಿಸಲುಗಳನ್ನು ಕೆಡವಿ ಕಿತ್ತು ಹಾಕುತ್ತಿರುವುದರಿಂದ ಬೆಳೆ ನಷ್ಟದ ಜೊತೆಗೆ ಲಕ್ಷಾಂತರ ಮೌಲ್ಯದ ಕೃಷಿ ಪರಿಕರಗಳನ್ನು ಹಾಳುಗೆಡ ವುತ್ತಿರುವುದಲ್ಲದೆ. ರೈತರನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು, ಈ ಭಾಗದ ಗ್ರಾಮಸ್ಥರು ಭಯದಿಂದಲೇ ಜೀವನ ನಡೆಸಬೇಕಾಗಿದೆ ಈ ಭಾಗದ ಗ್ರಾಮಸ್ಥರು ದೂರಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ಕಿರಣ್‌ಬಾಬು, ಗಿರೀಶ್‌ಬಾಬು, ನೀಲಕಂಠೇಗೌಡ, ಎನ್‌ಎಸ್ ಹನುಮಂತಪ್ಪ, ಲಕ್ಷ್ಮಮ್ಮ ಗೋವಿಂದೇಗೌಡ, ಉಮೇಶ್, ಹೇಮಂತ್, ಕೆ ಮಂಜುನಾಥ್, ಮುಂತಾದವರು ಹಾಜರಿದ್ದು ಭದ್ರಾ ಅಭಯಾರಣ್ಯ ತಣಿಗೆಬೈಲು ವಲಯದ ಉಪ ವಲಯ ಅರಣ್ಯಅಧಿಕಾರಿ ಕೆ. ಪಿ, ಪ್ರದೀಪ್ ಮೂಲಕ ಅರಣ್ಯಇಲಾಖೆ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.9ಕೆಟಿಆರ್.ಕೆ.10ಃಭದ್ರಾ ಅಭಯಾರಣ್ಯ ತಣಿಗೆಬೈಲು ವಲಯದ ಮೂರು ಕಾಡಾನೆಗಳನ್ನು ಹಿಡಿದು ಬೇರೆಡೆಗೆ ಸ್ಥಳಾಂತರಸಲು ಅರಣ್ಯಾಧಿಕಾರಿಗಳಿಗೆ ಈ ಭಾಗದ ಗ್ರಾಮಸ್ಥರು ಮತ್ತು ರೈತರು ಭದ್ರಾಅಭಯಾರಣ್ಯ ತಣಿಗೆಬೈಲು ವಲಯದ ಉಪ ವಲಯ ಅರಣ್ಯಅಧಿಕಾರಿ ಕೆ ಪಿ ಪ್ರದೀಪ್ ಮೂಲಕ ಮನವಿ ಪತ್ರ ಸಲ್ಲಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))