ಸಾರಾಂಶ
ಚನ್ನಪಟ್ಟಣ: ಗ್ರಾಮದಲ್ಲಿ ಚರಂಡಿಗಳ ಸ್ವಚ್ಛತೆ, ನೀರಿನ ವ್ಯವಸ್ಥೆ, ಬೀದಿ ದೀಪಗಳ ನಿರ್ವಹಣೆ ಸಮಪರ್ಕವಾಗಿಲ್ಲ. ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ರೈತರಿಗೆ ನರೇಗಾ ಯೋಜನೆಯಡಿ ಅವಕಾಶ ಕಲ್ಪಿಸುತ್ತಿಲ್ಲ, ಪ್ರವರ್ಗ ೧ರಲ್ಲಿ ಅನುದಾನವನ್ನು ಬೇಕಾಬಿಟ್ಟಿ ಬಳಸಿಕೊಳ್ಳುತ್ತಿದ್ದು, ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ತಮಗಿಷ್ಟ ಬಂದಂತೆ ವರ್ತಿಸುತ್ತಿದ್ದಾರೆ ಎಂದು ಕೆಲ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಆರೋಪಿಸಿದರು.
ತಗಚಗೆರೆ ಗ್ರಾಪಂ ಮುಂದೆ ಪ್ರತಿಭಟಿಸಿ ಮಾತನಾಡಿ, ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದ್ದರೂ ಗಮನಹರಿಸುತ್ತಿಲ್ಲ. ಚರಂಡಿಗಳು ಕಟ್ಟಿ ನಿಂತಿದ್ದರೂ ಸ್ವಚ್ಛಗೊಳಿಸುತ್ತಿಲ್ಲ. ಪಂಚಾಯಿತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅಮೃತ ಯೋಜನೆಯ ಅನುದಾನ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಜಲಜೀವನ್ ಯೋಜನೆಯ ಕಾಮಗಾರಿಯನ್ನು ಬೇಕಾಬಿಟ್ಟಿ ನಿರ್ವಹಿಸುತ್ತಿದ್ದು, ರಸ್ತೆಗಳನ್ನು ಅಗೆದು ಪೈಪ್ ಹಾಗೂ ನಲ್ಲಿಗಳನ್ನು ಸರಿಯಾಗಿ ಅಳವಡಿಸಿಲ್ಲ. ಕೆಲ ಸದಸ್ಯರ ಕೈಗೊಂಬೆಯಂತೆ ವರ್ತಿಸುತ್ತಾ, ಪಂಚಾಯಿತಿಯ ಸಮಗ್ರ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರಿಂದ ಗ್ರಾಪಂ ಅಧ್ಯಕ್ಷೆ ಗೀತಾ ಹಾಗೂ ಪಿಡಿಒ ಶ್ವೇತಾ ಅಹವಾಲು ಆಲಿಸಿ ಉತ್ತರಿಸಲು ಮುಂದಾದರೂ ಇದಕ್ಕೆ ಒಪ್ಪದ ಪ್ರತಿಭಟನಾನಿರತರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪಟ್ಟುಹಿಡಿದರು.ಪರಿಹರಿಸುವ ಭರವಸೆ:
ಈ ವೇಳೆ ಸ್ಥಳಕ್ಕೆ ಆಗಮಸಿದ ಅಕ್ಷರ ದಾಸೋಹದ ಅಧಿಕಾರಿ ಸಿದ್ದರಾಜು, ತಾಪಂ ಇಒ ಸಿಎಂ ಕಾರ್ಯಕ್ರಮಕ್ಕೆ ಹೋಗಿದ್ದು, ನಿಮ್ಮ ಸಮಸ್ಯೆಗಳನ್ನು ಇಒ ಗಮನಕ್ಕೆ ತರಲಾಗುವುದು. ಪಂಚಾಯಿತಿ ಮಟ್ಟದ ಸಮಸ್ಯೆಗಳನ್ನು ಇಲ್ಲೇ ಪರಿಹರಿಸಿ, ಉಳಿದವು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಿಂಗಳೊಳಗೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಪ್ರಸನ್ನ, ಗ್ರಾಪಂ ಸದಸ್ಯರಾದ ಶಿವರಾಮು, ಭುವನೇಶ್ವರಿ, ಮಾಜಿ ಅಧ್ಯಕ್ಷ ಶಿವು, ಅಂದಾನಯ್ಯ, ವೆಂಕಟಸ್ವಾಮಿ, ಪವನ್‌ಕುಮಾರ್, ನವೀನ್, ಯೋಗ ಇತರರು ಪಾಲ್ಗೂಂಡಿದ್ದರು.
ಬಾಕ್ಸ್.............ಗ್ರಾಪಂ ಕಚೇರಿಗೆ ಹಸು ನುಗ್ಗಿಸಲು ಯತ್ನಿಸಿದ ರೈತ!
ದನದ ಕೊಟ್ಟಿಗೆ ನಿರ್ಮಾಣಕ್ಕೆ ಹತ್ತಾರು ಬಾರಿ ಅರ್ಜಿ ಸಲ್ಲಿಸಿದ್ದರೂ ಅನುದಾನ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರೊಬ್ಬರು ತಮ್ಮ ಹಸುವನ್ನು ಗ್ರಾಪಂ ಕಚೇರಿಯೊಳಗೆ ಕಟ್ಟಲು ಪ್ರಯತ್ನಿಸಿದರು. ಆದ್ದರಿಂದ ಹಸುವನ್ನು ಗ್ರಾಮ ಪಂಚಾಯತಿಯಲ್ಲಿ ಕಟ್ಟುತ್ತೇನೆ ಎಂದು ಹಸುವನ್ನು ಒಳಗೆ ನುಗ್ಗಿಸಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರೈತನನ್ನು ತಡೆದು ಸಮಾಧಾನಪಡಿಸಿದರು.ಪೋಟೊ೨೧ಸಿಪಿಟಿ೨:
ತಗಚಗೆರೆ ಗ್ರಾಪಂ ಎದುರು ಗ್ರಾಪಂ ಸದಸ್ಯರು ಹಾಗೂ ರೈತರು ಪ್ರತಿಭಟನೆ ವೇಳೆ ಗ್ರಾಪಂ ಕಚೇರಿಗೆ ಹಸು ನುಗ್ಗಿಸಲು ಯತ್ನಿಸಿದ ರೈತ.