ರಸ್ತೆ ದುರಸ್ತಿಗೆ ಗ್ರಾಮಸ್ಥರ ಶ್ರಮದಾನ

| Published : Oct 24 2025, 01:00 AM IST

ರಸ್ತೆ ದುರಸ್ತಿಗೆ ಗ್ರಾಮಸ್ಥರ ಶ್ರಮದಾನ
Share this Article
  • FB
  • TW
  • Linkdin
  • Email

ಸಾರಾಂಶ

ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ರಸ್ತೆಯ ದುರಸ್ತಿಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಕೈಗೊಂಡರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳ್ಳಡ, ಪೆಬ್ಬಾಟಂಡ ಕುಟುಂಬಸ್ಥರ ರಸ್ತೆಯ ದುರಸ್ತಿಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಕೈಗೊಂಡರು.

ಪಾರಾಣೆ ಬೇತ್ರಿ ಸಂಪರ್ಕ ರಸ್ತೆಯಿಂದ ಮಳ್ಳಡ , ಪೆಬ್ಬಾಟಂಡ ಕುಟುಂಬಸ್ಥರ ಮನೆಗಾಗಿ ಬಲಮುರಿಯ ನಾಲ್ಕು ರಸ್ತೆ ಸಂಪರ್ಕಿಸುವ ರಸ್ತೆ ದುರಸ್ತಿ ಕಾಣದೆ ತೀವ್ರ ಹದಗೆಟ್ಟಿದ್ದು ಇತ್ತ ಯಾರು ಗಮನ ಹರಿಸದ ಕಾರಣ ದುರಸ್ತಿಯನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ಕೈಗೊಂಡರು.

ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಗುಂಡಿ ಗಳಾಗಿದ್ದು ಸಂಚಾರ ಕಷ್ಟಕರವಾಗಿತ್ತು. ಗ್ರಾಮಸ್ಥರು ಸೇರಿ ರಸ್ತೆ ಬದಿಯಲ್ಲಿ ಆವರಿಸಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿ , ಗುಂಡಿಮುಚ್ಚಿ ಶ್ರಮದಾನ ಮೂಲಕ ಗ್ರಾಮಸ್ಥರ ತಾವೇ ಸಮಸ್ಯೆಯನ್ನು ಬಗೆಹರಿಸಿಕೊಂಡರು.

ಶ್ರಮದಾನದಲ್ಲಿ ಗ್ರಾಮಸ್ಥರಾದ ಬೈರಿಕುಂದಿರ ಅಯ್ಯಪ್ಪ, ಸೋಮಯ್ಯ , ಮನು, ವಿನು ಮಳ್ಳಡ ಚಿಣ್ಣಪ್ಪ, ಸುಬ್ಬಯ್ಯ, ತಿಮ್ಮಯ್ಯ, ಗಣೇಶ, ಪೊನ್ನಚನ ಸೋಮಣ್ಣ, ಹರೀಶ್, ರೋಹನ್ ಇತರರು ಪಾಲ್ಗೊಂಡಿದ್ದರು.