ಸಾರಾಂಶ
ಮಹದೇವಪುರ ಹಾಗೂ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಜೊತೆಗೆ ಮೈಸೂರಿನಿಂದ- ಮಂಡ್ಯ ಹೋಗುವ ಮಾರ್ಗ ಮಧ್ಯ ಅರಕೆರೆ, ಕೊಡಿಯಾಲ, ಮಂಡ್ಯದ ಕೊಪ್ಪಲು, ಮಹದೇವಪುರ ನಂತರ ಮೈಸೂರು ಸೇರುವ ಮುಖ್ಯ ರಸ್ತೆ ಇದಾಗಿದೆ. ಗುಂಡಿ ಬಿದ್ದ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಗ್ರಾಪಂ ಹಾಗೂ ಲೋಕೋಪಯೋಗಿ ಇಲಾಖೆಗಳು ಮುಂದಾಗಿಲ್ಲ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮಹದೇವಪುರ ಗ್ರಾಮದ ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಸಾಮಾಜಿಕ ಜಾಲತಾಣಗಳ ಮೂಲಕ ಸ್ಥಳೀಯ ಶಾಸಕರನ್ನು ಒತ್ತಾಯಿಸಿದ್ದಾರೆ.ಮಹದೇವಪುರ ಗ್ರಾಮದ ಬೋರೆ ಬಡಾವಣೆ ಬಳಿ ರಸ್ತೆ ಹಳ್ಳ ಬಿದ್ದು ಮಳೆ ನೀರು ಗುಂಡಿಯಲ್ಲಿ ತುಂಬಿಕೊಂಡು ವಾಹನಗಳು ಸೇರಿದಂತೆ ಸಾರ್ವಜನಿಕರು ಓಡಾಟ ನಡೆಸದಂತೆ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹದೇವಪುರ ಹಾಗೂ ಮೈಸೂರು ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಜೊತೆಗೆ ಮೈಸೂರಿನಿಂದ- ಮಂಡ್ಯ ಹೋಗುವ ಮಾರ್ಗ ಮಧ್ಯ ಅರಕೆರೆ, ಕೊಡಿಯಾಲ, ಮಂಡ್ಯದ ಕೊಪ್ಪಲು, ಮಹದೇವಪುರ ನಂತರ ಮೈಸೂರು ಸೇರುವ ಮುಖ್ಯ ರಸ್ತೆ ಇದಾಗಿದೆ. ಗುಂಡಿ ಬಿದ್ದ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಗ್ರಾಪಂ ಹಾಗೂ ಲೋಕೋಪಯೋಗಿ ಇಲಾಖೆಗಳು ಮುಂದಾಗಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.ಮಳೆ ಬಂದರೆ ಗುಂಡಿಬಿದ್ದ ಹಳ್ಳ ನೀರು ತುಂಬಿ ರಸ್ತೆಯಲ್ಲ ಕೆಸರು ಮಯವಾಗುತ್ತದೆ. ಹಲವು ದಿನಗಳ ಹಿಂದೆ ರಸ್ತೆ ದುರಸ್ತಿಗೊಳಿಸುವಂತೆ ಸ್ಥಳೀಯ ಶಾಸಕರ ಗಮನಕ್ಕೂ ತಂದರೂ ಗುಂಡಿ ಮುಚ್ಚಿಸುವ ಕೆಲಸ ಆಗಿಲ್ಲ. ಗ್ರಾಮವನ್ನು ಸ್ಥಳೀಯ ಶಾಸಕರು ನಿರ್ಲಕ್ಷಿಸಿರುವಂತೆ ಕಾಣುತ್ತಿದೆ ಎಂದು ಗ್ರಾಮದ ರೈತ ಮುಖಂಡ ಎಂ.ವಿ.ಕೃಷ್ಣ ಆರೋಪಿಸಿದ್ದಾರೆ.
ಮಾಧ್ಯಮಗಳು ಗುಂಡಿ ಬಿದ್ದ ರಸ್ತೆ ಕುರಿತಾಗಿ ವರದಿ ಮಾಡಿ, ಬೆಳಕು ಚಲ್ಲಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಸ್ಥಳೀಯ ಜನರು ರಸ್ತೆಯಲ್ಲಿ ಓಡಾಟ ನಡೆಸುವುದೇ ಕಷ್ಟಕರವಾಗಿದೆ. ಹಾಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಅವರು ದೂರಿದ್ದಾರೆ.ತಾಲೂಕು ಆಡಳಿತ ಕೂಡ ಈ ಬಗ್ಗೆ ಗಮನ ಹರಿಸದಿರುವುರಿಂದ ಮುಂದಿನ ದಿನಗಳಲ್ಲಿ ತಹಸೀಲ್ದಾರ್ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.