ಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರ ಪೈಕಿ ಒಬ್ಬರಾದ ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದ, ಬೆಂಗಳೂರಿನ ಹೈಕೋರ್ಟ್ ವಕೀಲರಾಗಿದ್ದ ಕೆ.ಸುಧೀರ್ ಪಾರ್ಥೀವ ಶರೀರವನ್ನು ಸೋಮವಾರ ಗ್ರಾಮಕ್ಕೆ ತಂದು, ಅಂತ್ಯಕ್ರಿಯೆ ನೆರವೇರಿಸಲಾಯತು.
- ಮುಗಿಲು ಮುಟ್ಟಿದ ಕುಟುಂಬದವರ ರೋಧನ । ಅ.30ರಂದು ಉತ್ತರಾಖಂಡ ಕಾಫ್ಟರ್ ದುರಂತಲ್ಲಿ ಪೈಲಟ್ ಸೇರಿ ಆರು ಜನ ಸಾವು ಪ್ರಕರಣ
- ರಾಜನಹಳ್ಳಿ ಶ್ರೀ, ರಾಜಕೀಯ ನಾಯಕರು, ಜನರಿಂದ ಅಂತಿಮದರ್ಶನ । ಮಲ್ಲೇಶಪ್ಪ, ಸರಸ್ವತಿ ದಂಪತಿ ಪುತ್ರ ಕೆ.ಸುಧೀರ್- - -
ಕನ್ನಡಪ್ರಭ ವಾರ್ತೆ ದಾವಣಗೆರೆಉತ್ತರಾಖಂಡದಲ್ಲಿ ಸಂಭವಿಸಿದ ಹೆಲಿಕಾಫ್ಟರ್ ದುರಂತದಲ್ಲಿ ಮೃತಪಟ್ಟ ಐವರು ಕನ್ನಡಿಗರ ಪೈಕಿ ಒಬ್ಬರಾದ ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮದ, ಬೆಂಗಳೂರಿನ ಹೈಕೋರ್ಟ್ ವಕೀಲರಾಗಿದ್ದ ಕೆ.ಸುಧೀರ್ ಪಾರ್ಥೀವ ಶರೀರವನ್ನು ಸೋಮವಾರ ಗ್ರಾಮಕ್ಕೆ ತಂದು, ಅಂತ್ಯಕ್ರಿಯೆ ನೆರವೇರಿಸಲಾಯತು.
ತ್ಯಾವಣಿಗೆ ಗ್ರಾಮದ ವಾಸಿ, ನಿವೃತ್ತ ನ್ಯಾಯಾಧೀಶ ಮಲ್ಲೇಶಪ್ಪ, ಸರಸ್ವತಿ ದಂಪತಿ ಪುತ್ರ ಕೆ.ಸುಧೀರ್ ಹೈಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿ ಇಡೀ ಕುಟುಂಬ ವಾಸಿಸುತ್ತಿತ್ತು. ಸ್ನೇಹಿತರೊಂದಿಗೆ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ವೇಳೆ ಉತ್ತರಾಖಂಡದಲ್ಲಿ ಹೆಲಿಕಾಫ್ಟರ್ ದುರಂತದಲ್ಲಿ ಕೆ.ಸುಧೀರ್ ಸೇರಿದಂತೆ ಆರು ಜನ ಅ.30ರಂದು ಜೋಶಿ ಮಠ ಕಣಿವೆಯಲ್ಲಿ ಹೆಲಿಕಾಫ್ಟರ್ ಪತನಗೊಂಡು, ಸಾವನ್ನಪ್ಪಿದ್ದರು.ತೀವ್ರ ಹುಡುಕಾಟದ ನಂತರ ಕಣಿವೆಯಲ್ಲಿ ಕೆ.ಸುಧೀರ್ ಸೇರಿದಂತೆ ಆರೂ ಜನರ ಪಾರ್ಥೀವ ಶರೀರಗಳನ್ನು ಗುರುತಿಸಲಾಗಿತ್ತು. ಮಂಗಳವಾರ ಕೆ.