ಸಾರಾಂಶ
ಕುಷ್ಟಗಿ: ತಾಲೂಕಿನ ಮೆತ್ತಿನಾಳ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಮತ್ತು ಸ್ಮಾರ್ಟ ಕ್ಲಾಸ್ ಕೊಠಡಿ, ಅಡುಗೆ ಕೋಣಿಯನ್ನು ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು.
ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಸಮುದಾಯದ ಸಹಕಾರ ಅತ್ಯವಶ್ಯಕವಾಗಿದ್ದು, ಸರ್ಕಾರಿ ಮತ್ತು ಇಲಾಖೆಗಳ ಯೋಜನೆ ಅನುಷ್ಠಾನ ಮಾಡಲು ಅಧಿಕಾರಿಗಳ ಜತೆಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದರು.ಮೆತ್ತಿನಾಳ ಗ್ರಾಮದಲ್ಲಿ ಶಾಲೆಗಾಗಿ ದುಡಿಯುವ ವ್ಯಕ್ತಿಗಳನ್ನು ಕಂಡು ಸಂತೋಷವಾಯಿತು. ಶಾಲಾ ಕೊಠಡಿ ನಿರ್ಮಾಣ ಕಾರ್ಯದಲ್ಲಿ ಸ್ವಯಂ ಆಸಕ್ತಿಯಿಂದ ಕೆಲಸ ಮಾಡಿದ್ದು ಹೆಮ್ಮೆಯ ವಿಷಯ. ಮಕ್ಕಳಿಗೆ ಪಠ್ಯದ ಜತೆಗೆ ಶಾಲಾ ಕೊಠಡಿ, ಆವರಣ,ಉತ್ತಮ ವಾತಾವರಣದಿಂದ ಇರಬೇಕು ಎಂದ ಅವರು, ಈ ಭಾಗದ ಅನೇಕ ಗ್ರಾಮಗಳ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಕಾಲೇಜು ಬೇಡಿಕೆ ಇದ್ದು ಈಗಾಗಲೇ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಮಂಜೂರಾತಿ ಮಾಡಿಸಲು ಶತಪ್ರಯತ್ನ ಪಡುತ್ತೇನೆ ಎಂದರು.
ಬಿಇಒ ಉಮಾದೇವಿ ಬಸಾಪೂರ ಮಾತನಾಡಿ, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಜತೆಗೆ ಗ್ರಾಮಸ್ಥ ಸಹ ಭಾಗಿತ್ವಕ್ಕಾಗಿ ನಮ್ಮೂರ ಶಾಲೆ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಶಾಸಕರ ಸಹಕಾರದಿಂದ ಶಾಲೆಗಳ ಅಭಿವೃದ್ಧಿಗೆ ಪ್ರಸ್ತುತ ಕ್ರೀಯಾ ಯೋಜನೆ ತಯಾರಿಸಿದ್ದು, ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಮಕ್ಕಳಿಗೆ ಪಠ್ಯ ಬೋಧನೆ ಜತೆಗೆ ವಿವಿಧ ಚಟುವಟಿಕೆ ಆಯೋಜಿಸಿ ಕಲಿಕೆಯ ಜ್ಞಾನ ಹೆಚ್ಚಳಕ್ಕೆ ರೂಪರೇಷೆ ಮಾಡಲಾಗುತ್ತಿದೆ. ಆದ್ದರಿಂದ ಸಮುದಾಯ ಸಹಕಾರ ಇದ್ದರೆ, ಸರ್ಕಾರದ ಯೋಜನೆಗಳು ಯಶಸ್ವಿಯಾಗಲು ಸಾಧ್ಯ ಎಂದರು.ಈ ವೇಳೆ ಮುಖಂಡ ಬಾಳಪ್ಪ ಪೂಜಾರ ಸಂಗನಾಳ, ದುರಗೇಶ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕನಕಮ್ಮ, ಎಸ್ಡಿಎಂಸಿ ಅಧ್ಯಕ್ಷ ದೊಡ್ಡಪ್ಪ ಗುಂಜಳ್ಳಿ, ಶಿಕ್ಷಣ ಸಂಯೋಜಕ ರಾಘಪ್ಪ, ಹನಮಂತ ಕುರಿ, ಛತ್ರಪ್ಪ ಕಂಬಳಿ, ಮರಿಯಮ್ಮ, ಸಾಗರ ಬೇರಿ, ಮಂಜುನಾಥ ಜೂಲಕುಂಟಿ, ಗುತ್ತೆದಾರ ಆದಪ್ಪ ಉಳಾಗಡ್ಡಿ, ಹನಮಂತ ತೊಗರಿ, ಪಿಡಿಓ ಶಿವಪುತ್ರಪ್ಪ, ನಿರ್ಮಿತಿ ಕೇಂದ್ರದ ಆದೇಶ, ಸಂಗನಬಸಯ್ಯ ಸ್ವಾಮಿ, ಮುಖ್ಯ ಶಿಕ್ಷಕ ಕಲ್ಲೋಲಪ್ಪ ಮತ್ತು ಸ್ಥಳಿಯ ಗ್ರಾಪಂ ಸದಸ್ಯರು, ಎಸ್ಡಿಎಂಸಿ ಸದಸ್ಯರು, ಶಿಕ್ಷಕರು, ಗ್ರಾಮದ ಪ್ರಮುಖರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))