ಸಾರ್ಯಗ್ರಾಮದ ಕೂಸ್ಗಲ್ ನಲ್ಲಿ ಗಿರಿ ಹತ್ತಿ ಪೂಜೆ ಸಲ್ಲಿಸಿದ ಗ್ರಾಮಸ್ಥರು

| Published : Nov 06 2024, 12:31 AM IST

ಸಾರ್ಯಗ್ರಾಮದ ಕೂಸ್ಗಲ್ ನಲ್ಲಿ ಗಿರಿ ಹತ್ತಿ ಪೂಜೆ ಸಲ್ಲಿಸಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ: ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಸಾರ್ಯ ಗ್ರಾಮದ ಕೂಸ್ಗಲ್ ನಲ್ಲಿ ಪ್ರತಿ ವರ್ಷದ ಸಂಪ್ರದಾಯದಂತೆ ದೀಪಾವಳಿಯ ಮಾರನೆ ದಿನ ಭಾನುವಾರ ರಂಗನಾಥಸ್ವಾಮಿ ದೇವಸ್ಥಾನದ ಸಮಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಸಮೀಪದ ಗಿರಿ ಹತ್ತಿ ಅಲ್ಲಿನ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಬಂದಿದ್ದಾರೆ.

ಬಹಳ ವರ್ಷಗಳಿಂದ ನಡೆದುಕೊಂಡ ಬಂದ ಈ ಸಂಪ್ರದಾಯವನ್ನು ದೀವಾಪಳಿ ಮಾರನೆ ದಿನ ಕೂಸ್ಗಲ್‌ ರಂಗನಾಥಸ್ವಾಮಿ, ಚೆನ್ನಮ್ಮದೇವಿ ದೇವಸ್ಥಾನಕ್ಕೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ದೇವಸ್ಥಾನದ ಸಮಿತಿಯವರು, ಗ್ರಾಮಸ್ಥರು ಪೂಜೆ ಸಲ್ಲಿಸುವರು. ಮಧ್ಯಾಹ್ನ 4ರ ನಂತರ 2 ಕಿ.ಮೀ.ದೂರದ ಅಂದಾಜು 1 ಸಾವಿರ ಅಡಿ ಎತ್ತರದ ಗಿರಿ ಏರಿದ್ದಾರೆ.

ಅಲ್ಲಿ ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಹುಲಿ ಗುದ್ದು,ಮಾಳಿಂಗಮ್ಮ ದೇವರಿದ್ದು ಅಲ್ಲಿ ಪೂಜೆ ಸಲ್ಲಿಸಿದರು. ನಂತರ ಗಿರಿ ಮೇಲೆ ಇರುವ ಕಲ್ಲಿನ 35 ಅಡಿ ಎತ್ತರ ಇರುವ ಕಂಬದ ಮೇಲೆ ಮಡಿಕೆಯಲ್ಲಿ ದೀಪ ಹಚ್ಚಿದರು. ರಾತ್ರಿ ಇಡೀ ದೀಪ ಉರಿಯುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹುಲಿ ಗುದ್ದುವಿನಲ್ಲಿ ಗುಹೆ ಇದ್ದು ಅಲ್ಲಿಂದ ಕೊಪ್ಪ ತಾಲೂಕಿನ ಸಿದ್ದರಮಠ ದೇವಸ್ಥಾನಕ್ಕೆ ಸುರಂಗ ಮಾರ್ಗವಿದೆ ಎಂದು ಗ್ರಾಮಸ್ಥರ ನಂಬಿಕೆಯಾಗಿದೆ .ಹುಲಿ ಗುದ್ದೆಯಲ್ಲಿ ದೀಪ ಹಚ್ಚಿದರೆ ಹುಲಿಗಳು ಹಸುವನ್ನು ತಿನ್ನದೆ ಹಸುಗಳು ಆರೋಗ್ಯದಿಂದ ಕಾಡಿನಲ್ಲಿ ಮೇಯ್ದುಕೊಂಡು ಬರುತ್ತದೆ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.