ಸುಧೀರ್ ಪಾರ್ಥೀವವನ್ನು ಸ್ವಗ್ರಾಮ ತ್ಯಾವಣಿಗೆಗೆ ತರುತ್ತಿದ್ದಂತೆ ಕುಟುಂಬಸ್ಥರು, ಬಂಧು-ಬಳಗ, ಸ್ನೇಹಿತರು, ಹಿತೈಷಿಗಳ ಆಕ್ರಂದನ ಮುಗಿಲುಮುಟ್ಟಿತ್ತು. ಮೃತರ ಮನೆ ಬಳಿ ಸಾವಿರಾರು ಜನ ಸೇರಿದ್ದರು. ನಂತರ ಮೃತರ ಸ್ವಂತ ಜಮೀನಿನಲ್ಲಿ ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಸುಧೀರ್ ಅವರ ಸ್ವಂತ ಜಮೀನಿನಲ್ಲಿ ಪುತ್ರಿ, ಎಂಬಿಬಿಎಸ್ ವಿದ್ಯಾರ್ಥಿನಿ ಕೆ.ಎಸ್.ಹಂಸಿಕಾ ಅಂತಿಮ ವಿಧಿ ವಿಧಾನ ನೆರವೇರಿಸಿದರು. ರಾಜನಹಳ್ಳಿಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಸಮ್ಮುಖ ಅಂತ್ಯಕ್ರಿಯೆ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಬಂಧು-ಬಳಗ, ಸ್ನೇಹಿತರು, ಹಿತೈಷಿಗಳು, ಗ್ರಾಮಸ್ಥರು ಮೃತ ಸುಧೀರ್ ಅವರ ಅಂತಿಮ ದರ್ಶನ ಪಡೆದರು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಜಿಪಂ ಮಾಜಿ ಸದಸ್ಯ ಪಿ.ಸಿ.ಗೋವಿಂದ ಸ್ವಾಮಿ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು.- - -
(ಬಾಕ್ಸ್-1)* ಹಲ್ಲಿನ ಕ್ಯಾಪ್‌ನಿಂದ ಮೃತ ಸುಧೀರ್ ಬಾಡಿ ಪತ್ತೆ!
ಉತ್ತರಾಖಂಡ ಜೋಶಿ ಮಠ ಕಣಿವೆಯಲ್ಲಿ ಹೆಲಿಕಾಫ್ಟರ್ ಪತನಗೊಂಡು ಮೃತಪಟ್ಟ ಪೈಲಟ್ ಸೇರಿದಂತೆ 6 ಜನರ ಪೈಕಿ ಐವರು ಕನ್ನಡಿಗರು. ಈ ಪೈಕಿ ತ್ಯಾವಣಿಗೆ ಗ್ರಾಮದವರಾದ, ಬೆಂಗಳೂರಿನ ಹೈಕೋರ್ಟ್ ವಕೀಲರಾಗಿದ್ದ ಕೆ.ಸುಧೀರ್ ಪಾರ್ಥೀವ ಶರೀರವನ್ನು ಸುಧೀರ್ ಹಲ್ಲಿಗೆ ಅಳವಡಿಸಿದ್ದ ಕ್ಯಾಪ್‌ನಿಂದ ಪತ್ತೆ ಹಚ್ಚಲಾಗಿದೆ. ಡಿಎನ್‌ಎ ಪರೀಕ್ಷೆ ನಡೆಸುವ ಅಗತ್ಯ ಬೀಳಲಿಲ್ಲ ಎಂದು ಮೃತರ ಸಂಬಂಧಿ ಜ್ಞಾನೇಶ್ ತಿಳಿಸಿದರು.ಸುಧೀರ್ ಅವರ ಸಹೋದರ ದಂತವೈದ್ಯರಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಸುಧೀರ್ ತಮ್ಮ ಹಲ್ಲಿಗೆ ಕ್ಯಾಪ್ ಹಾಕಿಸಿದ್ದರು. ದುರಂತದಲ್ಲಿ ದೇಹದ ಶೇ.85ರಷ್ಟು ಭಾಗ ಸುಟ್ಟುಹೋಗಿತ್ತು. ಕೊರಳಲಿದ್ದ ಚಿನ್ನದ ಸರ, ಕೈಯಲ್ಲಿದ್ದ ಉಂಗುರ ಹಾಗೂ ಪರ್ಸ್ ಪತ್ತೆಯಾಗಿತ್ತು. ಅಷ್ಟಾದರೂ ಮತ್ತಷ್ಟು ಗುರುತುಗಳ ಅವಶ್ಯಕತೆ ಇತ್ತು. ಹಲ್ಲಿಗೆ ಅಳವಡಿಸಿದ್ದ ಕ್ಯಾಪ್‌ನಿಂದಾಗಿ ಮೃತ ಸುಧೀರ್ ಶವವನ್ನು ಗುರುತು ಹಿಡಿದೆವು ಎಂದು ಹೇಳಿದರು.
