ಶ್ರೀರಾಮಮಂದಿರ ಜಾಗ ಒತ್ತುವರಿ ಆರೋಪ ಗ್ರಾಮಸ್ಥರ ಪ್ರತಿಭಟನೆ

| Published : Jan 26 2025, 01:30 AM IST

ಸಾರಾಂಶ

ಬೀಚನಕುಪ್ಪೆ ಗ್ರಾಮದ ಕುಮಾರ್ ತಮ್ಮ ಸ್ವತ್ತಿನ ಅಳತೆ ಮೀರಿ ಶ್ರೀರಾಮಮಂದಿರಕ್ಕೆ ಖಾತೆಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನವೀಕರಣ ಮಾಡುತ್ತಿದ್ದಾರೆ. ಜೊತೆಗೆ ಗ್ರಾಪಂ ವತಿಯಿಂದಲೂ ಸಹ ಕಟ್ಟಡ ತೆರವಿಗೆ ಸೂಚನೆ ನೀಡಿದ್ದರೂ ಕಾನೂನು ಉಲ್ಲಂಘಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ವ್ಯಕ್ತಿಯೊಬ್ಬ ಗ್ರಾಮದ ಶ್ರೀರಾಮಮಂದಿರ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಬೀಚನಕುಪ್ಪೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗ್ರಾಮದ ಕುಮಾರ್ ತಮ್ಮ ಸ್ವತ್ತಿನ ಅಳತೆ ಮೀರಿ ಶ್ರೀರಾಮಮಂದಿರಕ್ಕೆ ಖಾತೆಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಂಡು ಮನೆ ನವೀಕರಣ ಮಾಡುತ್ತಿದ್ದಾರೆ. ಜೊತೆಗೆ ಗ್ರಾಪಂ ವತಿಯಿಂದಲೂ ಸಹ ಕಟ್ಟಡ ತೆರವಿಗೆ ಸೂಚನೆ ನೀಡಿದ್ದರೂ ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಗ್ರಾಪಂ ಸದಸ್ಯ ಹರೀಶ್ ಕುಮಾರ್ ಮತ್ತು ಮುಖಂಡ ಬೀಚನಕುಪ್ಪೆ ಮಧುಸೂಧನ್ ನೇತೃತ್ವದಲ್ಲಿ ಗ್ರಾಮಸ್ಥರು ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು.

ಶ್ರೀರಾಮಮಂದಿರಕ್ಕೆ 20 ವರ್ಷದ ಹಿಂದೆ 16 ಮತ್ತು 20 ಅಡಿ ಖಾತೆಯಾಗಿದೆ. ಅದರ ಪಕ್ಕದಲ್ಲಿನ ಮನೆ ಮಾಲೀಕ ಕುಮಾರ್ ರಾಮಮಂದಿರ ಜಾಗ ಒತ್ತುವರಿ ಮಾಡಿದ್ದಾರೆ. ಇದರ ಬಗ್ಗೆ ಹುಲಿಕೆರೆ ಗ್ರಾಪಂಗೆ ದೂರು ನೀಡಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡಿ ಕುಮಾರ್ ಒತ್ತುವರಿ ಮಾಡಿರುವ ಜಾಗ ತೆರವು ಗೊಳಿಸುವಂತೆ ಗುರುತು ಮಾಡಿದ್ದರು.

ಆದರೆ, ಈಗ ಏಕಾಏಕಿ ತಮ್ಮ ಮನೆಗೆ ರಾಮಮಂದಿರ ಜಾಗ ಸೇರಿಸಿ ಕಟ್ಟಡ ನಿರ್ಮಿಸುತ್ತಿದ್ದು ಇದರ ವಿರುದ್ದ ನಾವು ನಡೆಸುತ್ತಿದ್ದೇವೆ ಎಂದು ಗ್ರಾಮದ ಮಧುಸೂದನ್ ತಿಳಿಸಿದರು.

ಈ ಪ್ರತಿಭಟನೆಯಲ್ಲಿ ರಾಜಣ್ಣ, ರವಿ, ವಿಷಕಂಠ, ಜಯರಾಂ, ಮಾದೇಶ್, ಸುಂದರಮ್ಮ, ಗೌರಿ, ಕವಿತಾ, ತಾಯಮ್ಮ, ಶ್ವೇತಾ ಸೇರಿದಂತೆ ಇತರರು ಇದ್ದರು.

ಕೃಷಿ ವಿವಿ ಸ್ಥಾಪನೆ: ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಅಭಿನಂದನೆ

ಮಂಡ್ಯ: ಕೃಷಿ ವಿಶ್ವವಿದ್ಯಾಲಯಕ್ಕೆ ಅನುಮೋದನೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣರಾಗಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಜಿಲ್ಲೆಯ ಪರವಾಗಿ ಅಭಿನಂದಿಸುವುದಾಗಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಆರ್.ಮಂಜುನಾಥ್‌ಗೌಡ ತಿಳಿಸಿದರು. ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಸಚಿವರು ಜಿಲ್ಲೆಯ ಮೈಷುಗರ್ ಸಕ್ಕರೆ ಕಾರ್ಖಾನೆಯ ಪುನಶ್ಚೇತನಗೊಳಿಸಿ, ವಿಜೃಂಭಣೆಯ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿದ್ದಲ್ಲದೆ ಜಿಲ್ಲೆಯ ಕೃಷಿಕರ ಬಹುದಿನದ ಕನಸಾದ ಕೃಷಿ ವಿಶ್ವವಿದ್ಯಾಲಯವನ್ನು ನನಸು ಮಾಡುವ ಹಂತಕ್ಕೆ ತರಲು ಸಾಕಷ್ಟು ಶ್ರಮ ವಹಿಸಿದ್ದಾರೆ ಎಂದರು. ಮೈಸೂರು ವಿಭಾಗದಲ್ಲಿ ಇದೇ ಮೊದಲ ಕೃಷಿ ವಿಶ್ವವಿದ್ಯಾಲಯವಾಗಲಿದ್ದು, ಸದರಿ ವಿಶ್ವವಿದ್ಯಾಲಯಕ್ಕೆ ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ಹಾಸನ ಕೃಷಿ ಕಾಲೇಜು ಹಾಗೂ ಮೈಸೂರಿನ ತೋಟಗಾರಿಕೆ ಕಾಲೇಜು ಸೇರ್ಪಡೆಗೊಳ್ಳುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಸಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಉಪಾಧ್ಯಕ್ಷ ಜಿ. ಧನಂಜಯ, ಕೆ.ಜಿ.ನಾಗರಾಜ್, ವೆಂಕಟೇಶ್, ಪಿ. ಬಾಲಕೃಷ್ಣ ಗೋಷ್ಠಿಯಲ್ಲಿದ್ದರು.