ಮಳೆರಾಯನಿಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ

| Published : May 01 2024, 01:21 AM IST

ಮಳೆರಾಯನಿಗಾಗಿ ಪ್ರಾರ್ಥಿಸಿ ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಇಲ್ಲದ ಪರಿಣಾಮ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಅಹಕಾರ ಉಂಟಾಗಿದೆ, ಯುಗಾದಿ ಹಿಂದೆ-ಮುಂದೆ ದಿನಗಳಲ್ಲಿ ಮಳೆಯಾಗಬೇಕಿತ್ತು, ಆದರ, ಯುಗಾದಿ ಮುಗಿದು ತಿಂಗಳು ಕಳೆಯುತ್ತಿದ್ದರೂ ಮಳೆ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆರಾಯನನ್ನು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಮಳೆ ಬಂದು ರೈತರನ್ನು ಉಳಿಸಬೇಕೆಂಬುವುದು ಗ್ರಾಮಸ್ಥರ ಆಶಯ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ತಳಗವಾದಿ ಗ್ರಾಮಸ್ಥರು ಮಳೆರಾಯನಿಗೆ ಪ್ರಾರ್ಥಿಸಿ ಗ್ರಾಮದಲ್ಲಿ ಪೂಜೆ ಸಲ್ಲಿಸಿದರು.

ಮಣ್ಣಿನಿಂದ ಮಳೆರಾಯನ ಮೂರ್ತಿಯನ್ನು ನಿರ್ಮಿಸಿ ಹರಸಿನ ಕುಂಕುಮದಿಂದ ಲೇಪನ ಮಾಡಿ ತಮಟೆ ವಾದ್ಯಗಳೊಂದಿಗೆ ಪ್ರತಿಯೊಂದು ಮನೆಗಳಿಗೆ ಮೆರವಣಿಗೆ ಮೂಲಕ ತೆರಳಿದರು. ಈ ವೇಳೆ ಜನರು ಉಯ್ಯೋ.. ಉಯ್ಯೋ.. ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆ ತೋಟಕ್ಕೆ ನೀರಿಲ್ಲ ಎಂಬ ಘೋಷಣೆ ಕೂಗಿದರು.

ಈ ವೇಳೆ ಮಹಿಳೆಯರು ಮಳೆರಾಯನನ್ನು ತಲೆ ಮೇಲೆ ಹೊತ್ತಿದ್ದ ಯುವಕನಿಗೆ ಬಿಂದಿಗೆಯಿಂದ ನೀರು ಸುರಿದು ಪೂಜೆ ಸಲ್ಲಿಸಿ ಮಳೆಗಾಗಿ ದೇವರಿಗೆ ಮೊರೆ ಇಟ್ಟರು. ಇದಕ್ಕೂ ಮುನ್ನ ಗ್ರಾಮದ ಉಮಾ ಮಹೇಶ್ವರಿ ದೇವಸ್ವಾನದ ಆವರಣದಲ್ಲಿ ಮಳೆರಾಯಯನ್ನು ಪ್ರತಿಸ್ಥಾಪಿಸಲಾಯಿತು. ಮೆರೆವಣಿಗೆ ಜೊತೆಯಲ್ಲಿಯೇ ಮನೆಗಳಿಂದ ಸಂಗ್ರಹಿಸಿದ ದವಸ ಧಾನ್ಯಗಳಿಂದ ಅನ್ನ ಸಂತರ್ಪಣೆ ನೆರೆವೇರಿಸಲಾಯಿತು.

ಮಳೆ ಇಲ್ಲದ ಪರಿಣಾಮ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಅಹಕಾರ ಉಂಟಾಗಿದೆ, ಯುಗಾದಿ ಹಿಂದೆ-ಮುಂದೆ ದಿನಗಳಲ್ಲಿ ಮಳೆಯಾಗಬೇಕಿತ್ತು, ಆದರ, ಯುಗಾದಿ ಮುಗಿದು ತಿಂಗಳು ಕಳೆಯುತ್ತಿದ್ದರೂ ಮಳೆ ಬಾರದ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆರಾಯನನ್ನು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಮಳೆ ಬಂದು ರೈತರನ್ನು ಉಳಿಸಬೇಕೆಂಬುವುದು ಗ್ರಾಮಸ್ಥರ ಆಶಯವಾಗಿದೆ ಎಂದು ತಳಗವಾದಿ ಗ್ರಾಮಸ್ಥರು ತಿಳಿಸಿದ್ದಾರೆ.

ಬರಗಾಲದಲ್ಲಿ ಜನರು, ರೈತರ ಸಮಸ್ಯೆಗೆ ಸ್ಪಂದಿಸದ ಸರ್ಕಾರ: ಶಾಸಕ ಎಚ್ .ಟಿ.ಮಂಜು ಆಕ್ರೋಶ

ಕೆ.ಆರ್.ಪೇಟೆ:ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದರೂ ರೈತರು, ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ವಹಿಸದ ರಾಜ್ಯ ಸರ್ಕಾರ ಲೋಕಸಭೆ ಚುನಾವಣೆಯನ್ನೇ ಗುರಿಯಾಗಿಸಿಕೊಂಡಿದೆ ಎಂದು ಶಾಸಕ ಎಚ್.ಟಿ.ಮಂಜು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ ಎನ್ನುವ ಕಾಂಗ್ರೆಸ್ಸಿಗರು ಹೇಮೆ ನೀರನ್ನು ಹರಿಸುವಲ್ಲಿ ಮಂಡ್ಯ ಜಿಲ್ಲೆಯ ರೈತರಿಗೆ ತಾರತಮ್ಯ ಮಾಡಿದ್ದಾರೆ ಎಂದು ದೂರಿದರು.ಹೇಮಾವತಿ ಜಲಾಶಯದಲ್ಲಿ ಒಂದಷ್ಟು ನೀರಿನ ಸಂಗ್ರಹವಿದ್ದರೂ ಅದನ್ನು ಕಾಲುವೆಗಳಲ್ಲಿ ಹರಿಸಿ ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ಅಳಿದುಳಿದ ರೈತರ ಬೆಳೆಗಳ ಸಂರಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ಯಾವುದೇ ಜನಪ್ರತಿನಿಧಿಗಳು ಧ್ವನಿಯೆತ್ತಿಲ್ಲ ಎಂದು ಕಿಡಿಕಾರಿದರು.

ಅತಿವೃಷ್ಟಿಯಿಂದ ತಾಲೂಕಿನಲ್ಲಿ ಕೆಲವು ಕೆರೆ-ಕಟ್ಟೆಗಳು ಈ ಹಿಂದೆ ಒಡೆದು ಹೋಗಿವೆ. ಇವುಗಳ ಪುನರ್ ನಿರ್ಮಾಣಕ್ಕೂ ಸರ್ಕಾರ ಅಗತ್ಯ ಅನುದಾನ ನೀಡದೆ ಪಕ್ಷ ರಾಜಕಾರಣ ಮಾಡುತ್ತಿದೆ. ಇದರಿಂದ ತಾಲೂಕಿನ ಜನರು ಸರ್ಕಾರದ ವಿರುದ್ಧ ಮತ ಚಲಾಯಿಸಿದ್ದಾರೆ ಎಂದರು.