ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

| Published : Aug 28 2024, 12:49 AM IST

ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಮದ ಹೀರೆಕೆರೆ ಸಮೀಪದ ವಾಸದ ಮನೆಗಳಿಗೆ ತೆರಳುವ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಳೆದ ಹತ್ತರು ವರ್ಷದಿಂದ ಹೀರೆಕೆರೆ ದಂಡೆಯಲ್ಲಿ ಬದಿಯಲ್ಲಿ ಸುಮಾರು ೧೦ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಪ್ರಮುಖ ಉದ್ಯೋಗ ಹೈನುಗಾರಿಕೆಯಾಗಿದೆ. ಬೆಳಿಗ್ಗೆ ಸಂಜೆ ಇಲ್ಲಿಂದ ಹಾಲು ತೆಗೆದುಕೊಂಡು ಡೇರಿಗೆ ಹಾಲು ಹಾಕಲು, ವಿದ್ಯಾರ್ಥಿಗಳು, ಮಕ್ಕಳು ವೃದ್ಧರು ಪರದಾಡುವಂತಾಗಿದೆ. ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೆಸರು ರಸ್ತೆಯಲ್ಲಿ ಸಾಧ್ಯವಾಗುತ್ತಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಹೆಬ್ಬಾಳು ಗ್ರಾಮದ ಹೀರೆಕೆರೆ ಸಮೀಪದ ವಾಸದ ಮನೆಗಳಿಗೆ ತೆರಳುವ ರಸ್ತೆಯನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹೆಬ್ಬಾಳು ಗ್ರಾಮದಲ್ಲಿ ಹೀರೆಕೆರೆ ಸಮೀಪದಲ್ಲಿ ಹತ್ತಕ್ಕೂ ಹೆಚ್ಚಿನ ಮನೆಗಳಿದ್ದು ಮಳೆಗಾಲದಲ್ಲಿ ಕೆಸರು ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಗಮನ ನೀಡಬೇಕು ಎಂದು ಕೆಸರಿನ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲಾ ಇಲಾಖೆಗಳ ವಿರುದ್ಧಕಿಡಿಕಾರಿದರು.

ಈ ಸಂದರ್ಭದಲ್ಲಿ ಹೆಬ್ಬಾಳು ಗ್ರಾಮದ ಮುಖಂಡ ವೇದಮೂರ್ತಿ ಮಾತನಾಡಿ, ಕಳೆದ ಹತ್ತರು ವರ್ಷದಿಂದ ಹೀರೆಕೆರೆ ದಂಡೆಯಲ್ಲಿ ಬದಿಯಲ್ಲಿ ಸುಮಾರು ೧೦ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಲ್ಲಿನ ಪ್ರಮುಖ ಉದ್ಯೋಗ ಹೈನುಗಾರಿಕೆಯಾಗಿದೆ. ಬೆಳಿಗ್ಗೆ ಸಂಜೆ ಇಲ್ಲಿಂದ ಹಾಲು ತೆಗೆದುಕೊಂಡು ಡೇರಿಗೆ ಹಾಲು ಹಾಕಲು, ವಿದ್ಯಾರ್ಥಿಗಳು, ಮಕ್ಕಳು ವೃದ್ಧರು ಪರದಾಡುವಂತಾಗಿದೆ. ವಯೋವೃದ್ಧರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೆಸರು ರಸ್ತೆಯಲ್ಲಿ ಸಾಧ್ಯವಾಗುತ್ತಿಲ್ಲ. ಕಳೆದ ಹತ್ತು ವರ್ಷದಿಂದ ನಮಗೆ ದಾರಿ ಬೇಕು ಎಂದು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ಶಾಸಕರು ಸೇರಿದಂತೆ ಲೋಕಸಭಾ ಸದಸ್ಯರಿಗೆ ದೂರು ನೀಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ನಿತ್ಯ ನರಕಯಾತನೆಯಾಗಿರುವ ಈ ರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹುಲ್ಲೇನಹಳ್ಳಿ ಬಸವರಾಜ್ ಮಾತನಾಡಿ, ಗ್ರಾಮ ಪಂಚಾಯಿತಿಗಳು ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯವನ್ನು ನೀಡಲು ಹಿಂಜರಿಯುತ್ತಿದ್ದಾರೆ. ಇನ್ನು ಜನಪ್ರತಿನಿಧಿಗಳು ಭರವಸೆ ನೀಡಿ ಓಟು ಪಡೆದು ಅಧಿಕಾರಕ್ಕೆ ಬಂದಮೇಲೆ ತಲೆಹಾಕುತ್ತಿಲ್ಲ. ಜನಸಾಮಾನ್ಯರ ಕಷ್ಟಗಳ ಬಗ್ಗೆ ಅವರು ಖುದ್ದು ಭೇಟಿ ನೀಡಿದರೆ ಮಾತ್ರ ತಿಳಿಯುತ್ತದೆ. ಕನಿಷ್ಟ ರಸ್ತೆಗೆ ಕಾಯಕಲ್ಪ ನೀಡಿದ ಇಲಾಖೆಗಳ ನಿರ್ಲಕ್ಷ್ಯ ನಮ್ಮ ದಿಕ್ಕಾರವಿದೆ. ಶೀಘ್ರವೇ ರಸ್ತೆಗೆ ದುರಸ್ತಿ ಮಾಡಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದೊಡ್ಡಬ್ಯಾಡಿಗೆರೆ ಗ್ರಾಮದ ಮುಖಂಡ ಉಮೇಶ್, ಎಪಿಎಂಸಿ ಮಾಜಿ ಸದಸ್ಯ ಆನಂದ ಕುಮಾರ್, ಶಿವಕುಮಾರ್, ಕುಮಾರ್, ಮೋಹನ್‌ ಕುಮಾರ್, ಶಂಕರೇಗೌಡ ಇದ್ದರು.