- - -(ಬಾಕ್ಸ್-2)
* ಸಂಸ್ಥೆ ವಿರುದ್ಧ ಎಫ್ಐಆರ್ ದಾಖಲು: ಜ್ಞಾನೇಶ್- ಹೆಲಿಕಾಫ್ಟರ್ ಅಸಮರ್ಪಕ ನಿರ್ವಹಣೆಗೆ ಆಕ್ರೋಶ
ದಾವಣಗೆರೆ: ಉತ್ತರಾಖಂಡದ ಹೆಲಿಕಾಫ್ಟರ್ ದುರಂತದಲ್ಲಿ ಐವರು ಕನ್ನಡಿಗರು ಸಾವಿನ ಪ್ರಕರಣದ ಹಿನ್ನೆಲೆಯಲ್ಲಿ ಹೆಲಿಕಾಫ್ಟರ್ ನಿರ್ವಹಣೆ ಮಾಡುತ್ತಿದ್ದ ಸಂಸ್ಥೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ ಎಂದು ತ್ಯಾವಣಿಗೆ ಗ್ರಾಮದ ಮೃತ ಕೆ.ಸುಧೀರ್ ಸಂಬಂಧಿ ಜ್ಞಾನೇಶ್ ಹೇಳಿದ್ದಾರೆ.ತ್ಯಾವಣಿಗೆ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೈಲಟ್ ಸೇರಿದಂತೆ ಆರೂ ಜನ ಸಾವನ್ನಪ್ಪಿದ್ದು, ಈ ದುರಂತಕ್ಕೆ ಹೆಲಿಕಾಫ್ಟರನ್ನು ಸೂಕ್ತವಾಗಿ ನಿರ್ವಹಣೆ ಮಾಡದಿರುವುದೇ ಕಾರಣ. ಅಲ್ಲಿರುವ ಎಲ್ಲವೂ ಸಿಂಗಲ್ ಎಂಜಿನ್ ಹೆಲಿಕಾಫ್ಟರ್‌ಗಳಾಗಿವೆ ಎಂದರು.
ಸಿಂಗಲ್ ಎಂಜಿನ್ ಹೊಂದಿರುವ ಆ ಹೆಲಿಕಾಫ್ಟರ್‌ಗಳನ್ನು ಸಮರ್ಪಕವಾಗಿ ನಿರ್ವಹಣೆಯನ್ನೇ ಮಾಡುತ್ತಿಲ್ಲ. ಅಲ್ಲಿನ ಸಂಸದ ಶ್ರೇಯಸ್ ಪಟೇಲ್ ಸಹ ಘಟನಾ ಸ್ಥಳಕ್ಕೆ ಬಂದಿದ್ದರು. ಈ ಬಗ್ಗೆ ಲೋಕಸಭಾ ಸ್ಪೀಕರ್ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಸಂಸತ್ತಿನಲ್ಲೂ ಈ ವಿಚಾರವನ್ನು ಪ್ರಸ್ತಾಪ ಮಾಡುವುದಾಗಿ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು ಎಂದು ತಿಳಿಸಿದರು.- - -
(ಬಾಕ್ಸ್-3)* ನನ್ನ ಮಗ ಪುನೀತ್ ರಾಜಕುಮಾರ ಇದ್ದಂತೆ
- ನೆರವು ಬಯಸಿ ಬಂದವರಿಗೆ ಸ್ಪಂದಿಸುತ್ತಿದ್ದ ಮಗನ ನೆನೆದು ತಂದೆ ಭಾವುಕದಾವಣಗೆರೆ: ಹೆಲಿಕಾಫ್ಟರನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಕಾಫ್ಟರ್ ಪತನಕ್ಕೆ ಕಾರಣವೆಂದು ಹೇಳುತ್ತಿದ್ದು, ಸೂಕ್ತವಾಗಿ ಹೆಲಿಕಾಫ್ಟರ್ ನಿರ್ವಹಣೆ ಮಾಡದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೃತ ವಕೀಲ ಕೆ.ಸುಧೀರ್ ತಂದೆ, ನಿವೃತ್ತ ನ್ಯಾಯಾಧೀಶ ಕೆ.ಮಲ್ಲೇಶಪ್ಪ ಒತ್ತಾಯಿಸಿದ್ದಾರೆ.
ತ್ಯಾವಣಿಗೆ ಗ್ರಾಮದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮ್ಮ ಮಗನ ಸಾವಿನ ನಂತರ ಸೇರಿದ್ದ ಜನಸಾಗರ ಕಂಡು ಭಾವುಕರಾದ ಅವರು, ಕಾಫ್ಟರ್ ಸರಿಯಾಗಿ ನಿರ್ವಹಣೆ ಮಾಡದಿರುವುದೇ ದುರ್ಘಟನೆಗೆ ಕಾರಣವೆನ್ನುತ್ತಿದ್ದಾರೆ ಎಂದರು.ನನ್ನ ಮಗ ಇಷ್ಟೊಂದು ಸಹಾಯ ಮಾಡಿದ್ದ ಎಂಬುದೇ ನಮಗ್ಯಾರಿಗೂ ಗೊತ್ತಿಲ್ಲ. ನನ್ನ ಮಗ ಒಂದು ರೀತಿ ಪುನೀತ್ ರಾಜಕುಮಾರ ಇದ್ದ ಹಾಗೆ. 49 ವರ್ಷದ ನನ್ನ ಮಗ ಸಹ ನನ್ನ ರೀತಿ ನ್ಯಾಯಾಧೀಶ ಆಗಬೇಕೆಂಬ ಕನಸು ಕಂಡಿದ್ದ. ಊರಿನವರು ಯಾರೇ ಬೆಂಗಳೂರಿಗೆ ಬಂದರೂ, ಸಹಾಯ ಮಾಡುತ್ತಿದ್ದ ಎಂದು ತಿಳಿಸಿದರು.
ಸುಧೀರನಿಗೆ ಇಬ್ಬರು ಮಕ್ಕಳಿದ್ದು, ಮಗಳು ಎಂಬಿಬಿಎಸ್ ಓದುತ್ತಿದ್ದಾಳೆ. ಇಂತಹ ವಯಸ್ಸಿನಲ್ಲಿ ನಾನು ಮಗನ ಅಂತ್ಯಕ್ರಿಯೆ ಮಾಡಬೇಕಾಗಿ ಬಂದಿದೆಯೆಂದು ಕಣ್ಣೀರಿಟ್ಟ ಮಲ್ಲೇಶಪ್ಪ, ನನ್ನ ಮೊಮ್ಮಕ್ಕಳು ನನ್ನ ಕಣ್ಣುಗಳಿದ್ದಂತೆ. ನಾನು ಒಳ್ಳೆಯ ರೀತಿಯೇ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತೇನೆಂದು ಭಾವುಕರಾದರು.- - -
(ಕೋಟ್)ಸುಮಾರು 60 ಚಾಪರ್‌ಗಳನ್ನು ಇಟ್ಟುಕೊಂಡಿರುವ ಸಂಸ್ಥೆಯು ಉತ್ತರಾಖಂಡದಲ್ಲಿ ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಉತ್ತರಾಖಂಡ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಹೆಲಿಕಾಫ್ಟರ್ ನಿರ್ವಹಣೆ ಮಾಡುತ್ತಿದ್ದ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿ.
- ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ, ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ.- - -
-2ಕೆಡಿವಿಜಿ20: ಉತ್ತರಾಖಂಡದ ಜೋಶಿ ಕಣಿವೆಯಲ್ಲಿ ಹೆಲಿಕಾಫ್ಟರ್ ಪತನಗೊಂಡು ಮೃತಪಟ್ಟ 6 ಜನರ ಪೈಕಿ ಓರ್ವರಾದ ವಕೀಲ ಕೆ.ಸುಧೀರ್ ಪಾರ್ಥಿವ ಶರೀರವನ್ನು ಚನ್ನಗಿರಿ ತಾ. ತ್ಯಾವಣಿಗೆ ಗ್ರಾಮಕ್ಕೆ ತಂದಾಗ ಕುಟುಂಬಸ್ಥರು, ಸ್ನೇಹಿತರು, ಗ್ರಾಮಸ್ಥರ ರೋದನ ಮುಗಿಲು ಮುಟ್ಟಿತ್ತು.-2ಕೆಡಿವಿಜಿ27: ಕೆ.ಸುಧೀರ್, ಮೃತ ವಕೀಲ.